ಪಾಲಕ್ಕಾಡ್: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋಗೆ ಹಂದಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕಿ ಸಾವನ್ನಪ್ಪಿದ್ದಾರೆ. ಆಟೋ ಚಾಲಕಿ ವಕ್ಕಲ ಮೂಲದ ವಿಜಿಶಾ (35) ಮೃತರು. ಇಂದು ಬೆಳಗ್ಗೆ 8 ಗಂಟೆಗೆ ಅಪಘಾತ ಸಂಭವಿಸಿದೆ.
https://bcsuddi.com/%e0%b2%86%e0%b2%a8%e0%b3%8d-%e0%b2%b2%e0%b3%88%e0%b2%a8%e0%b3%8d-%e0%b2%97%e0%b3%87%e0%b2%ae%e0%b2%bf%e0%b2%82%e0%b2%97%e0%b3%8d-%e0%b2%b5%e0%b2%82%e0%b2%9a%e0%b2%a8%e0%b3%86%e0%b2%97%e0%b3%86/
ಓಡಮ್ತೋಡ್ ಕಡೆಯಿಂದ ಶಾಲಾ ಮಕ್ಕಳೊಂದಿಗೆ ಬರುತ್ತಿದ್ದ ಆಟೋಗೆ ಕರಿಂಗಾಯಂ ಚರ್ಚ್ ಬಳಿ ಹಂದಿ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆಟೋದಲ್ಲಿದ್ದ ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಂಗಳಮಡಮ್‌ನಲ್ಲಿರುವ ಹೆಲ್ತ್ ವಿಷನ್ ಮೆಡಿಕಲ್ ಸೆಂಟರ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.