LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಶಿಮ್ಲಾದ ಶಿವ ಮಂದಿರ ದುರಂತ: ಅವಶೇಷಗಳಡಿ ಇದುವರೆಗೂ 17 ಮೃತದೇಹಗಳು ಪತ್ತೆ…..!

ಶಿಮ್ಲಾ (ಹಿಮಾಚಲ ಪ್ರದೇಶ): ಆಗಸ್ಟ್ 14 ರಂದು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸಮ್ಮರ್ ಹಿಲ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ನಂತರ, ಈವರೆಗೆ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಹಿಮಾಚಲ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಬೋಧ್ ಸಕ್ಸೇನಾ ಭಾನುವಾರ ತಿಳಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಬೋಧ್ ಸಕ್ಸೇನಾ ಮಾಹಿತಿ: ಶಿವ ಮಂದಿರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೆ 17 ಶವಗಳನ್ನು ಹೊರತೆಗೆಯಲಾಗಿದೆ. ಏಳು ಜನರ ಕುಟುಂಬದ ಎರಡು ಮೃತದೇಹಗಳು ಇನ್ನೂ ಪತ್ತೆಯಾಗಬೇಕಿದೆ. ಅವಶೇಷಗಳ ಅಡಿ ಇನ್ನೂ ಮೂರು ಶವಗಳಿರುವ ಸಾಧ್ಯತೆಯಿದೆ. ನಾನು ಜಿಲ್ಲಾಧಿಕಾರಿಗಳೊಂದಿಗೆ ಸೂಚನೆ ನೀಡಲಾಗಿದ್ದು, ಅವರು ಇನ್ನೂ 2ರಿಂದ 3 ದಿನಗಳಲ್ಲಿ ಈ ದೇಹಗಳನ್ನು ಹೊರಗೆ ತೆಗೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸಕ್ಸೇನಾ ಹೇಳಿದರು.

4 ದಿನದೊಳಗೆ ಭಾರಿ ವಾಹನಗಳ ಸಂಚಾರ ಪ್ರಾರಂಭ: ಮುಂದಿನ 3ರಿಂದ 4 ದಿನಗಳಲ್ಲಿ ಕುಲುವಿನಲ್ಲಿ ಸೇಬುಗಳನ್ನು ಸಾಗಿಸುವ ವಾಹನಗಳು ಸೇರಿದಂತೆ ಭಾರಿ ವಾಹನಗಳ ಸಂಚಾರ ಪ್ರಾರಂಭವಾಗಲಿದೆ. ಪುನಃಸ್ಥಾಪನೆಯ ಬದಿಯಲ್ಲಿ, ಈಗ ಕುಲುವಿನಿಂದ ಸೇಬುಗಳ ಸಾಗಾಟಕ್ಕೆ ಒತ್ತು ನೀಡಲಾಗಿದೆ. ಕುಲುವಿನಲ್ಲಿ ಹಲವು ವರ್ಷಗಳಿಂದ ಬಳಕೆಯಾಗದೇ ಬಿದ್ದಿದ್ದ ಬಿಬಿಎಂಬಿ ರಸ್ತೆಯನ್ನು ಕಳೆದ ಎರಡು ದಿನಗಳಲ್ಲಿ ದುರಸ್ತಿ ಮಾಡಿದ್ದೇವೆ. ಈಗ ನಾವು ಎನ್​ಎಚ್​ನ ಇನ್ನೊಂದು ಭಾಗದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ, 8,014.61 ಕೋಟಿ ರೂ. ಹಾನಿ: ನಿರಂತರ ಮಳೆಯಿಂದ ಭೂಕುಸಿತಗಳಿಗೆ ಹಾಗೂ ಹಠಾತ್ ಪ್ರವಾಹಗಳಿಗೆ ಕಾರಣವಾಗಿದ್ದು, ರಾಜ್ಯದಲ್ಲಿ ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಹಿಮಾಚಲ ಪ್ರದೇಶ ಸರ್ಕಾರ ಇಡೀ ರಾಜ್ಯವನ್ನು ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ’ ಎಂದು ಘೋಷಿಸಿದೆ. ರಾಜ್ಯ ಸರ್ಕಾರ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಜೂನ್ 24ರಿಂದ ಹಿಮಾಚಲದಲ್ಲಿ ಒಟ್ಟು ಹಣಕಾಸಿನ ನಷ್ಟವು 8,014.61 ಕೋಟಿ ರೂಪಾಯಿಗಳಿಗೆ ತಲುಪಿದೆ.

ಮಾನ್ಸೂನ್​ನಲ್ಲಿ 113 ಭೂ ಕುಸಿತದ ಘಟನೆಗಳು, 224 ಜನರು ಸಾವು: ಒಟ್ಟು 2,022 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. 9,615 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಈ ವರ್ಷದ ಮುಂಗಾರು ಋತುವಿನಲ್ಲಿ 113 ಭೂ ಕುಸಿತದ ಘಟನೆಗಳು ಸಂಭವಿಸಿವೆ. ಮಾನ್ಸೂನ್ ಬಿರುಸಿನಲ್ಲಿ ಒಟ್ಟು 224 ಜನರು ಸಾವನ್ನಪ್ಪಿದ್ದಾರೆ. ಈದುವರೆಗೆ ರಾಜ್ಯದಲ್ಲಿ 117 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಸಮ್ಮರ್ ಹಿಲ್ ಘಟನೆಯಲ್ಲಿ ಇಲ್ಲಿಯವರೆಗೆ ಹದಿನೇಳು ಶವಗಳನ್ನು ಪತ್ತೆಯಾಗಿವೆ. ಅವಶೇಷಗಳ ಅಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ವಿವಿಧೆಡೆ ಕಾರ್ಯಾಚರಣೆಗಳು ನಡೆಯುತ್ತಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಹಾದಂಗಡಿಗೆ ನುಗ್ಗಿದ ಟ್ರಕ್: 5 ಮಂದಿ ದುರ್ಮರಣ, ಹಲವರಿಗೆ ಗಾಯಮನೆಯಲ್ಲೇ ತಯಾರಿಸಿ ಇನ್ ಸ್ಟಂಟ್ ‘ಜಿಲೇಬಿ’ರಾಯರ ಮಠದಲ್ಲಿ ನಡೀತು ಪವಾಡ, ವೀಲ್ ಚೇರಲ್ಲಿ ಬಂದವಳು, ನಡೆದು ಹೋದಳು.!ಉಕ್ರೇನ್ ಮೇಲೆ 158 ಡ್ರೋನ್‌ ದಾಳಿ ನಡೆಸಿದ ರಷ್ಯಾ ಸೇನೆಒಡೆದ ಹಿಮ್ಮಡಿ ಪಾದ ಸರಿಪಡಿಸಲು ಇಲ್ಲಿದೆ ಮನೆಮದ್ದು...!'ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಸೇರಿದ್ದಾನೆ' - ಫಾರೂಕ್ ಅಬ್ದುಲ್ಲಾಕಣ್ಣೂರಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಯುವತಿ ಮೃತ್ಯು: ನಕ್ಸಲ್‌ರಿಂದ ಪ್ರತೀಕಾರದ ಪೋಸ್ಟರ್ಭಯೋತ್ಪಾದಕ ಪಟ್ಟಿಗೆ ಕೆನಡಾದ ಲಖ್‍ಬೀರ್ ಸಿಂಗ್ ಲಾಂಡಾ ಸೇರ್ಪಡೆಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಯುವಕ ಮೃತ್ಯುಉದ್ಯೋಗ ಮೇಳ ಸಿದ್ಧತೆಗೆ ಸಚಿವರ ತಂಡ ರಚನೆ : ಸಿಎಂ ಸಿದ್ದರಾಮಯ್ಯ