LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಿಎಂ ಮನೆ ಮುತ್ತಿಗೆ- ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ನಾಯಕರ ಬಂಧನ

ಬೆಂಗಳೂರು :ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮತ್ತು ಮೈಸೂರಿನ ಮೂಡಾ ಅವ್ಯವಹಾರವನ್ನು ಖಂಡಿಸಿ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲೆಂದು ಕುಮಾರಕೃಪಾ ವಸತಿ ಗೃಹದಿಂದ ಹೊರಟ ಬಿಜೆಪಿ ಜನಪ್ರತಿನಿಧಿಗಳನ್ನು ಪೊಲೀಸರು ತಡೆದು ಬಂಧಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಕುಮಾರಕೃಪಾ ವಸತಿ ಗೃಹದಿಂದ ಕಾಲ್ನಡಿಗೆ ಮೂಲಕ ಹೊರಟು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಲಾಗಿತ್ತು. ಅದರಂತೆ, ಶಾಸಕರು, ಮೇಲ್ಮನೆ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿದ್ದರು.

ವಿಜಯೇಂದ್ರ, ಆರ್.ಅಶೋಕ್ ಅವರ ನೇತೃತ್ವದಲ್ಲಿ ಶಾಸಕರು ಹೊರಬರುತ್ತಿದ್ದಂತೆ ತಡೆದ ಪೊಲೀಸರು ಎಲ್ಲರನ್ನೂ ಬಂಧಿಸಿದರು.ಇದೇವೇಳೆ ಬಿಜೆಪಿ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಶಾಸಕರು ‘ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ’ ಕೂಗಿದರು. ಹಲವು ಜನಪ್ರತಿನಿಧಿಗಳನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದರು.

‘ಮೋಸ, ಅನ್ಯಾಯ ಅನ್ಯಾಯ’ ಎಂದು ಕೂಗಿದ ಆರ್.ಅಶೋಕ್ ಅವರು, ‘ಈ ಸರಕಾರದ ದೌರ್ಜನ್ಯವನ್ನು ಖಂಡಿಸುತ್ತೇನೆ; ವಿಪಕ್ಷ ನಾಯಕನಾಗಿ ಪ್ರತಿಭಟನೆಗೆ ಅವಕಾಶ ಕೊಡುತ್ತಿಲ್ಲ’ ಎಂದು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆಯಿಂದ ಬೆಂಬಲ ಬೆಲೆಯಲ್ಲಿ ತೋಗರಿ, ಕಡಲೇಕಾಳು ಖರೀದಿ ಪ್ರಾರಂಭ.! ರೇಟ್ ಇಂತಿದೆ.!ಅಕ್ರಮ ಮರಳು ಸಾಗಾಣಿಕೆ ತಡೆಯಲು ಈ ನಂಬರ್ ಗೆ ಕರೆಮಾಡಿ.!ಕೋರ್ಟ್ ಕಚೇರಿ ವ್ಯಾಜ್ಯಗಳಿಂದ ನರಳುತ್ತಿದ್ದರೆ ಸಂಸಾರ ಸಮಸ್ಯೆಗಳಿಂದ ಜೀವನವೇ ನಸ್ವರ ವಾಗಿದ್ದರೆ  ತಾಂತ್ರಿಕ ಹಾಗೂ ಮಾಂತ್ರಿಕ ಸಮಸ್ಯೆಗಳಿಂದ ಬಗೆಹರಿಸಬಹುದು !ರೈಲ್ವೆ ಸೇತುವೆಗಳ ನಿರ್ಮಾಣಕ್ಕೆ ರೂ.164.00 ಕೋಟಿ ಬಿಡುಗಡೆಗೆ : ಸಂಸದ ಗೋವಿಂದ ಕಾರಜೋಳವಚನ: --ಜೇಡರ ದಾಸಿಮಯ್ಯ10 ನೇ ತರಗತಿ ಪಾಸಾಗಿದ್ದೀರಾ: ಹೋಂ ಗಾರ್ಡ್​​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!ಬೆಂಗಳೂರು ಸಮೀಪವೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭ: ಅಶ್ವಿನಿ ವೈಷ್ಣವ್ಲೈಂಗಿಕತೆ ಬಗ್ಗೆ ರಣವೀರ್ ಆಕ್ಷೇಪಾರ್ಹ ಹೇಳಿಕೆ: ತನಿಖೆಗೆ ಮಹಾರಾಷ್ಟ್ರ ಆದೇಶಮಹಿಳೆಯರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ಗೃಹ ಲಕ್ಷ್ಮೀ ಹಣ: ಲಕ್ಷ್ಮೀ ಹೆಬ್ಬಾಳ್ಕರ್‌ನಟ ಡಾಲಿ ಧನಂಜಯ್, ಡಾಕ್ಟರ್ ಧನ್ಯತಾ ಅದ್ದೂರಿ ಹಳದಿ ಶಾಸ್ತ್ರ