Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಮುದ್ರ ಮಟ್ಟ ಏರಿಕೆಯಿಂದ ಮುಂಬೈ, ಕೋಲ್ಕತ್ತಾದ 1.4 ಕೋಟಿ ಜನರು ಮನೆ ಕಳೆದುಕೊಳ್ಳಬಹುದು : ವಿಶ್ವಸಂಸ್ಥೆ 

ಮುಂಬೈ : ಸಮುದ್ರ ಮಟ್ಟ ಏರಿಕೆ ಮತ್ತು ಶಾಶ್ವತ ಜಲಾವೃತದ ಪರಿಣಾಮವಾಗಿ ಕೋಲ್ಕತ್ತಾ ಮತ್ತು ಮುಂಬೈನ ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ತಕ್ಷಣದ ಅಪಾಯ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕಚೇರಿ ಬಿಡುಗಡೆ ಮಾಡಿರುವ ‘ಸಮುದ್ರ ಮಟ್ಟದ ಏರಿಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅದನ್ನು ಎದುರಿಸುವ ಮಾರ್ಗಗಳು’ (‘Challenges Related to Sea Level Rise and Ways and Approaches to Address It) ಎಂಬ ವರದಿಯಲ್ಲಿ ಈ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ವರದಿ ಪ್ರಕಾರ, ಸಮುದ್ರ ಮಟ್ಟ ಏರಿಕೆ ಇನ್ನು ಭವಿಷ್ಯದ ಸಮಸ್ಯೆಯಲ್ಲ. ಅದು ವರ್ತಮಾನವಾಗಿದ್ದು, ಈಗಾಗಲೇ ಜಗತ್ತಿನ ಹಲವೆಡೆ ಪರಿಣಾಮ ಬೀರುತ್ತಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಸಮುದ್ರದ ನೀರು ಒಳನಾಡಿನತ್ತ ನುಗ್ಗುತ್ತಿರುವುದರಿಂದ ಕರಾವಳಿ ನಗರಗಳ ರಸ್ತೆ, ಕಟ್ಟಡಗಳು, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಜಾಲ ಮತ್ತು ಇತರ ಮೂಲಸೌಕರ್ಯಗಳಿಗೆ ಹಾನಿಯಾಗುತ್ತಿದೆ. ಇದರಿಂದ ಜನರ ಜೀವನ, ಆರ್ಥಿಕತೆ ಮತ್ತು ಅಭಿವೃದ್ಧಿಯ ಮೇಲೂ ದೊಡ್ಡ ಪರಿಣಾಮ ಬೀಳುತ್ತಿದೆ.
ಅಮೆರಿಕದ ಮಿಯಾಮಿ ಮತ್ತು ನ್ಯೂಯಾರ್ಕ್‌ ನಗರಗಳು ಹಾಗೂ ಚೀನಾದ ಗ್ವಾಂಗ್‌ಝೌನಲ್ಲಿ ಕರಾವಳಿ ಮೂಲಸೌಕರ್ಯಗಳಿಗೆ ಲಕ್ಷಾಂತರ ಕೋಟಿ ಡಾಲರ್‌ಗಳ ಆರ್ಥಿಕ ನಷ್ಟದ ಅಪಾಯ ಎದುರಾಗಿದ್ದರೆ, ದಕ್ಷಿಣ ಏಷ್ಯಾದಲ್ಲಿ ಸಮಸ್ಯೆಯ ಸ್ವರೂಪವೇ ಬೇರೆ ಎಂದು ವರದಿ ಹೇಳಿದೆ. ಭಾರತದ ಮುಂಬೈ ಮತ್ತು ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದ ಢಾಕಾದಲ್ಲಿ 1.4 ಕೋಟಿಗೂ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಇಲ್ಲಿ ಆರ್ಥಿಕ ನಷ್ಟಕ್ಕಿಂತ ಜನರ ಸ್ಥಳಾಂತರ ಮತ್ತು ನಿರಾಶ್ರಿತ ಸಮಸ್ಯೆಯೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ವರದಿ ತಿಳಿಸಿದೆ.

ಸಮುದ್ರ ಮಟ್ಟ ಏರಿಕೆ ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಕರಾವಳಿ ಪ್ರದೇಶಗಳ ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆಗಳು ಹಾನಿಗೊಳಗಾಗುತ್ತಿರುವುದರಿಂದ ನೀರಿನಿಂದ ಹರಡುವ ರೋಗಗಳ ಅಪಾಯ ಹೆಚ್ಚುತ್ತಿದೆ. ಜೊತೆಗೆ ಮಾನಸಿಕ ಒತ್ತಡ, ಅಪಾಯ ಮತ್ತು ಜೀವಹಾನಿಯ ಸಾಧ್ಯತೆಯೂ ಹೆಚ್ಚುತ್ತಿದೆ. ಸಮುದ್ರ ಮಟ್ಟ ಏರಿಕೆ ಮತ್ತು ಭೂ ಕುಸಿತದ ಪರಿಣಾಮವಾಗಿ ಪ್ರವಾಹಗಳ ಅಪಾಯ ಹೆಚ್ಚುತ್ತಿದ್ದು, ಕರಾವಳಿ ಪರಿಸರ ವ್ಯವಸ್ಥೆಗಳು ಹಾಳಾಗುತ್ತಿವೆ. ಇದರಿಂದ ಮೀನುಗಾರಿಕೆ ಸೇರಿದಂತೆ ಹಲವು ಜೀವನೋಪಾಯಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದುವರದಿ ಹೇಳಿದೆ.
ಉಪ್ಪುನೀರು ಒಳನಾಡಿನತ್ತ ನುಗ್ಗುತ್ತಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಅಂತರ್ಜಲ ಉಪ್ಪಾಗುತ್ತಿದ್ದು, ಬಾವಿಗಳ ನೀರು ಕುಡಿಯಲು ಅಯೋಗ್ಯವಾಗುತ್ತ ಸಾಗಿದೆ. ಕೃಷಿ ಭೂಮಿಗಳ ಮೇಲೂ ಇದರ ಪರಿಣಾಮ ಬೀಳುತ್ತಿದ್ದು, ಬೆಳೆ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ. ಚಂಡಮಾರುತಗಳ ಸಮಯದಲ್ಲಿ ಸಮುದ್ರದ ನೀರು ಭೂಭಾಗಕ್ಕೆ ನುಗ್ಗುವುದರಿಂದ ನೀರಿನ ಮೂಲಗಳು ಇನ್ನಷ್ಟು ಕಲುಷಿತಗೊಳ್ಳುತ್ತಿವೆ.

ಈ ಸಮಸ್ಯೆಗೆ ಪ್ರಮುಖ ಕಾರಣ ಮಾನವ ಚಟುವಟಿಕೆಗಳಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನ ಏರಿಕೆ ಎಂದು ವರದಿ ಹೇಳಿದೆ. ಭೂಮಿಯ ಉಷ್ಣಾಂಶ ಹೆಚ್ಚಾಗುತ್ತಿದ್ದಂತೆ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಜೊತೆಗೆ ಸಮುದ್ರದ ನೀರು ಬಿಸಿಯಾಗುವುದರಿಂದ ಅದರ ಗಾತ್ರವೂ ಹೆಚ್ಚಾಗುತ್ತದೆ. ಈ ಎರಡೂ ಕಾರಣಗಳಿಂದ ಸಮುದ್ರದ ಮಟ್ಟ ನಿರಂತರವಾಗಿ ಏರುತ್ತಿದೆ. 2014ರಿಂದ 2023ರವರೆಗೆ ಜಾಗತಿಕ ಸಮುದ್ರ ಮಟ್ಟ ವರ್ಷಕ್ಕೆ ಸರಾಸರಿ 4.7 ಮಿಲಿಮೀಟರ್‌ಗಳಷ್ಟು ಏರಿಕೆಯಾಗಿದೆ. 2024ರಲ್ಲಿ ಮಾತ್ರ 5.9 ಮಿಲಿಮೀಟರ್ ಏರಿಕೆಯಾಗಿದ್ದು, ಇದು ಹೊಸ ದಾಖಲೆಯಾಗಿದೆ. ಎಲ್‌ನಿನೋ ಪರಿಣಾಮ ಮತ್ತು ಅಸಾಮಾನ್ಯ ಸಮುದ್ರ ಉಷ್ಣತೆಯಿಂದ ಈ ಏರಿಕೆಯ ವೇಗ ಮತ್ತಷ್ಟು ಹೆಚ್ಚಿದೆ. ಕೆಲವು ಪ್ರದೇಶಗಳಲ್ಲಿ ಸಮುದ್ರದ ತಾಪಮಾನ ಕಳೆದ 4,000 ವರ್ಷಗಳಲ್ಲಿ ಕಂಡುಬಂದಿಲ್ಲದಷ್ಟು ವೇಗದಲ್ಲಿ ಏರಿಕೆಯಾಗುತ್ತಿದೆ ಎಂದು ವರದಿ ಎಚ್ಚರಿಸಿದೆ.
ಪ್ರಸ್ತುತ ವಿಶ್ವದ ಸುಮಾರು 77 ಕೋಟಿ ಜನರು, ಅಂದರೆ ಜಾಗತಿಕ ಜನಸಂಖ್ಯೆಯ ಸುಮಾರು 10 ಪ್ರತಿಶತ ಜನರು, ಸಮುದ್ರ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರು ನೇರವಾಗಿ ಸಮುದ್ರ ಮಟ್ಟ ಏರಿಕೆಯ ಅಪಾಯ ಎದುರಿಸುತ್ತಿದ್ದಾರೆ.

ಈ ಬೆಳವಣಿಗೆ ಪರಿಸರದ ಸಮಸ್ಯೆ ಮಾತ್ರವಲ್ಲದೆ ಕೃಷಿ, ವ್ಯಾಪಾರ, ಪ್ರವಾಸೋದ್ಯಮ, ಸಾಂಸ್ಕೃತಿಕ ಪರಂಪರೆ ಮತ್ತು ಜನರ ಜೀವನದ ಮೇಲೂ ಪರಿಣಾಮ ಬೀರುತ್ತಿದೆ.
ಸಮುದ್ರ ಮಟ್ಟ ಏರಿಕೆಯ ಅತ್ಯಂತ ಗಂಭೀರ ಅಂಶವೆಂದರೆ, ಒಮ್ಮೆ ಅದು ಏರಿದ ಬಳಿಕ ಅದನ್ನು ಹಿಂದಿನ ಸ್ಥಿತಿಗೆ ತರುವುದು ಸುಲಭವಲ್ಲ. ಆದ್ದರಿಂದ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಅಪಾಯದಲ್ಲಿರುವ ಪ್ರದೇಶಗಳಿಗೆ ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವುದು, ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಅಗತ್ಯ ಹಣಕಾಸು ನೆರವು ಒದಗಿಸುವುದು ಮುಖ್ಯವಾಗಿದೆ. ಇಲ್ಲವಾದರೆ ಮುಂದಿನ ದಶಕಗಳಲ್ಲಿ ಕೋಟ್ಯಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ