ಚಿಕ್ಕಮಗಳೂರು: 15 ಅಡಿ ಉದ್ದದ 60 ಕೆ.ಜಿ. ತೂಕವಿದ್ದ ಹಾವೊಂದು ನಾಯಿಯನ್ನು ನುಂಗಿ ಸಂಚರಿಸಲಾಗದೆ ನರಳುತ್ತಿದ್ದು, ಅದನ್ನು ರಕ್ಷಣೆ ಮಾಡಿರುವ ಘಟನೆ ಎನ್.ಆರ್.ಪುರ ತಾಲೂಕಿನ ಹಂತುವಾನಿ ಗ್ರಾಮದಲ್ಲಿ ನಡೆದಿದೆ.
ಹಂತುವಾನಿ ಗ್ರಾಮದ ಶ್ರೀಮತಿ ಎಂಬುವರ ಮನೆ ಬಳಿ 15 ಅಡಿ ಉದ್ದದ ಹೆಬ್ಬಾವು ನಾಯಿಯನ್ನ ನುಂಗಿ ಸಂಚರಿಸಲಾಗದೆ ಮಲಗಿದ್ದು, ಬಳಿಕ ಉರಗತಜ್ಞ ಹರೀಂದ್ರ ಎನ್ನುವವರು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.
https://bcsuddi.com/%e0%b2%b9%e0%b2%a4%e0%b3%8d%e0%b2%af%e0%b3%86%e0%b2%97%e0%b3%8a%e0%b2%b3%e0%b2%97%e0%b2%be%e0%b2%a6-%e0%b2%9c%e0%b3%88%e0%b2%a8-%e0%b2%ae%e0%b3%81%e0%b2%a8%e0%b2%bf-%e0%b2%ae%e0%b2%b9%e0%b2%be/
ಇನ್ನುಅರಣ್ಯ ಅಧಿಕಾರಿ ರಾಘವೇಂದ್ರ ಸಮ್ಮುಖದಲ್ಲಿ ಈ ಹೆಬ್ಬಾವು ರಕ್ಷಣಾ ಕಾರ್ಯ ನಡೆದಿದೆ. ಸದ್ಯ ಹಾವನ್ನು ಹಿಡಿದು ಕಾಡಿಗೆ ಬಿಡಲಾಗಿದೆ.