LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೆ.​ 30ರೊಳಗೆ ಆಸ್ತಿ ಘೋಷಿಸದಿದ್ದರೆ ಸಂಬಳವಿಲ್ಲ- ಯುಪಿ ಸರ್ಕಾರ ಆದೇಶ

ಉತ್ತರ ಪ್ರದೇಶ :ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ತನ್ನ ಉದ್ಯೋಗಿಗಳಿಗೆ ಸೆಪ್ಟೆಂಬರ್ 30ರೊಳಗೆ ತಮ್ಮ ಚರ ಹಾಗೂ ಸ್ಥಿರ ಆಸ್ತಿಗಳನ್ನು ಬಹಿರಂಗಪಡಿಸದಿದ್ದರೆ ಸಂಬಳ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಹೊರಡಿಸಿದ ಆದೇಶದಲ್ಲಿ, ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯಸ್ಥರು ತಮ್ಮ ಆಸ್ತಿ ವಿವರಗಳನ್ನು ಮಾನವ್ ಸಂಪದ ಪೋರ್ಟಲ್​ನಲ್ಲಿ ಸೆಪ್ಟೆಂಬರ್ 30 ರೊಳಗೆ ಘೋಷಿಸಬೇಕು.

ಆದೇಶವನ್ನು ಪಾಲಿಸುತ್ತಿರುವ ನೌಕರರನ್ನು ಸಕಾಲದಲ್ಲಿ ಪರಿಶೀಲಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿ (ಡಿಡಿಒ) ಅವರಿಗೆ ವಹಿಸಿದೆ.

ಪೋರ್ಟಲ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಒದಗಿಸುವ ಉದ್ಯೋಗಿಗಳಿಗೆ ಮಾತ್ರ ಸೆಪ್ಟೆಂಬರ್ ಸಂಬಳವನ್ನು ನೀಡಲಾಗುತ್ತದೆ. ಕೆಲವು ನೌಕರರು ಹೆಚ್ಚಿನ ಸಮಯ ಕೋರಿದ ನಂತರ ರಾಜ್ಯ ಸರ್ಕಾರ ಸೆಪ್ಟೆಂಬರ್ 30 ರವರೆಗೆ ಗಡುವನ್ನು ವಿಸ್ತರಿಸಿತು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
10 ನೇ ತರಗತಿ ಪಾಸಾಗಿದ್ದೀರಾ: ಹೋಂ ಗಾರ್ಡ್​​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!ಬೆಂಗಳೂರು ಸಮೀಪವೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭ: ಅಶ್ವಿನಿ ವೈಷ್ಣವ್ಲೈಂಗಿಕತೆ ಬಗ್ಗೆ ರಣವೀರ್ ಆಕ್ಷೇಪಾರ್ಹ ಹೇಳಿಕೆ: ತನಿಖೆಗೆ ಮಹಾರಾಷ್ಟ್ರ ಆದೇಶಮಹಿಳೆಯರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ಗೃಹ ಲಕ್ಷ್ಮೀ ಹಣ: ಲಕ್ಷ್ಮೀ ಹೆಬ್ಬಾಳ್ಕರ್‌ನಟ ಡಾಲಿ ಧನಂಜಯ್, ಡಾಕ್ಟರ್ ಧನ್ಯತಾ ಅದ್ದೂರಿ ಹಳದಿ ಶಾಸ್ತ್ರಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಬರ್ಬರ ಕೊಲೆ; ಆರೋಪಿ ಆಟೋ ಚಾಲಕ ಅರೆಸ್ಟ್'ರಾಜ್ಯ ಸರ್ಕಾರದಿಂದ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ'- ಅಶೋಕ್ವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಮೃತ್ಯುಈ ತಿಂಗಳ 24 ರಂದು ಪಿಎಂ ಕಿಸಾನ್‌ ಹಣ ರೈತರ ಖಾತೆಗೆ ವರ್ಗಾವಣೆ ಸಾಧ್ಯತೆ..!ಶನಿವಾರ ಭರ್ಜರಿ ಇಳಿಕೆ ಕಂಡ ಚಿನ್ನ: ಆಭರಣ ಪ್ರಿಯರು ಫುಲ್‌ ಖುಷ್‌