E-PAPER
17 Nov 2026, 12:24:21 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಾಲೆಗೆ ಹೋದ ಮೊದಲ ದಿನವೇ ಅಪಘಾತಕ್ಕೆ ಬಲಿಯಾದ ಹಸುಳೆ

ನಾಗನೂರಿನ ಸಮರ್ಥ ಶಾಲೆಯ ನಿರ್ಲಕ್ಷ್ಯಕ್ಕೆ ಹಸುಳೆ ಬಲಿ

ಮೂಡಲಗಿ-14 : ಅಪ್ಪ ಅಮ್ಮನ ಕನಸಿನಂತೆ ಶಾಲೆಗೆ ಹೋದ ಮೊದಲದಿನವೇ ಮುಗ್ಧ ಬಾಲಕ ಶಾಲಾ ವಾಹನದ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದು ತಂದೆ ತಾಯಿಯ ಮುತ್ತಾಗಿದ್ದ ಮುತ್ತು ಮುಗಳಖೋಡ ಎಂಬ ಬಾಲಕ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ.

ಶಾಲೆಯ ಬಸ್ ಇಳಿದ ತಕ್ಷಣ ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿ ದಾಟುತ್ತಿದ್ದ ಬಾಲಕನಿಗೆ ಮೊದಲು ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬಾಲಕನ ಮೇಲೆ ಮತ್ತೊಂದು ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರ್ಲಾಪೂರ ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಜೆ ನಡೆದಿದೆ.

ಬುಧವಾರದಂದು ತನ್ನ ಅಕ್ಕಂದಿರರೊಂದಿಗೆ ಮೊದಲ ಬಾರಿಗೆ ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಹೋಗಿದ್ದ ಮುತ್ತುರಾಜ ಮುಗಳಖೋಡ (5) ಮೃತ ಬಾಲಕ. ಸಂಜೆ ಶಾಲೆಯ ಅನಧಿಕೃತ ವಾಹನವೊಂದರಲ್ಲಿ ಬಂದಿದ್ದ. ಮನೆಯ ಪಕ್ಕದಲ್ಲಿರುವ ಹೆದ್ದಾರಿಯ ಮೇಲೆ ವಾಹನ ನಿಲ್ಲಿಸಿ, ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಮನೆ ತಲುಪಿಸಬೇಕಾದ ಚಾಲಕನ ದಿವ್ಯ ನಿರ್ಲಕ್ಷ್ಯ ಹಾಗೂ ವಾಹನದಲ್ಲಿ ಸಹಾಯಕನೊಬ್ಬ ಇರದೇ ಇದ್ದುದರಿಂದ ವಿದ್ಯಾರ್ಥಿಗಳ ಜೊತೆಗೆ ಬಾಲಕ ಕೂಡಾ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಕೆಳಗೆ ಮೇಲೆ ಬಿದ್ದಿ ವೇಳೆ ಮತ್ತೊಂದು ಅಪರಿಚಿತ ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಕೂಡಲೇ ಶಾಲಾ ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಧಾವಿಸಿದ ರಾಯಬಾಗ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು ಬಾಲಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, 1ನೇ ತರಗತಿಗೆ ದಾಖಲಾತಿ ಮಾಡಲು ಸಿದ್ದರಾಗಿದ್ದೆವು ಆದರೆ ಮೊದಲ ದಿನವೇ ಶಾಲೆಗೆ ಹೋಗಿದ್ದ ಮಗ ಜೀವಂತವಾಗಿ ಮನೆಗೆ ಬರಲಿಲ್ಲ ಎಂದು ದುಃಖ ತಪ್ತರಾಗಿದ್ದಾರೆ.

*ಈ ಡಕೋಟಾ ಮಿನಿ ಬಸ್ಸೇ ಆ ಶಾಲೆಯ ವಾಹನ !* ಎಚ್ಚತ್ತುಕೊಳ್ಳದ ಅಧಿಕಾರಿಗಳು :
ಶಾಲಾ ವಾಹನಗಳಲ್ಲಿ ಬೇಕಾಬಿಟ್ಟಿಯಾಗಿ ಮಕ್ಕಳನ್ನು ಕರೆದುಕೊಂಡು ಹೋಗಬಾರದು ಎಂದು ನಿಯಮವಿದ್ದರೂ ಮೂಡಲಗಿ ತಾಲೂಕಿನಲ್ಲಿ ಮಾತ್ರ ಅದು ಪಾಲನೆ ಆಗುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಕುಲಗೋಡದ ಸರಸ್ವತಿ ನವೋದಯ ಶಾಲೆ ಎಂಬ ಶಾಲೆಯ ಅಪಘಾತಕ್ಕೆ ಈಡಾಗಿ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಪ್ರಕರಣ ನಡೆದ ನಂತರ ಜ. ೨೫ ರಿಂದಲೇ ಎಲ್ಲ ಶಾಲಾ ವಾಹನಗಳು ನಿಯಮ ಪಾಲನೆ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಮೂಡಲಗಿ ತಹಶೀಲ್ದಾರರು, ಸಾರಿಗೆ ಅಧಿಕಾರಿಗಳು, ಬಿಇಓ ಹಾಗೂ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಶಾಲೆಗಳ ಆಡಳಿತ ಮಂಡಳಿಗಳು ಯಾವುದೇ ನಿಯಮ ಪಾಲನೆ ಮಾಡುತ್ತಿಲ್ಲ.

ಶಾಲಾ ವಾಹನಗಳ ಪ್ರತ್ಯೇಕ ತಪಾಸಣೆ ಇಲ್ಲ: ಶಾಲಾ ವಾಹನಗಳು ಸುರಕ್ಷತಾ ನಿಯಮ ಅನುಸರಿಸುತ್ತಿರುವ ಬಗ್ಗೆ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಪ್ರತ್ಯೇಕವಾಗಿ ತಪಾಸಣೆ ಮಾಡುತ್ತಿಲ್ಲ. ಆದರೆ, ನಿಯಮಾವಳಿ ಪ್ರಕಾರ ಸಾರಿಗೆ ಇಲಾಖೆಯಲ್ಲಿ ಶಾಲಾ ವಾಹನಗಳ ತಪಾಸಣೆಗೆ ಪ್ರತ್ಯೇಕ ತಂಡ ಇರಬೇಕು. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಿ ಅನಧಿಕೃತ ಶಾಲಾ ವಾಹನಗಳಿಗೆ ಕಡಿವಾಣ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು ವರ್ಷಗಳಿಂದ ಶಾಲಾ ವಾಹನಗಳ ತಪಾಸಣೆ ಮಾಡದೆ ಇರುವ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಬೇರೆ ವಾಹನ ತಪಾಸಣೆ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ.
ಪಾಲನೆಯಾಗದ ಮಾರ್ಗಸೂಚಿ : ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಬಾರಿ ಮಾರ್ಗಸೂಚಿ ರೂಪಿಸಿದೆ. ವಾಹನಗಳಲ್ಲಿ ಸಿಸಿಟಿವಿ ಕ್ಯಾಮರಾ ಇರಬೇಕು, ಜಿಪಿಎಸ್ ಅಳವಡಿಸಬೇಕು, ಅಗ್ನಿಶಾಮಕ ಉಪಕರಣ ಅಳವಡಿಕೆ ಕಡ್ಡಾಯ. ತುರ್ತು ನಿರ್ಗಮನ ಬಾಗಿಲು, ಪ್ರಥಮ ಚಿಕಿತ್ಸಾ ಕಿಟ್, ಚಾಲಕನಿಗೆ ಸಮವಸ್ತ್ರ, ಗುರುತಿನ ಚೀಟಿ, ನಿಯಮಾವಳಿ ಪ್ರಕಾರ ವಾಹನದ ಸಂಪೂರ್ಣ ವಿವರ, ಚಾಲಕನ ಹೆಸರು, ಅನುಭವ, ಮೊಬೈಲ್ ಸಂಖ್ಯೆಯನ್ನು ಬಸ್ ಹೊರಭಾಗದಲ್ಲಿ ಪ್ರದರ್ಶಿಸಬೇಕು ಎಂದು ಸೂಚಿಸಿದೆ. ಆದರೆ, ತಾಲೂಕಿನಲ್ಲಿ ಓಡಾಡುವ ಶಾಲಾ ವಾಹನಗಳಲ್ಲಿ ಈ ಮಾರ್ಗಸೂಚಿಗಳ ಪಾಲನೆ ಶೂನ್ಯವಾಗಿದೆ.
ಅಷ್ಟಕ್ಕೂ ಇಷ್ಟೆಲ್ಲ ಅಪಘಾತಗಳು ನಡೆಯುತ್ತಿದ್ದರೂ ಖಾಸಗಿ ಶಾಲೆಗಳ ವಾಹನಗಳ ವಿಷಯದಲ್ಲಿ ಶಿಕ್ಷಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.