ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಆರ್. ದೇವರಾಜ್ ಹಾಗೂ ಅವರ ಪತ್ನಿ ಚಂದ್ರಾ ದೇವರಾಜ್ ಅವರು ಇಂದು ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರನ್ನು ಭೇಟಿಯಾದರು.
ಬೆಂಗಳೂರಿನಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾದ ದಂಪತಿ, ತಮ್ಮ ದ್ವಿತೀಯ ಪುತ್ರ ಪ್ರಣಾಮ್ ಅವರ ವಿವಾಹ ಸಮಾರಂಭಕ್ಕೆ ಸಚಿವ ಮಧು ಬಂಗಾರಪ್ಪ ಅವರಿಗೆ ಆತ್ಮೀಯವಾಗಿ ಆಮಂತ್ರಣ ನೀಡಿದರು.
ಈ ಸಂದರ್ಭದಲ್ಲಿ ನಟ ಪ್ರಜ್ವಲ್ ದೇವರಾಜ್ ಮತ್ತು ಪ್ರಣಾಮ್ ದೇವರಾಜ್ ಇದ್ದರು.