LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿ ರೌಡಿಶೀಟರ್ ನೇಮಕ..!

ಯಾದಗಿರಿ: ರೌಡಿಶೀಟರ್ ಓರ್ವ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿ ನೇಮಕಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಸರ್ಕಾರಿ ಶಾಲೆ ಅತಿಥಿ ಶಿಕ್ಷಕನಾಗಿ ರೌಡಿಶೀಟರ್ ಭಾಗಪ್ಪ ಎಂಬಾತ ನೇಮಕಗೊಂಡಿದ್ದು, ಕಳೆದ 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾನೆ.
ಹಿಂದಿ ಭಾಷೆ ಶಿಕ್ಷಕನಾಗಿದ್ದಾನೆ. ರೌಡಿಶೀಟರ್ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿದ್ದರೂ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.

ರೌಡಿಶೀಟರ್ ಶಿಕ್ಷಕನ ಉಪಟಳಕ್ಕೆ ಬೇಸತ್ತು ಉಳಿದ ಶಿಕ್ಷಕರು ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. 2017ರಲ್ಲಿ ಭಾಗಪ್ಪ ವಿರುದ್ಧ ರೌಡಿಶೀಟರ್ ಓಪನ್ ಆಗಿದೆ. ಆದರೂ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಶಾಲೆಗೆ ಕುಡಿದು ಬಂದು ವಿದ್ಯಾರ್ಥಿಗಳು, ಶಿಕ್ಷಕರ ಜೊತೆ ಜಗಳಮಾಡುವುದು, ಅಸಭ್ಯವಾಗಿ ವರ್ತಿಸುವುದು ಮಾಡುತ್ತಿದ್ದಾನೆ. ಈ ಬಗ್ಗೆ ಸಾರ್ವಜನಿಕ ಗ್ರಂಥಾಲಯದ ಮೇಲ್ವಿಚಾರಕ ಶಿವಪ್ಪ ಎಂಬುವವರು ಯಾದಗಿರಿ ಡಿಸಿಗೆ ದೂರು ನೀಡಿದ್ದು, ಭಾಗಪ್ಪನನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಯಂ ಸೇವಾ ಸಂಸ್ಥೆಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ.!ವಚನ: --ತೋಂಟದ ಸಿದ್ಧಲಿಂಗ ಶಿವಯೋಗಿಗಳು .!ಬಾಂಗ್ಲಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತಮೊಸರು ಕುಡಿಕೆ ಅಭ್ಯಾಸದ ವೇಳೆ ಬಾಲಕ ಸಾವುಒಳಮೀಸಲಾತಿ : ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ತಾರತಮ್ಯ.!ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಅಪಪ್ರಾಚಾರ ಮಾಡುತ್ತಿರುವವರ ಮೇಲೆ  ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ.!ಪ್ರೀತಿಸಿದ ಯುವಕನಿಂದ ಮತಾಂತರಕ್ಕೆ ಒತ್ತಾಯ: ಯುವತಿ ಸಾವಿಗೆ ಶರಣುಪತ್ನಿಯ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ ಪತಿ - ವೀಡಿಯೋ ವೈರಲ್‌ಪ್ಲಾಸ್ಟಿಕ್ ಮಾಲಿನ್ಯದಿಂದ ಮೌನವಾಗುತ್ತಿರುವ ಪಕ್ಷಿಗಳು!ಕಾಡಾನೆ ಜತೆ ಸೆಲ್ಫೀ ವ್ಯಕ್ತಿಗೆ 25 ಸಾವಿರ ರೂ. ದಂಡ.!