LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸುಪ್ರೀಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿ ಜಾರಿಗೊಳ್ಳಲಿ; ಎಂ.ಶಿವಮೂರ್ತಿ

ಚಿತ್ರದುರ್ಗ : ಸುಪ್ರೀಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಆಯೋಗ ರಚಿಸುವ ನಾಟಕವಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಎಂ.ಶಿವಮೂರ್ತಿ ಚಳ್ಳಕೆರೆ ಹೇಳಿದರು.

ಒಂದೊಂದು ಕಡೆ ಒಂದೊಂದು ರೀತಿಯ ವಿಭಿನ್ನ ಹೇಳಿಕೆಗಳನ್ನು ನೀಡುತ್ತ ಮಾದಿಗರನ್ನು ನಿರ್ಲಕ್ಷಿಸುವ ಬದಲು ಮೊದಲು ಒಳ ಮೀಸಲಾತಿ ಜಾರಿಗೆ ತರಲಿ. ಇಲ್ಲವಾದಲ್ಲಿ ಅಹಿತಕರ ಹೋರಾಟಕ್ಕೂ ಮಾದಿಗರು ಸಿದ್ದರಿದ್ದೇವೆ. ದತ್ತಾಂಶ, ಡಾಟ ಗೊತ್ತಿಲ್ಲದವರಂತೆ ನಾಟಕವಾಡುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಆಯೋಗದ ಮೇಲೊಂದು ಆಯೋಗ ರಚಿಸುವುದಾಗಿ ಹೇಳಿ ನಮ್ಮ ಕಿವಿಗೆ ಹೂವು ಮುಡಿಸುವುದು ಬೇಡ ಎಂದು ಎಚ್ಚರಿಸಿದರು.

ವಿಧಾನಸಭೆ ಉಪ ಚುನಾವಣೆ ನೆಪ ಹೇಳುತ್ತ ಒಳ ಮೀಸಲಾತಿ ಜಾರಿಗೆ ತರುವುದನ್ನು ವಿಳಂಭ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಶಿವಮೂರ್ತಿ ಆಂಧ್ರ ಮಾದರಿಯಲ್ಲಿ ಹೋರಾಟಕ್ಕಿಳಿದು ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಉರುಳಿಸುವುದಾಗಿ ಕಿಡಿ ಕಾರಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್, ಎಸ್ಸಿ.ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಗೂಳಿಹಟ್ಟಿ , ಬಿಜೆಪಿ. ಎಸ್ಸಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್ ,  ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮರಿಪಾಲಯ್ಯ, ಡಿ.ಓ.ಮುರಾರ್ಜಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಶಂಕರಸ್ವಾಮಿ, ಡಿ.ತಿಪ್ಪೇಸ್ವಾಮಿ, ಸಿದ್ದಾರ್ಥ ವಿ. ನವೀನ್ ನಾಯಕ, ಚನ್ನಗಾನಹಳ್ಳಿ ಮಲ್ಲೇಶ್, ಕರಿಕೆರೆ ತಿಪ್ಪೇಸ್ವಾಮಿ, ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂದಿನ ಮೂರು ದಿನ ರಾಜ್ಯದಲ್ಲಿ ಭಾರಿ ಮಳೆ – ಹವಾಮಾನ ಇಲಾಖೆ10 ತಿಂಗಳ ಮಗುವಿನ ಪ್ರಾಣ ಕಸಿದ ತಂದೆ ಎಸೆದ ತುಂಡು ಬೀಡಿ!!ಕ್ಯಾನ್ಸರ್’ಗೆ ಇನ್ನು ಕಿಮೋ ಥೆರಪಿ ಬೇಕಿಲ್ಲ..!! ಮಹತ್ವದ ಆವಿಷ್ಕಾರ ಹುಟ್ಟುಹಾಕಿದ ಸಂಶೋಧಕರ ತಂಡಇಸ್ರೇಲ್‌-ಇರಾನ್‌ ರಣರಂಗಕ್ಕೆ ಅಮೆರಿಕ ನೇರ ಎಂಟ್ರಿ?'ವಿಚ್ಛೇದನದ ಭಯಕ್ಕೆ ವಿವಾಹ ಆಗುತ್ತಿಲ್ಲ'- ನಟ ಸಲ್ಮಾನ್‌ ಖಾನ್‌ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳ ಒಂದು ಶನಿವಾರ ‘ಸಂಭ್ರಮ ಶನಿವಾರ’ – ಬ್ಯಾಗ್ ರಹಿತ ದಿನ; ಶಿಕ್ಷಣ ಇಲಾಖೆ ಮಹತ್ವದ ಆದೇಶಲೋಕಾಯುಕ್ತ ಹೆಸರು ಹೇಳಿ ಕೋಟಿ..ಕೋಟಿ ರೂಪಾಯಿ ಲೂಟಿ..!!ಉತ್ತಮ ಸಂಬಳದ ವೃತ್ತಿ ತೊರೆದು ಐಎಎಸ್ ಅಧಿಕಾರಿಯಾದ ಪ್ರಿಯಾ ರಾಣಿ ಯಶೋಗಾಥೆಯು.ಪಿ.ಎಸ್.ಸಿ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನಜೂನ್ 19 ರಂದು ನೇರ ನೇಮಕಾತಿ ಸಂದರ್ಶನ