ಕಮರ್ದಾ ಪೊಲೀಸ್ ಠಾಣೆ ವ್ಯಾಪ್ತಿಯ ಬಡಮಂಡರುಣಿ ಗ್ರಾಮದಲ್ಲಿ ದಾಳಿ ನಡೆಸಿದ ಹೈದರಾಬಾದ್ ಮತ್ತು ಒಡಿಶಾ ಪೊಲೀಸರ (Hyderabad and Odisha Police) ತಂಡವು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯೊಂದರಲ್ಲಿ (agricultural based company) ಕೆಲಸ ಮಾಡುತ್ತಿದ್ದ ಗೋಪಾಲ್ ಎಂಬಾತ, ತಾನೂ ಕೆಲಸ ಮಾಡುತ್ತಿದ್ದ ಕಂಪನಿಯ ಲಾಕರ್‌ನಿಂದ 20 ಲಕ್ಷಕ್ಕೂ ಹೆಚ್ಚು ಹಣವನ್ನು ಕದ್ದಿದ್ದ. ನಂತರ ತನ್ನ ಸಂಬಂಧಿ ರವೀಂದ್ರ ಬೆಹೆರಾ ಎಂಬುವವರಿಗೆ ಹಣ ಕೊಟ್ಟು ತನ್ನೂರಿಗೆ ಕಳುಹಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರ ತಂಡವು ಕಮರ್ದಾ ಪೊಲೀಸರೊಂದಿಗೆ ಆರೋಪಿಯ ಸಂಬಂಧಿ ರವೀಂದ್ರ ಅವರ ಮನೆ ಮೇಲೆ ದಾಳಿ ನಡೆಸಿದರು. ಈ ವೇಳೆ ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ (hidden) ಅಪಾರ ಪ್ರಮಾಣದ ಹಣವನ್ನು ಪತ್ತೆ ಮಾಡಿದ್ದಾರೆ.