Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
💛

ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಲು ಲೇಖನದ ಕೆಳಭಾಗದಲ್ಲಿ UPI ಮೂಲಕ ಕಾಣಿಕೆ ನೀಡಿ!

State News

ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಯತ್ನ ಸಕ್ಸಸ್: ಹೊಸನಗರ, ಸಾಗರ ಬರಪೀಡಿತವೆಂದು ಸರ್ಕಾರ ಘೋಷಣೆ

ಬೆಂಗಳೂರು: ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಿರಂತರ ಕಾಳಜಿ ಹಾಗೂ ಸರ್ಕಾರದ ಮಟ್ಟದಲ್ಲಿ ನಡೆಸಿದ ಸತತ ಪ್ರಯತ್ನಕ್ಕೆ ಮಹತ್ವದ ಯಶಸ್ಸು ದೊರೆತಿದೆ. ಮಲೆನಾಡು ಭಾಗದ ಸಾಗರ ಹಾಗೂ ಹೊಸನಗರ ತಾಲ್ಲೂಕುಗಳನ್ನು 2026ರ ಮುಂಗಾರು (ಖಾರೀಫ್) ಋತುವಿನ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದ ಶಾಸಕರು:

ಮಲೆನಾಡು ವ್ಯಾಪ್ತಿಯ ಸಾಗರ ಮತ್ತು ಹೊಸನಗರ ಭಾಗದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ತೀವ್ರ ಬರ ಪರಿಸ್ಥಿತಿ ತಲೆದೋರಿತ್ತು. ಈ ಗಂಭೀರ ಪರಿಸ್ಥಿತಿಯನ್ನು ವಿವರಿಸಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ದಿನಾಂಕ 29-09-2026 ರಂದು ಸರ್ಕಾರಕ್ಕೆ ವಿವರವಾದ ಪತ್ರ ಬರೆದಿದ್ದರು.

ಜೂನ್ 1 ರಿಂದ ಸೆಪ್ಟೆಂಬರ್ ಅಂತ್ಯದವರೆಗೆ ವಾಡಿಕೆಯಂತೆ 2129.3 ಮಿ.ಮೀ ಮಳೆಯಾಗಬೇಕಿದ್ದ ಜಾಗದಲ್ಲಿ ಕೇವಲ 1106.3 ಮಿ.ಮೀ ಮಳೆಯಾಗಿದ್ದು, ಶೇಕಡಾ 48 ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಅಂಕಿ-ಅಂಶಗಳ ಸಹಿತ ಶಾಸಕರು ಗಮನಕ್ಕೆ ತಂದಿದ್ದರು.

news_1791976134_0_182.webp

ಮಳೆ ಅಭಾವದಿಂದಾಗಿ ಬಹುತೇಕ ಕಡೆ ಬಿತ್ತನೆ ಸಾಧ್ಯವಾಗಿಲ್ಲ, ಬಿತ್ತನೆಯಾದ ಕಡೆಗಳಲ್ಲಿ ಬೆಳೆ ಒಣಗಿ ಹೋಗಿ ರೈತರು ಕಂಗಾಲಾಗಿದ್ದಾರೆ ಹಾಗೂ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಭಾರಿ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ, ಎರಡೂ ತಾಲ್ಲೂಕುಗಳನ್ನು ತುರ್ತಾಗಿ ಬರಪೀಡಿತ ಎಂದು ಘೋಷಿಸುವಂತೆ ಬಲವಾಗಿ ಶಿಫಾರಸು ಮಾಡಿದ್ದರು.

ಕಂದಾಯ ಇಲಾಖೆಯಿಂದ ಅಧಿಕೃತ ಆದೇಶ:

ಶಾಸಕರ ಮನವಿ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ವೈಜ್ಞಾನಿಕ ವರದಿ, ಜೊತೆಗೆ ಗ್ರಾಮ ಮಟ್ಟದಲ್ಲಿ ನಡೆಸಿದ ‘ಗ್ರೌಂಡ್ ಟ್ರೂತಿಂಗ್’ ಸಮೀಕ್ಷೆಯನ್ನು ಪರಿಗಣಿಸಿದ ಕಂದಾಯ ಇಲಾಖೆಯು (ವಿಪತ್ತು ನಿರ್ವಹಣೆ), ದಿನಾಂಕ 14-10-2026 ರಂದು ನೂತನ ಅಧಿಸೂಚನೆ ಹೊರಡಿಸಿದೆ.

ಐದನೇ ಹಂತದ ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಘೋಷಿಸಲಾದ 9 ತಾಲ್ಲೂಕುಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಮಧ್ಯಮ ಪ್ರಮಾಣದ (Moderate) ಬರಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ.

news_1791967879_0_417.webp

 

news_1791967879_1_641.webp

 

news_1791967880_2_714.webp

ಪರಿಹಾರ ಕಾಮಗಾರಿಗಳಿಗೆ ಚಾಲನೆ:

ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಮುಂದಿನ ಆರು ತಿಂಗಳ ಕಾಲ ಜಾರಿಯಲ್ಲಿರಲಿದೆ. ಎಸ್.ಡಿ.ಆರ್.ಎಫ್ (SDRF) ನಿಯಮಾವಳಿಗಳ ಪ್ರಕಾರ ತಕ್ಷಣವೇ ಬರ ಪರಿಹಾರ ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅಧಿಕಾರ ನೀಡಿದೆ. ಅಲ್ಲದೆ, ಜಂಟಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಶೀಘ್ರವೇ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವಂತೆಯೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮುತುವರ್ಜಿಯಿಂದಾಗಿ ಸರ್ಕಾರದ ಅಧಿಸೂಚನೆ ಹೊರಬಿದ್ದಿದ್ದು, ಮಳೆಯಿಲ್ಲದೆ ಸಂಕಷ್ಟದಲ್ಲಿದ್ದ ಸಾಗರ ಮತ್ತು ಹೊಸನಗರ ಭಾಗದ ರೈತರಿಗೆ ಸರ್ಕಾರದಿಂದ ಬರ ಪರಿಹಾರ ದೊರೆಯುವ ಆಶಾಭಾವನೆ ಮೂಡಿಸಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...

ಮಾಧ್ಯಮ ಬೆಂಬಲಿಸಿ / Support Local Journalism

ನಿಮ್ಮ ಬೆಂಬಲ ಸ್ವತಂತ್ರ ಪತ್ರಿಕೋದ್ಯಮವನ್ನು ಜೀವಂತವಾಗಿರಿಸುತ್ತದೆ. Scan & Pay directly via PhonePe, GPay or Paytm.

0% Gateway Commission — Money goes 100% directly into publisher bank account.
Scan with Any UPI App
Scan QR Code to Support News via UPI
Pre-filled: ₹10.00
UPI ID: khushihost1@ibl
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆಯ ಹಿತ್ತಲಲ್ಲಿ ಬೃಹತ್ ಹೆಬ್ಬಾವು ಪತ್ತೆ | WATCH VIDEOರಷ್ಯಾ ಸೇನೆಗೆ ಸೇರಿದ ಭಾರತೀಯರೆಷ್ಟು? ಎಷ್ಟು ಮಂದಿ ಸಾವು, ಎಷ್ಟು ಜನ ನಾಪತ್ತೆ? ಸುಪ್ರೀಂಕೋರ್ಟ್‌ಗೆ ಕೇಂದ್ರದ ಮಾಹಿತಿಭಾರತದಲ್ಲಿ CJP ಪ್ರತಿಭಟನೆಗೆ ಅಮೆರಿಕದಿಂದ ಹಣಕಾಸು ನೆರವು ? ಗಾಯಕಿ ಮೇರಿ ಮಿಲ್ಬೆನ್‌ ಗಂಭೀರ ಆರೋಪ!ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆಕಬ್ಬು ಬೆಳೆಗಾರರ ಬೇಡಿಕೆ ಪರಿಶೀಲನೆಗೆ ಕೇಂದ್ರದ ಮಹತ್ವದ ಕ್ರಮ: ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆಹಬ್ಬದ ಹೊತ್ತಲ್ಲೇ ರೈಲ್ವೆ ನೌಕರರಿಗೆ ಬಂಪರ್ ಕೊಡುಗೆ: 78 ದಿನಗಳ ಬೋನಸ್ ಗೆ ಮೋದಿ ಸಂಪುಟ ಅನುಮೋದನೆದೇಶವನ್ನೇ ಬೆಚ್ಚಿಬೀಳಿಸಿದ್ದ ಮೀರತ್ ‘ನೀಲಿ ಡ್ರಮ್ ಹತ್ಯೆ ಪ್ರಕರಣ’: ಪತ್ನಿ, ಪ್ರಿಯಕರನಿಗೆ ಮರಣದಂಡನೆಕರ್ನಾಟಕದಲ್ಲಿ ಹಿಂಗಾರು ಮಳೆ ನಿರೀಕ್ಷೆ: ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚಿನ ಎಚ್ಚರಿಕೆ; IMD ಮುನ್ಸೂಚನೆ ಏನು?15,000 ಲಂಚ ಪಡೆಯುತ್ತಿದ್ದಾಗಲೇ ಹೆಸ್ಕಾಂ ಅಧಿಕಾರಿ, ಗುತ್ತಿಗೆದಾರ ಲೋಕಾಯುಕ್ತ ಬಲೆಗೆBREAKING: ಜೆಡಿಎಸ್ ಸೋಶಿಯಲ್ ಮೀಡಿಯಾ ತಂಡದ ಯುವಕ ಪೊಲೀಸರು ವಶಕ್ಕೆ: HDK ಕಿಡಿ