ನವದೆಹಲಿ: ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ನಾಗರಿಕ ಏಕರೂಪ ಸಂಹಿತೆ ಕುರಿತಾಗಿ ಚರ್ಚೆ ಮಾಡಿದ್ದಾರೆ.
ಪ್ರಧಾನಿ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ನಾಗರಿಕ ಏಕರೂಪ ಸಂಹಿತೆಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಕೂಡಲೇ ಅದನ್ನು ಜಾರಿಗೆ ತರಲಾಗುವುದು ಎಂದು ಪುಷ್ಕರ್ ಸಿಂಗ್ ಧಾಮಿ ಹೇಳಿದರು.
https://bcsuddi.com/%e0%b2%ad%e0%b2%be%e0%b2%b0%e0%b3%80-%e0%b2%ae%e0%b2%b3%e0%b3%86-%e0%b2%b8%e0%b2%be%e0%b2%a7%e0%b3%8d%e0%b2%af%e0%b2%a4%e0%b3%86-%e0%b2%b9%e0%b2%bf%e0%b2%a8%e0%b3%8d%e0%b2%a8%e0%b3%86%e0%b2%b2/
ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಜಿಎಸ್‌ಟಿ, ಜೋಶಿಮಠ, ಚಾರ್ ಧಾಮ್ ಯಾತ್ರೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಧಾನಿ ಅವರನ್ನು ರಾಜ್ಯ ಭೇಟಿಗೆ ಆಹ್ವಾನಿಸಲಾಗಿದೆ ಎಂದು ಧಾಮಿ ತಿಳಿಸಿದರು.