LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು : ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿ

ನವದೆಹಲಿ: ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಗುರುವಾರ ಪ್ರಕರಣದ ತೀರ್ಪನ್ನು ಪ್ರಕಟಿಸಿದೆ. ಹೌದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಕೈದಿಗಳ ವಿರುದ್ಧ ತಾರತಮ್ಯಕ್ಕೆ ಜಾತಿ ಕಾರಣವಾಗಬಾರದು. ಅಂತಹ ವಿಷಯಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆದೇಶ ಹೊರಡಿಸಿದೆ. ಕೆಲಸದ ವಿಚಾರದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಬೇಕು. ಅಪಾಯಕಾರಿಯಾದ ಕೊಳಚೆ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈದಿಗಳಿಗೆ ಅವಕಾಶ ನೀಡಬಾರದು. ಒಂದು ಜಾತಿಯವರನ್ನು ಕಸಗುಡಿಸುವವರನ್ನಾಗಿ ಆಯ್ಕೆ ಮಾಡುವುದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ವಿವರಿಸಿದ್ದಾರೆ. ಕೆಳ ಜಾತಿಯ ಕೈದಿಗಳಿಗೆ ಶೌಚಗೃಹ ಸ್ವಚ್ಛತೆ, ಕಸ ಗುಡಿಸುವುದು, ಮೇಲ್ಜಾತಿಯವರು ಅಡುಗೆ ಕೆಲಸಗಳನ್ನು ಹಂಚುವುದು ಸೇರಿದಂತೆ ಜೈಲೊಳಗಿನ ಕೆಲಸಗಳು ತಾರತಮ್ಯದಿಂದ ಕೂಡಿವೆ ಎಂದು ಪೀಠ ಸ್ಪಷ್ಟಪಡಿಸಿದೆ. ಇಂತಹ ಕೃತ್ಯಗಳು ಅಸ್ಪೃಶ್ಯತೆ ಅಡಿಯಲ್ಲಿ ಬರುತ್ತವೆ. ಕೈದಿಗಳನ್ನು ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸುವುದು ಬದಲಾವಣೆಯನ್ನು ತರುವುದಿಲ್ಲ ಮತ್ತು ಅವರ ಆತ್ಮಗೌರವವನ್ನು ಉಲ್ಲಂಘಿಸುವುದು ವಸಾಹತುಶಾಹಿಯ ಸಂಕೇತವಾಗಿದೆ ಎಂದು ಅದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಪರಿಶಿಷ್ಟ ಜಾತಿಯ ಕೈದಿಗಳಿಗೆ ಮಾತ್ರ ಸ್ವಚ್ಛತಾ ಕೆಲಸ, ಅಡುಗೆ ಕೆಲಸ ಮೇಲ್ಜಾತಿ ಕೈದಿಗಳಿಗೆ ನೀಡಿರುವುದು ಆಘಾತಕಾರಿ. ಇದು ಕಲಂ 15ರ ಉಲ್ಲಂಘನೆಯಾಗಿದೆ. ತಿಂಗಳೊಳಗೆ ಇದನ್ನು ಸರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶದಲ್ಲಿ ಎಚ್ಚರಿಕೆ ನೀಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್- ದೂರು ದಾಖಲುಡ್ರಗ್ಸ್‌ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟSSLC / PUC ಉತ್ತೀರ್ಣರಾದರೆ ಸಾಕು: ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಬೇಸಿಗೆ ರಜೆಯಲ್ಲಿಯೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ..!ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ; ವಿದ್ಯಾರ್ಥಿ ಸಾವುಮಹಾಕುಂಭಮೇಳ ಮಾಘೀ ಪೂರ್ಣಿಮೆಗೆ 'ವಾಹನ ರಹಿತ ವಲಯ' ವಿಶೇಷ ಸಂಚಾರ ಯೋಜನೆದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ: ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಕೃಷಿಗೂ ಬಂತು AI ತಂತ್ರಜ್ಞಾನ- ಬೆಳೆ ನಿರ್ವಹಣೆಗೆ ಬಗ್ಗೆ ನೀಡಲಿದೆ ಮಾಹಿತಿಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರ ಬಂಧನಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್: ಠಾಣೆಗೆ ಕಲ್ಲು ತೂರಾಟ, ಲಾಠಿಚಾರ್ಜ್ – ಓರ್ವನ ಬಂಧನ