LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಣ್ಣ, ಅತಿ ಸಣ್ಣ ಉದ್ಯಮಿಗಳಿಗೆ ಸಿಹಿ ಸುದ್ದಿ: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ, ಸಾಲದ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ

ಸಣ್ಣ ಮತ್ತು ಅತಿ ಸಣ್ಣ ಉದ್ಯಮ ನಡೆಸುವ ಉದ್ಯಮಿಗಳಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ನೀಡುವ ಸಾಲದ ಮಿತಿಯನ್ನು 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಕಾರ್ಪೊರೇಟ್ ಅಲ್ಲದ ಕೃಷಿಯೇತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಪರಿಣಾಮಕಾರಿ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಯೋಜನೆಯ ಆಶಯವನ್ನು ಮತ್ತಷ್ಟು ವಿಸ್ತರಿಸಲು ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ.

ತರುಣ್ ವಿಭಾಗದಲ್ಲಿ 10 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿದವರಿಗೆ ಈ ವಿಸ್ತರಿತ ಮುದ್ರಾ ಸಾಲ ಯೋಜನೆಯ ಲಾಭ ದೊರಕಲಿದೆ.

ತರುಣ್ ಪ್ಲಸ್ ವಿಭಾಗದಲ್ಲಿ 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳ ವರೆಗೆ ಸಾಲದ ಸೌಲಭ್ಯವನ್ನು ಬ್ಯಾಂಕ್‌ಗಳು ನೀಡಲಿವೆ. ಇದರಿಂದ ಯುವ ಉದ್ಯಮಿಗಳು ತಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ಅನುಕೂಲವಾಗಲಿದೆ..

2015ರ ಎಪ್ರಿಲ್ 8ರಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಯನ್ನು ಜಾರಿಗೊಳಿಸಿತ್ತು. ಸರ್ಕಾರಿ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಕಿರು ಹಣಕಾಸು ಸಂಸ್ಥೆಗಳು ಮುದ್ರಾ ಯೋಜನೆಯಡಿ ಸಾಲ ಸೌಲಭ್ಯವನ್ನು ನೀಡುತ್ತಿವೆ.

ಯಾವುದೇ ಆಧಾರ ಇಲ್ಲದೆ ಸಾಲ ಸೌಲಭ್ಯ ನೀಡುವ ಯೋಜನೆ ಇದಾಗಿದೆ. ಶಿಶು ವಿಭಾಗದಲ್ಲಿ 50 ಸಾವಿರ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ದೊರೆಯಲಿದೆ.

ಕಿಶೋರ್ ವಿಭಾಗದಲ್ಲಿ 51 ಸಾವಿರ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ದೊರೆಯಲಿದೆ.

ತರುಣ್ ವಿಭಾಗದಲ್ಲಿ 5 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ದೊರೆಯಲಿದೆ.

ಇದೀಗ ಈ ಎಲ್ಲ ವಿಭಾಗಗಳ ಸಾಲ ಸೌಲಭ್ಯದ ಮಿತಿಯನ್ನು ದುಪ್ಪಟ್ಟು ಮಾಡಲಾಗಿದೆ. ದೇಶದಾದ್ಯಂತ ಈ ಸಾಲ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಅರ್ಹ ಫಲಾನುಭವಿಗಳು ಈ ಸಾಲ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಕೇಂದ್ರ ಸರ್ಕಾರ ತಿಳಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಹಾಗಾದರೆ ಹೀಗೆ ಮಾಡಿ.! ಸಂತಾನ ಪ್ರಾಪ್ತಿ ಗ್ಯಾರಂಟಿ.!ತಾ.ಪಂ.ಜಿ.ಪಂ ಚುನಾವಣೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು ಇದು.!ಭೀಕರ ರಸ್ತೆ ಅಪಘಾತ 7 ಮಕ್ಕಳು ಸೇರಿ 10 ಜನ ಸಾವು.!ದಿನದ ಮಂಡಕ್ಕಿ ಒಗ್ಗರಣೆ-ಮಿರ್ಚಿ 13-08-2025.!ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಮಹಿಳಾ ಉದ್ಯೋಗ ಕೋಶ ಪ್ರಾರಂಭ.!ಸ್ವಯಂ ಸೇವಾ ಸಂಸ್ಥೆಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ.!ವಚನ: --ತೋಂಟದ ಸಿದ್ಧಲಿಂಗ ಶಿವಯೋಗಿಗಳು .!ಬಾಂಗ್ಲಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತಮೊಸರು ಕುಡಿಕೆ ಅಭ್ಯಾಸದ ವೇಳೆ ಬಾಲಕ ಸಾವುಒಳಮೀಸಲಾತಿ : ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ತಾರತಮ್ಯ.!ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ