LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ | CM Siddaramaiah

ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಮೇಲೆ ಮತ್ತೊಂದು ಭೂ ಅಕ್ರಮ ಆರೋಪ ಕೇಳಿ ಬಂದಿದೆ. ಆರ್‌ಟಿಐ ಕಾರ್ಯಕರ್ತ ಗಂಗರಾಜು ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದಾರೆ.

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ 20 ಗುಂಟೆ ಜಾಗವನ್ನು 2023ರ ಸೆಪ್ಟೆಂಬರ್‌ 29 ರಂದು ಸಿಎಂ ಪತ್ನಿ ಪಾರ್ವತಮ್ಮ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ‌ ಸ.ನಂ 454ರ ಗಣೇಶ್ ದೀಕ್ಷಿತ್ ಎಂಬವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗ ಅದು. ಅದರಲ್ಲಿ 20 ಗುಂಟೆ ಜಾಗವನ್ನ ಸಿಎಂ ಪತ್ನಿ ಖರೀದಿ ಮಾಡಿದ್ದಾರೆ. 20 ಗುಂಟೆ ಜಾಗಕ್ಕೆ 1 ಕೋಟಿ 85 ಲಕ್ಷ ರೂ. ನೀಡಿದ್ದಾರೆ.

ಅದರಲ್ಲಿ 8998 ಚದರಡಿ ಜಾಗ ಮೂಡಾಗೆ ಸೇರಿದ್ದು (ರಸ್ತೆ ಮತ್ತು ಪೈಪ್‌ಲೈನ್ ಉದ್ದೇಶಕ್ಕೆ). ರಸ್ತೆ ಮತ್ತು ಪೈಪ್‌ಲೈನ್‌ಗೆ ಇದ್ದ ಜಾಗವನ್ನು ಸೇರಿಸಿಕೊಂಡು ತಮ್ಮ ಹೆಸರಿಗೆ ಪಾರ್ವತಿ ಅವರು ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಆರ್‌ಟಿಐ ಕಾರ್ಯಕರ್ತ ಗಂಗರಾಜು 2024ರ ಆಗಸ್ಟ್‌ 20 ರಂದು ಈ ಸಂಬಂಧ ಆರ್‌ಟಿಐ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಎಚ್ಚೆತ್ತ ಸಿಎಂ ಪತ್ನಿ ದಿ.31.8.2024 ರಂದು ಮತ್ತೆ ರಿಜಿಸ್ಟರ್ ತಿದ್ದುಪಡಿ ಮಾಡಿಸಿ ಮುಡಾದ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ರಿಜಿಸ್ಟರ್ ಮಾಡಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ರಮ ಗಣಿಗಾರಿಕೆ ಕೇಸ್: ಶಾಸಕ ಜನಾರ್ದನ ರೆಡ್ಡಿ ಅಪರಾಧಿ ಎಂದು ತೀರ್ಪು-7 ವರ್ಷ ಜೈಲುಭದ್ರತಾ ಪಡೆಗಳ ಕಾರ್ಯಾಚರಣೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಶಕ್ಕೆಮಂಗಳೂರು ಹೈ ಅಲರ್ಟ್: ವೈರಲ್‍ ಪೋಸ್ಟ್ ನಿಂದ ರಾತ್ರಿ 9:30ರೊಳಗೆ ವ್ಯಾಪಾರಗಳು ಬಂದ್‍ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ಥಾನಕ್ಕೆ ಮುಖಭಂಗಯುದ್ಧದ ಭೀತಿಯಿಂದ ಪಾಕಿಸ್ತಾನ ಸೇನೆಯಲ್ಲಿ ಹೆಚ್ಚಿದ ಬಂಡಾಯ :ಪಾಕ್ ಸೇನೆಗೆ 800 ಬಲೂಚ್ ಸೈನಿಕರು ಸಾಮೂಹಿಕ ರಾಜೀನಾಮೆಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾಳೆ ಮಾಕ್​ ಡ್ರಿಲ್​​ಜಾತಿ ಜನಗಣತಿ ಕುರಿತು ಪ್ರಧಾನಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆಜೇಮ್ಸ್, ಜೆಲ್ಲಿಸ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ- ಟೆಸ್ಟ್​​ಗೆ ಮುಂದಾದ ಆಹಾರ ಇಲಾಖೆಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಬೇಬಿ ಬಂಪ್‌ನೊಂದಿಗೆ 'ಮೆಟ್ ಗಾಲಾ'ದಲ್ಲಿ ಮಿಂಚಿದ ನಟಿ ಕಿಯಾರಾ ಅಡ್ವಾಣಿ