LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಂಸತ್ ಭವನದ ರಕ್ಷಣೆ ಹೊಣೆ CISF ಹೆಗಲಿಗೆ..!

ನವದೆಹಲಿ : ಸಂಸತ್‌ ಭವನದ ಭದ್ರತಾ ಜವಾಬ್ದಾರಿಯನ್ನು ದೆಹಲಿ ಪೊಲೀಸರಿಂದ ಹಿಂಪಡೆದ ಕೇಂದ್ರ ಸರ್ಕಾರ ಸಿಐಎಸ್‌ಎಫ್ ಹೆಗಲಿಗೇರಿಸಿದೆ.

ಸಂಸತ್ ಭವನದಲ್ಲಿ ಲೋಕಸಭೆ ಅಧಿವೇಶನ ನಡೆಯುತ್ತಿರುವಾಗಲೇ ಸಂಸತ್‌ ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿದ ಕಿಡಿಗೇಡಿಗಳು ದಾಂಧಲೆ ನಡೆಸಿದ್ದರು. ಸಂಸತ್ ಭದ್ರತಾ ಲೋಪಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಎಚ್ಚೆತ್ತುಕೊಂಡ ಕೇಂದ್ರ ಗೃಹ ಸಚಿವಾಲಯ ಸಂಸತ್‌ಗೆ ಭದ್ರತೆ ನೀಡುತ್ತಿದ್ದ ದೆಹಲಿ ಪೊಲೀಸರನ್ನು ಬದಲಾಯಿಸಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳಿಗೆ (CISF) ಭದ್ರತಾ ಹೊಣೆ ನೀಡಿದೆ.

ಪ್ರವೇಶಿಸುವವರನ್ನು ಪರೀಕ್ಷಿಸುವುದು ಸೇರಿದಂತೆ ಎಲ್ಲಾ ಹೊಣೆ ಸಿಐಎಸ್‌ಎಫ್‌ ಹೆಗಲೇರಿದೆ. ಸಂಸತ್ ಭದ್ರತೆಯ ಎಲ್ಲಾ ಜವಾಬ್ದಾರಿಗಳನ್ನು ಸಿಐಎಸ್‌ಎಫ್‌ ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.ಆದ್ರೆ ಕಟ್ಟಡದೊಳಗಿನ ಭದ್ರತೆ ಲೋಕಸಭೆಯ ಸಚಿವಾಲಯದ ಜವಾಬ್ದಾರಿಯಾಗಿ ಮುಂದುವರಿಯುತ್ತದೆ,
CISF ಬಗ್ಗೆ ಒಂದಿಷ್ಟು:
CISF 1969 ರಲ್ಲಿ ಅಸ್ಥಿತ್ವಕ್ಕೆ ಬಂದ ಪೂರ್ಣ ರೂಪ ಕೇಂದ್ರ ಕೈಗಾರಿಕಾ ಭದ್ರತಾ ಪಡೆ.ಪ್ರಸ್ತುತ 1, 74,000 ಯೋಧರನ್ನು ಒಳಗೊಂಡ ಭಾರತದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾಗಿದೆ. ಇದು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಧಾನ ಕಚೇರಿಯು ನವದೆಹಲಿಯಲ್ಲಿದೆ. CISF ದೆಹಲಿ ಮೆಟ್ರೋ, ಸರ್ಕಾರಿ ಕಟ್ಟಡಗಳು, ದೇಶದ ಅನೇಕ ವಿಮಾನ ನಿಲ್ದಾಣಗಳು, ಸಮುದ್ರ ಬಂದರುಗಳು ಮತ್ತು ಪರಮಾಣು ಸೌಲಭ್ಯಗಳನ್ನು ಒಳಗೊಂಡಂತೆ 350 ಕ್ಕೂ ಹೆಚ್ಚು ಸ್ಥಳಗಳ ರಕ್ಷಣೆಯ ಹೊಣೆ ಹೊತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-ದಾಸೋಹದ ಸಂಗಣ್ಣ ಅವರ ವಚನಭೂ ಹಗರಣ ಪ್ರಕರಣ: ಸೊರೇನ್ ಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಿರಾಕರಣೆ3,464 ಕೋಟಿ ಬರ ಪರಿಹಾರ - ಬಾಕಿ ಪರಿಹಾರಕ್ಕಾಗಿ ನಾಳೆ ವಿಧಾನಸೌಧದ ಮುಂದೆ ಹೋರಾಟ - ಸಿಎಂ ಸಿದ್ದರಾಮಯ್ಯ ಕರೆಬರ ಪರಿಹಾರ ಬಿಡುಗಡೆಗೆ ಧನ್ಯವಾದ ಹೇಳಿದ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡ ನೆಟ್ಟಿಗರುಬರಗಾಲ ಪರಿಹಾರ ನೀಡಿದ ಮೋದಿ ಸರ್ಕಾರ, ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಡಬಲ್ ಪರಿಹಾರ ನೀಡಲಿ: ಆರ್.ಅಶೋಕ ಆಗ್ರಹಹೆಲಿಕಾಪ್ಟರ್‌ನಲ್ಲಿ ಹತ್ತಿ ಕೂರುವಾಗ ಜಾರಿ ಬಿದ್ದ ಮಮತಾ ಬ್ಯಾನರ್ಜಿಆ್ಯಂಬುಲೆನ್ಸ್‌ ಚಾಲಕನ ಎಡವಟ್ಟು ಸರಣಿ ಅಪಘಾತಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿದೆ 168 ಹುದ್ದೆಗಳು: ಐಟಿಐ, ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿರಸ್ತೆಯ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ರೀಲ್ ಮಾಡಿ ಪೊಲೀಸರ ಅತಿಥಿಯಾದ ವ್ಯಕ್ತಿ.!ಹಸ್ತಾಂತರಕ್ಕೆ ಸಿದ್ದತೆ: ಬ್ರಿಟನ್ ನಿಂದ ಫ್ರಾನ್ಸ್ ಗೆ ಶಿಫ್ಟ್ ಆಗಲು ಮಲ್ಯ ನಿರ್ಧಾರ?