LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಮಾಧಿಯಿಂದ ಎದ್ದು ಬಂದು ದೂರು ಕೊಟ್ಟ ಮಹಿಳೆ..! ಆರೋಪಿಗಳು ಅರೆಸ್ಟ್

ತನ್ನ ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಯೋಗ ಶಿಕ್ಷಕಿಯ ಕಿಡ್ನಾಪ್ ಮಾಡಿ ಕೊಲೆ ಮಾಡಲು ಸುಪಾರಿ ನೀಡಿದ್ದ ಮಹಿಳೆ ಸೇರಿದಂತೆ 6 ಮಂದಿ ಅಪಹರಣಕಾರರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಯೋಗಾ ಶಿಕ್ಷಕಿಯೊಬ್ಬರನ್ನು ಬೆಂಗಳೂರಿನಿಂದ ಕಿಡ್ನ್ಯಾಪ್ ಮಾಡಿದ್ದ ಕಿರಾತಕರು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧಿಸಿದಾಗ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿ, ಗುಂಡಿ ತೋಡಿ ಹೂತು ಹಾಕಿದ್ದರು. ಆದರೂ ಮಹಿಳೆ ಸಮಾಧಿಯಿಂದ ಎದ್ದು ಬಂದು ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೆ.ಆರ್.ಪುರಂನಲ್ಲಿ ವಾಸವಾಗಿದ್ದ ಯೋಗಾ ಶಿಕ್ಷಕಿಯನ್ನು ಐವರು ಅ.23ರಂದು ಕಿಡ್ನ್ಯಾಪ್ ಮಾಡಿ, ಚಿಕ್ಕಬಳ್ಳಾಪುರದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಲೈಂಗಿಕ ಕಿರುಕುಳ ನೀಡಿದ್ದು, ಮಹಿಳೆ ವಿರೋಧಿಸಿದ್ದಕ್ಕೆ ಆಕೆಯ ಕತ್ತು ಹಿಸುಕಿ ಹಿಂಸೆ ನೀಡಿದ್ದಾರೆ. ನಂತರದಲ್ಲಿ ಗುಂಡಿ ತೋಡಿ ಆಕೆಯನ್ನು ಹೂತು ಹಾಕಿ, ಅದರ ಮೇಲೆ ಮರದ ಕೊಂಬೆಯನ್ನಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದರು.

ಹೂತು ಹಾಕಿದ್ದರೂ ಸಮಾಧಿಯಿಂದ ಜೀವಂತವಾಗಿ ಎದ್ದು ಬಂದಿರುವ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಿಡ್ನ್ಯಾಪ್ ಆಗಿದ್ದ ಶಿಕ್ಷಕಿ ಮಹಿಳೆ ದೂರು ಆಧರಿಸಿ ಆರೋಪಿಗಳ ಪತ್ತೆಗಾಗಿ ಚಿಕ್ಕಬಳ್ಳಾಪುರ ಎಸ್ ಪಿ ಕುಶಲ್ ಚೌಕ್ಸೆ ಪೊಲೀಸರ ವಿಶೇಷ ತಂಡ ರಚಿಸಿದ್ದರು. ಪ್ರಕರಣ ಸಂಬಂಧ ಸದ್ಯ ಓರ್ವ ಮಹಿಳೆ ಸೇರಿ ಆರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಲ್ಲಿಸಿದ್ದ ಶಾಲಾ ಬಸ್ಸಿನ ಒಳಗೆ ಬೆಂಕಿ ಅವಘಡ : ವ್ಯಕ್ತಿ ಸಜೀವ ದಹನಆ.15ರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ!!ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ..!1990ರ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಶ್ನಾ ಚೌಧರಿಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಹಾಗಾದರೆ ಹೀಗೆ ಮಾಡಿ.! ಸಂತಾನ ಪ್ರಾಪ್ತಿ ಗ್ಯಾರಂಟಿ.!ತಾ.ಪಂ.ಜಿ.ಪಂ ಚುನಾವಣೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು ಇದು.!ಭೀಕರ ರಸ್ತೆ ಅಪಘಾತ 7 ಮಕ್ಕಳು ಸೇರಿ 10 ಜನ ಸಾವು.!ದಿನದ ಮಂಡಕ್ಕಿ ಒಗ್ಗರಣೆ-ಮಿರ್ಚಿ 13-08-2025.!ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಮಹಿಳಾ ಉದ್ಯೋಗ ಕೋಶ ಪ್ರಾರಂಭ.!