Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಾಗರದ 'ತಾಳಗುಪ್ಪ ಗ್ರಾಮ ಪಂಚಾಯ್ತಿ'ಯಲ್ಲಿ ಕೋಟ್ಯಂತರ ಭ್ರಷ್ಟಾಚಾರ: ತನಿಖೆಗೆ ಗ್ರಾಮಸ್ಥ ಮಧು ತಾಳಗುಪ್ಪ ಆಗ್ರಹ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ₹1 ಕೋಟಿಗೂ ಅಧಿಕ ಮೊತ್ತದ ಅನುದಾನ ದುರುಪಯೋಗ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮಸ್ಥ ಮಧು ತಾಳಗುಪ್ಪ ಆಗ್ರಹಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಮೇತ ಮಾತನಾಡಿದ ಅವರು, ಪಂಚಾಯಿತಿಯ ಹಿಂದಿನ ಅಧ್ಯಕ್ಷರು, ಪಿಡಿಒ ಮತ್ತು ಸದಸ್ಯರು ಶಾಮೀಲಾಗಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರಮುಖ ಆರೋಪಗಳು ಹಾಗೂ ದಾಖಲೆ ವಿವರಗಳು:

  • ಗೋದ್ರೆಜ್ ಅಲ್ಮೇರಾ ಖರೀದಿ ಅಕ್ರಮ: 15ನೇ ಹಣಕಾಸು ಯೋಜನೆಯಡಿ 3 ಗೋದ್ರೆಜ್ ಕಪಾಟುಗಳಿಗೆ ₹1,09,000 ಪಾವತಿಸಲಾಗಿದೆ. ಆದರೆ, ಅದೇ ಸಂಸ್ಥೆಯಿಂದ ತಾವು ತಂದ ಕೊಟೇಶನ್ ಪ್ರಕಾರ 3 ಕಪಾಟುಗಳ ಮೌಲ್ಯ ₹66,000 (ಪ್ರತಿಗೆ ₹22,000). ಇದರಲ್ಲಿ ₹43,000 ಲೂಟಿ ಮಾಡಲಾಗಿದೆ.

  • ವೀಲ್ ಚೇರ್ ಖರೀದಿ ಹಗರಣ: ಎರಡು ವೀಲ್ ಚೇರ್‌ಗಳಿಗೆ ₹40,000 ಬಿಲ್ ಮಾಡಲಾಗಿದೆ. ಅದೇ ಅಂಗಡಿಯಲ್ಲಿ ಕೊಟೇಶನ್ ಪಡೆದಾಗ ಒಂದಕ್ಕೆ ₹9,000 (ಎರಡಕ್ಕೆ ₹18,000) ದರವಿದ್ದು, ₹22,000 ದುರುಪಯೋಗವಾಗಿದೆ.

  • ಶೋ ಗಿಡಗಳ ಬಿಲ್ ಗೋಲ್‌ಮಾಲ್: ಶಿವಮೊಗ್ಗದಿಂದ ತಂದ ಶೋ ಗಿಡ (ಮಾರುಕಟ್ಟೆ ಬೆಲೆ ₹220) ಹಾಗೂ ಕ್ರಿಸ್‌ಮಸ್ ಗಿಡಗಳಿಗೆ (ಮಾರುಕಟ್ಟೆ ಬೆಲೆ ₹300) ಪಂಚಾಯಿತಿಯಿಂದ ತಲಾ ₹1,500 ರಂತೆ ಒಟ್ಟು ₹34,000 ಬಿಲ್ ಮಾಡಿ, ಸುಮಾರು ₹24,000 ಲೂಟಿ ಮಾಡಲಾಗಿದೆ.

  • ಹಳೆಯ ಕಂಬಕ್ಕೆ ಲೈಟ್ ಹಾಕಿ ₹93,000 ಬಿಲ್: ಪಂಚಾಯಿತಿ ಮಧ್ಯಭಾಗದಲ್ಲಿರುವ ಹಳೆಯ ಕಂಬಕ್ಕೆ 6 ಫ್ಲಡ್ ಲೈಟ್‌ಗಳನ್ನು ಅಳವಡಿಸಿ ₹93,000 ಬಿಲ್ ಪಾವತಿಸಲಾಗಿದೆ. ಮಾರುಕಟ್ಟೆ ದರದ ಪ್ರಕಾರ ಇದರ ವೆಚ್ಚ ₹25,000 ರಿಂದ ₹30,000 ಮೀರದು. ಇದೇ ರೀತಿ ಹಲವು ಕಂಬಗಳಿಗೆ ₹96,000 ರಿಂದ ₹97,000 ಬಿಲ್ ಮಾಡಲಾಗಿದೆ.

  • ರಸ್ತೆ ಮತ್ತು ಚರಂಡಿ ಕಾಮಗಾರಿ ಅಕ್ರಮ: ಸೋಮಣ್ಣ ಅವರ ಮನೆಯಿಂದ ರಾಮಯ್ಯನವರ ಮನೆವರೆಗಿನ ಚರಂಡಿಗೆ 2024-25ರಲ್ಲಿ ₹2.27 ಲಕ್ಷ ವೆಚ್ಚ ತೋರಿಸಲಾಗಿದೆ. ಆದರೆ, ಇದೇ ರಸ್ತೆಯಲ್ಲಿ 2021-22ರಲ್ಲೇ ₹1.4 ಲಕ್ಷ ವೆಚ್ಚದಲ್ಲಿ ಕೆಲಸ ಮುಗಿದಿತ್ತು ಎಂದು ಆರೋಪಿಸಿದರು.

  • ಇತರ ಅವ್ಯವಹಾರಗಳು:

    • ಗ್ರಾಮ ಪಂಚಾಯಿತಿ ಆವರಣದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ತ್ಯಾಜ್ಯ ವಿಲೇವಾರಿ ಶೆಡ್ ಅನ್ನು ಕೆಡವಿ, ₹96,447 ವೆಚ್ಚದಲ್ಲಿ ಮರು ನಿರ್ಮಾಣ.

    • ₹4.68 ಲಕ್ಷ ವೆಚ್ಚದ ತಡೆಗೋಡೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆರೋಪ.

    • ಯಾವುದೇ ಫೋಟೋ ದಾಖಲೆಗಳಿಲ್ಲದೆ ಸತ್ತ ಜಾನುವಾರು ವಿಲೇವಾರಿ ಹೆಸರಿನಲ್ಲಿ ₹5,000, ₹12,000 ನಕಲಿ ಬಿಲ್ ಸೃಷ್ಟಿ.

    • ಸ್ವಾತಂತ್ರ್ಯೋತ್ಸವ ಆಚರಣೆಗೆ ಹಿಂದೆ ₹15,000 ಖರ್ಚಾಗುತ್ತಿದ್ದುದನ್ನು ₹70,000 ಕ್ಕೆ ಏರಿಸಿ ಬಿಲ್ ಪಡೆದಿರುವುದು.

    • ₹5,337 ಎಸ್‌ಆರ್ ದರವಿರುವ ಕಾಂಕ್ರೀಟ್ ಪೈಪ್ ಅಳವಡಿಕೆಗೆ ತಲಾ ₹9,000 ರಂತೆ ₹36,000 ಬಿಲ್ ಸೃಷ್ಟಿ.

9/11 ನೀಡುವಲ್ಲಿ ಸಾರ್ವಜನಿಕರಿಗೆ ಕಿರುಕುಳ:

ಗ್ರಾಮಠಾಣಾ ವ್ಯಾಪ್ತಿಯಲ್ಲಿ ಪೂರ್ವಜರ ಆಸ್ತಿಯ ಎಲ್ಲಾ ದಾಖಲೆಗಳು ಸರಿಯಿದ್ದರೂ ಸಾಮಾನ್ಯ ಜನರಿಗೆ 9/11 ನೀಡದೆ ಸತಾಯಿಸಲಾಗುತ್ತಿದೆ. ಆದರೆ, ಕೆಲವರಿಗೆ ಸಾಮಾನ್ಯ ಸಭೆಯಲ್ಲಿ ಕಾನೂನುಬಾಹಿರವಾಗಿ 9/11 ನಡವಳಿ ಪಾಸ್ ಮಾಡಲಾಗುತ್ತಿದ್ದು, ಇದರ ವಿರುದ್ಧ ತಾವು ಲೋಕಾಯುಕ್ತಕ್ಕೆ ದೂರು ನೀಡಿ ತಡೆ ಹಿಡಿದಿರುವುದಾಗಿ ಮಧು ತಾಳಗುಪ್ಪ ವಿವರಿಸಿದರು.

ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹ:

ಈ ಹಗರಣಗಳಲ್ಲಿ ಹಿಂದಿನ ಪಿಡಿಒ ಇಮ್ತಿಯಾಜ್ ಪಾಷಾ, ಮಾಜಿ ಅಧ್ಯಕ್ಷರಾದ ಪ್ರೇಮಾ ಭಾಸ್ಕರ್ ಶೆಟ್ಟಿ, ಲಕ್ಷ್ಮೀನಾರಾಯಣ ಬ್ಯಾಕೋಡು ಹಾಗೂ ಪಂಚಾಯಿತಿ ಸದಸ್ಯರು ಶಾಮೀಲಾಗಿದ್ದಾರೆ. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಂದ ಹಣ ವಸೂಲಿ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಅಧ್ಯಕ್ಷರಾದಂತ ಗಣಪತಿ, ರಾಘು, ಸಂತೋಷ್ ಹಾಗೂ ಸೂರಜ್ ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತಮುಂಬರುವ ಸಾಲು ಸಾಲು ನೇಮಕಾತಿ ಪರೀಕ್ಷೆಗಳಿಗೆ ಕೆಇಎ ಸಿದ್ಧತೆ: ಜಿಲ್ಲೆಗೆ ಇಬ್ಬರು ಪರೀಕ್ಷಾ ಮಾಸ್ಟರ್ ತರಬೇತುದಾರರ ನೇಮಕ, ತರಬೇತಿಪ್ರಪಂಚದಲ್ಲೆ ಸನಾತನ ಹಿಂದೂ ಧರ್ಮಕ್ಕೆ ಸಮನಾದ ಮತ್ತೊಂದು ಧರ್ಮವಿಲ್ಲ : ಸುಭುದೇಂದ್ರ ತೀರ್ಥರು ಹೇಳಿಕೆBREAKING : 'ಗೃಹಜ್ಯೋತಿ ಮರುಪರಿಶೀಲನೆ' : ಸೆ.30ರವರೆಗೆ ಗಡುವು ವಿಸ್ತರಿಸಿದ ರಾಜ್ಯ ಸರ್ಕಾರ!ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು 'ಪ್ರಜಾಸೇವಾ' ಸಜ್ಜು : ಸೆಪ್ಟೆಂಬರ್ 5 ರಿಂದ ರಾಜ್ಯಾದ್ಯಂತ ಅಧಿಕೃತ ಚಾಲನೆ!'ಶಕ್ತಿ ಯೋಜನೆ' ಉಚಿತ ಬಸ್ ಪ್ರಯಾಣದಿಂದ ಭಕ್ತರಿಗೆ ಅನುಕೂಲ: ಮಂತ್ರಾಲಯ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಶ್ಲಾಘನೆ!BREAKING : ಬಿಗ್ ಬಾಸ್ ಕನ್ನಡ ಶೋಗೆ ಸಂಕಷ್ಟ : ಅನುಮತಿ ಕೊಡೋದಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ!ಆಪರೇಷನ್ ಮುಕ್ತ 2.O: ಬೆಂಗಳೂರಿನಲ್ಲಿ ಸೆರೆಯಾಗಿದ್ದ 31 ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರುBREAKING: KPSC ನೇಮಕಾತಿ ಹಗರಣ: ಸೆ.9ರವರೆಗೆ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ CID ಕಸ್ಟಡಿಗೆBIG NEWS: ರಾಜ್ಯದಲ್ಲಿ ಆಗಸ್ಟ್ ತಿಂಗಳ ‘ಅನ್ನಭಾಗ್ಯ’ ಅಕ್ಕಿ ವಿತರಣೆ ಸ್ಥಗಿತ: ಪಡಿತರದಾರರಲ್ಲಿ ಗೊಂದಲ