ಸರಕಾರಿ ಬಸ್ ನಲ್ಲಿ ಪ್ರಯಾಣಮಾಡುವಾಗ ನಿಮ್ಮಲ್ಲಿ ದುಡ್ಡು ಇಲ್ವ ..?
ಬೆಂಗಳೂರು: ಬಸ್ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ವಾಯುವ್ಯ ಸಾರಿಗೆ ಸಂಸ್ಥೆ UPI ಮೂಲಕ ಟಿಕೆಟ್ ಪಡೆಯಲು ಅವಕಾಶ ನೀಡಿದೆ.
ಇನ್ಮುಂದೆ ನೀವು ನಗದು ಹಣವಿಲ್ಲದೆ ಫೋನ್ ಮೂಲಕ ಆನ್ ಲೈನ್ ನಲ್ಲಿ ಪೇಮೆಂಟ್ ಮಾಡಿ, ಟಿಕೆಟ್ ಖರೀದಿಸಬಹುದು.
UPI ಕೋಡ್ ಬಳಸಿಕೊಂಡು ಫೋನ್ ಪೇ, ಗೂಗಲ್ ಪೇ ಸೇರಿ ಇತರೆ ವಿಧಗಳಲ್ಲಿ ಹಣ ಪಾವತಿಸಿ, ಪ್ರಯಾಣಿಸಬಹುದು ಎಂದು ಇಲಾಖೆ ತಿಳಿಸಿದೆ.
ಇದರಿಂದ ಬಸ್ ಸಂಚಾರದಲ್ಲಿ ಚಿಲ್ಲರೆ ಹಣದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. BMTC & KSRTCಗೂ ವಿಸ್ತರಿಸಲು ಇಲಾಖೆ ಚಿಂತನಡೆಸಿದೆ ಎಂಬುದು ಸುದ್ದಿ.!
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.