LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು'- ಭಾಗವತ್‌

ನವದೆಹಲಿ:ನಮ್ಮ ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 1947ರಲ್ಲಿ ಭಾರತದಿಂದ ಪ್ರತ್ಯೇಕಗೊಂಡವರು ಈಗ ತಾವು ತಪ್ಪು ಮಾಡಿದ್ದೇವೆ ಎಂದು ಭಾವಿಸುತ್ತಿರುವಂತೆ, ಇಂದಿನ ಯುವಪೀಳಿಗೆ ವಯಸ್ಕರಾಗುವ ಮೊದಲು ಅಖಂಡ ಭಾರತ ಅಥವಾ ಅವಿಭಜಿತ ಭಾರತದ ಕನಸು ನನಸಾಗಲಿದೆ ಎಂದರು.

ಮಹಾರಾಷ್ಟ್ರದಲ್ಲಿ ಮೀಸಲಾತಿಗಾಗಿ ಮರಾಠ ಸಮುದಾಯದ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮೋಹನ್‌ ಭಾಗವತ್‌ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮವರನ್ನೇ ನಾವು ಕತ್ತಲೆಯಲ್ಲಿ ಇರಿಸಿದ್ದೇವೆ. ನಾವು ಅವರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಇದರ ಪರಿಣಾಮ ಇದು 2000 ವರ್ಷಗಳವರೆಗೂ ಮುಂದುವರೆಯಿತು. ನಾವು ಅವರಿಗೆ ಸಮಾನತೆಯನ್ನು ನೀಡುವವರೆಗೆ, ಕೆಲವು ವಿಶೇಷ ಪರಿಹಾರಗಳನ್ನು ಒದಗಿಸಬೇಕಾಗುತ್ತದೆ. ಇದರಲ್ಲಿ ಮೀಸಲಾತಿಯೂ ಕೂಡಾ ಒಂದು. ನಮ್ಮ ಸಮಾಜದಲ್ಲಿ ತಾರತಮ್ಯ ಹೋಗಿಲ್ಲ. ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು. ನಾವು ಸಂವಿಧಾನದಲ್ಲಿ ಒದಗಿಸಿರುವ ಮೀಸಲಾತಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ ಎಂದು ಭಾಗವತ್‌ ಹೇಳಿದರು

ಮೀಸಲಾತಿ ಎಂದರೆ ಗೌರವವನ್ನು ನೀಡುವುದಾಗಿದೆ. ಇದು ಆರ್ಥಿಕ ಅಥವಾ ರಾಜಕೀಯ ಸಮಾನತೆಯನ್ನು ಖಚಿತಪಡಿಸುವ ವಿಷಯವಲ್ಲ ಎಂದು ಭಾಗವತ್‌ ತಿಳಿಸಿದ್ದಾರೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಸಾದ ಸೇವಿಸಿ ಅಸ್ವಸ್ಥ ಪ್ರಕರಣ : ಲ್ಯಾಬ್ ರಿಪೋರ್ಟ್ ನಲ್ಲಿ ಬಯಲಾಯಿತು ವಿಷ ಆಹಾರದ ಸತ್ಯ.!'ದೇಶಕ್ಕೆ ಎದುರಾಗಿರುವ ಸಂಕಷ್ಟ ಎದುರಿಸಿ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಿದೆ': ಡಿಕೆಶಿಜಾರಿ ನಿರ್ದೇಶನಾಲಯದ ಆರೋಪಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರು ಉಲ್ಲೇಖಯುವತಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೊಗೆ ಸಾರ್ವಜನಿಕರಿಂದ ಮಂಗಳಾರತಿ..!'ಬಿಜೆಪಿಯವರದ್ದು ಡೋಂಗಿ ಹಿಂದುತ್ವ' -ಸಿಎಂ ವ್ಯಂಗ್ಯವಖ್ಫ್ ಆಸ್ತಿಗಳ ಒತ್ತುವರಿ ಕುರಿತು ತಿಂಗಳಲ್ಲಿ ವರದಿ ನೀಡಲು ಸಚಿವ ಜಮೀರ್ ಗಡುವುಶಬರಿಮಲೆ – ಪಂಪಾ ನದಿಯಲ್ಲಿ ಮುಳುಗಿ ಇಬ್ಬರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಸಾವುಜನರ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಸುಮ್ಮನಿರಲ್ಲ: ಡಿಕೆಶಿಸೊಸೆ ಗಂಡು ಮಗು ಹೆರಲಿಲ್ಲವೆಂದು 2 ತಿಂಗಳ ಮೊಮ್ಮಗಳ ಕತ್ತು ಹಿಸುಕಿ ಕೊಂದ ಅತ್ತೆಮಾವಬಿಗ್ ಬಾಸ್ ಮನೆಗೆ ಬಂದ ಡ್ರೋನ್ ಪ್ರತಾಪ್ ತಂದೆ ತಾಯಿ….ಕಣ್ಣೀರು ಹಾಕಿ ಗಳಗಳನೆ ಅತ್ತ ಡ್ರೋನ್ ಪ್ರತಾಪ್