LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಶಿರೂರು ಗುಡ್ಡ ಕುಸಿತ: 7 ದಿನದಿಂದ ನಿಂತಲ್ಲೇ ನಿಂತ ಲಾರಿಗಳು- ಚಾಲಕರ ಪರದಾಟ

ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 7 ದಿನಗಳಿಂದ ನೂರಾರು ಲಾರಿಗಳು ಮುಂದೆ ಹೋಗಲು ಆಗದೆ, ನಿಂತಲ್ಲೇ ನಿಲ್ಲಲು ಆಗದೆ ಪರದಾಡುಂವತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಾಗಿ ಇದೀಗ ಸ್ಥಳೀಯರು ಚಾಲಕರ ನೆರವಿಗೆ ಮುಂದಾಗಿದ್ದು, ಅಂಕೋಲಾ ಚಾಲಕರ ಸಂಘದಿಂದ ಪ್ರತಿಭಟನಾ ರ‍್ಯಾಲಿ ಮಾಡಿದ್ದಾರೆ. ಆ ಮೂಲಕ ಚಾಲಕರನ್ನು ರಕ್ಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಲಾಗಿದೆ.ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಇಂದಿಗೆ 7 ದಿನವಾಗಿದೆ. ಇನ್ನೂ ಕಾರ್ಯಚರಣೆ ಮುಂದುವರಿದ ಪರಿಣಾಮ ಹೆದ್ದಾರಿ ಪಕ್ಕದಲ್ಲೇ ನೂರಾರು ಲಾರಿಗಳು ನಿಂತುಕೊಂಡಿವೆ. ಉಪಹಾರ, ಊಟ, ಶೌಚಾಲಯಕ್ಕೂ ಲಾರಿ ಚಾಲಕರು ಪರದಾಡುವಂತಾಗಿದೆ.

ವಾರದಿಂದ ರಸ್ತೆಯಲ್ಲೇ ಇರುವುದರಿಂದ ಆರೋಗ್ಯದಲ್ಲಿ ಕೂಡ ಏರುಪೇರು ಉಂಟಾಗಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಚಾಲಕರ ಪರವಾಗಿ ಅಂಕೋಲಾ ಚಾಲಕರ ಸಂಘದಿಂದ ಪ್ರತಿಭಟನೆ ಮಾಡಲಾಗಿದೆ.ಮಣ್ಣು ತೆರವು ವಿಳಂಬ ಆಗಿದಕ್ಕೆ ಕಾರವಾರ ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಕಾರಿಗೆ ಪ್ರತಿಭಟನಾನಿರತ ಚಾಲಕರ ಸಂಘದಿಂದ ಮುತ್ತಿಗೆ ಹಾಕಿದ್ದು, ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಮಣ್ಣಿನ ರಾಶಿಯಲ್ಲಿ ನಾಪತ್ತೆಯಾಗಿರುವ ಲಾರಿ ಪತ್ತೆಗಾಗಿ ಶೋಧ ನಡೆಯುತ್ತಿದೆ. ಕೇರಳ ಮೂಲದ ಭಾರತ್ ಬೆಂಜ್ ಲಾರಿ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಲಾರಿಯಲ್ಲಿ ಚಾಲಕ ಅರ್ಜುನ್ ಸಿಲುಕಿದ್ದಾರೆ. ಇನ್ನು ಬೆಳಗಾವಿಯಿಂದ ನಿನ್ನೆ ಶಿರೂರಿಗೆ ಯೋಧರು ಆಗಮಿಸಿದ್ದು, ಲಾರಿ ಮತ್ತು ಚಾಲಕನ ಹುಡುಕಾಟಕ್ಕೆ ಭಾರತೀಯ ಸೇನೆ ಸಾಥ್ ನೀಡಿದೆ. ಗುಡ್ಡ ಕುಸಿದ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈಲ್ವೆ ಸೇತುವೆಗಳ ನಿರ್ಮಾಣಕ್ಕೆ ರೂ.164.00 ಕೋಟಿ ಬಿಡುಗಡೆಗೆ : ಸಂಸದ ಗೋವಿಂದ ಕಾರಜೋಳವಚನ: --ಜೇಡರ ದಾಸಿಮಯ್ಯ10 ನೇ ತರಗತಿ ಪಾಸಾಗಿದ್ದೀರಾ: ಹೋಂ ಗಾರ್ಡ್​​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!ಬೆಂಗಳೂರು ಸಮೀಪವೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭ: ಅಶ್ವಿನಿ ವೈಷ್ಣವ್ಲೈಂಗಿಕತೆ ಬಗ್ಗೆ ರಣವೀರ್ ಆಕ್ಷೇಪಾರ್ಹ ಹೇಳಿಕೆ: ತನಿಖೆಗೆ ಮಹಾರಾಷ್ಟ್ರ ಆದೇಶಮಹಿಳೆಯರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ಗೃಹ ಲಕ್ಷ್ಮೀ ಹಣ: ಲಕ್ಷ್ಮೀ ಹೆಬ್ಬಾಳ್ಕರ್‌ನಟ ಡಾಲಿ ಧನಂಜಯ್, ಡಾಕ್ಟರ್ ಧನ್ಯತಾ ಅದ್ದೂರಿ ಹಳದಿ ಶಾಸ್ತ್ರಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಬರ್ಬರ ಕೊಲೆ; ಆರೋಪಿ ಆಟೋ ಚಾಲಕ ಅರೆಸ್ಟ್'ರಾಜ್ಯ ಸರ್ಕಾರದಿಂದ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ'- ಅಶೋಕ್ವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಮೃತ್ಯು