LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಿಡಿಲು ಬಡಿದು ಕೋಮಾ ಸ್ಥಿತಿಯಲ್ಲಿದ್ದ ಭಾರತ ಮೂಲದ ವಿದ್ಯಾರ್ಥಿನಿ ಚೇತರಿಕೆ

ಅಮೆರಿಕ: ಸಿಡಿಲು ಬಡಿದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಭಾರತ ಮೂಲದ ವಿದ್ಯಾರ್ಥಿನಿ ಈಗ ಚೇತರಿಕೆ ಕಂಡಿದ್ದಾರೆ. ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಸುಸ್ರೂಣ್ಯ ಕೋಡೂರು ಜುಲೈ 2 ರಂದು ಸ್ಯಾನ್ ಜೆಸಿಂಟೋ ಸ್ಮಾರಕ ಉದ್ಯಾನದ ಬಳಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಿಡಿಲು ಬಡಿದಿದೆ.

ಬಳಿಕ ತ್ರೀವ ನಿಗಾ ಘಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಈಗ ವೆಂಟಿಲೇಟರ್ ಇಲ್ಲದೆಯೇ ಉಸಿರಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಪೋಷಕರನ್ನು ಹೈದರಾಬಾದ್‌ನಿಂದ ಹೂಸ್ಟನ್‌ಗೆ ಕರೆತರಲು ಪ್ರಯತ್ನಿಸುತ್ತಿರುವ ಕೋಡೂರಿನ ಕುಟುಂಬದ ಸದಸ್ಯರು, ಪೋಷಕರ ವೀಸಾಗಳಿಗೆ ಅನುಮತಿ ದೊರೆತಿದೆ.
ಸಿಡಿಲು ಬಡಿದ ಹೊಡೆತಕ್ಕೆ ಆಕೆ ಕೆರೆಗೆ ಬಿದ್ದ ಹಿನ್ನಲ್ಲೆ ಕೋಮಾ ಸ್ಥಿತಿಯಲ್ಲಿದ್ದಳು. ಚಿಕಿತ್ಸೆಗೆ ಸಹಾಯ ಮಾಡಲು ಮತ್ತು ಆಕೆಯ ಪೋಷಕರೊಂದಿಗೆ ಅವಳನ್ನು ಸೇರಿಸಲು ಕುಟುಂಬವು ’GoFundMe’ ಅನ್ನು ರಚಿಸಿದೆ.’ ಈ ಮೂಲಕ ಕುಟುಂಬವು ಎಲ್ಲರ ಸಹಾಯಕ್ಕಾಗಿ ಮನವಿ ಮಾಡಿದೆ ಇದರಿಂದ ಅವರು ಶೀಘ್ರದಲ್ಲೇ ಮೊದಲಿನಂತಾಗುತ್ತಾಳೆ ಎಂದು ಹೇಳಿದ್ದಾರೆ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಕೆ ಅಮೆರಿಕಕ್ಕೆ ಹೋಗಿದ್ದಳು, ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಳು. ಇಂಟರ್ನ್‌ಶಿಪ್‌ಗಾಗಿ ಎದುರು ನೋಡುತ್ತಿದ್ದಳು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಅಬಕಾರಿ ಇಲಾಖೆ - ಮದ್ಯದ ದರದಲ್ಲಿ ಏರಿಕೆ‌ಕರಸೇವಕರ ಬಂಧನ ಖಂಡಿಸಿ ನಾಳೆ ರಾಜ್ಯವ್ಯಾಪಿ ಪ್ರತಿಭಟನೆಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು..!ಷರತ್ತು ಉಲ್ಲಂಘನೆ - ಭಾರತದ 71 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ಕರ್ನಾಟಕದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭಶಬರಿಮಲೆ ಮಕರವಿಳಕ್ಕು ಉತ್ಸವ – ಮೊದಲ ದಿನವೇ ಭಕ್ತರ ಸಾಗರಸುಮ್ಮನೆ ICU ಗೆ ದಾಖಲು ಮಾಡುವ ಹಾಗಿಲ್ಲ….ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ನಿಯಮಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಸಾರ್ವತ್ರಿಕ ರಜೆ ಘೋಷಣೆಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ..!ರಾಜ್ಯದ ಪ್ರತಿ ಮನೆಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ: ಶರಣ್ ಪಂಪ್‌ವೆಲ್ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ - ನಾಲ್ಕು ಮಂದಿ ಮೃತ್ಯು