LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಸೈಬರ್‌ಕ್ರೈಮ್‌ ವಿರುದ್ದ ಸಮರ': ದೇಶಾದ್ಯಂತ 28,000ಕ್ಕೂ ಹೆಚ್ಚು ಮೊಬೈಲ್‌ ಹ್ಯಾಂಡ್‌ಸೆಟ್‌ ಬ್ಲಾಕ್

ನವದೆಹಲಿ: ಸೈಬರ್‌ ಕ್ರೈಂನಲ್ಲಿ ಭಾಗಿಯಾಗಿರುವ ಹಿನ್ನಲೆ ದೇಶಾದ್ಯಂತ 28 ಸಾವಿರಕ್ಕೂ ಹೆಚ್ಚು ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಬ್ಲಾಕ್‌ ಮಾಡುವಂತೆ ಟೆಲಿಕಮ್ಯೂನಿಕೇಶನ್ಸ್‌ ಇಲಾಖೆಯು ಎಲ್ಲ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಿದೆ.

ಸೈಬರ್‌ಕ್ರೈಮ್‌ನಲ್ಲಿ ಭಾಗಿಯಾದ ಆರೋಪದಡಿ ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಬ್ಲಾಕ್‌ ಮಾಡುವಂತೆ ದೂರಸಂಪರ್ಕ ಇಲಾಖೆ (DoT) ನಿರ್ದೇಶಿಸಿದ್ದು, ಇದಲ್ಲದೇ ಅವುಗಳ ಈ ಹ್ಯಾಂಡ್‌ಸೆಟ್‌ಗಳಿಗೆ ಲಿಂಕ್ ಮಾಡಲಾದ 20 ಲಕ್ಷ ಸಿಮ್ ಸಂಪರ್ಕಗಳ ಮರುಪರಿಶೀಲನೆಯನ್ನು ಕೈಗೊಳ್ಳಲು ಇಲಾಖೆಯು ಟೆಲಿಕಾಂಗಳನ್ನು ಕೇಳಿದೆ.

ದೂರಸಂಪರ್ಕ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ (MHA) ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಸೈಬರ್‌ ಕ್ರೈಂ ವಿರುದ್ಧ ಸಮರ ಸಾರಿದ್ದು ಸೈಬರ್-ಕ್ರೈಮ್ ಮತ್ತು ಹಣಕಾಸು ವಂಚನೆಗಳಲ್ಲಿ ಟೆಲಿಕಾಂ ಸಂಪನ್ಮೂಲಗಳ ದುರುಪಯೋಗವನ್ನು ತಡೆಯಲು ಮುಂದಾಗಿದೆ. ಡಿಜಿಟಲ್‌ ಅಪಾಯದಿಂದ ಜನರನ್ನು ಕಾಪಾಡುವುದೇ ಇದರ ಮೂಲ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ದೂರಸಂಪರ್ಕ ಇಲಾಖೆಯ ವಿಶ್ಲೇಷಣೆಯಲ್ಲಿ 28,200 ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಂಡು ಬಂದಿದ್ದು, ಈ ಮೊಬೈಲ್ ಹ್ಯಾಂಡ್‌ಸೆಟ್‌ಗಳೊಂದಿಗೆ 20 ಲಕ್ಷ ಸಂಖ್ಯೆಗಳನ್ನು ಬಳಸಲಾಗಿದೆ ಎಂದು ಕಂಡುಹಿಡಿದಿದೆ. ಹೀಗಾಗಿ, 28,200 ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಪ್ಯಾನ್ ಇಂಡಿಯಾ ನಿರ್ಬಂಧಿಸಲು ಮತ್ತು ಈ ಮೊಬೈಲ್ ಹ್ಯಾಂಡ್‌ಸೆಟ್‌ಗಳಿಗೆ ಲಿಂಕ್ ಮಾಡಲಾದ 20 ಲಕ್ಷ ಮೊಬೈಲ್ ಸಂಪರ್ಕಗಳ ತಕ್ಷಣದ ಮರುಪರಿಶೀಲನೆಯನ್ನು ಕೈಗೊಳ್ಳಲು ಮತ್ತು ಇವುಗಳನ್ನು ಕಡಿತಗೊಳಿಸಲು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಡಾಟ್ ನಿರ್ದೇಶನಗಳನ್ನು ನೀಡಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ, ವಂಚನೆಗಾಗಿ ಸಿಮ್ ಕಾರ್ಡ್‌ಗಳನ್ನು ಬಳಸುವ ಕಿಡಿಗೇಡಿಗಳ ಜೊತೆ ಸಂಪರ್ಕ ಇರುವ ಸಿಮ್‌ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಟೆಲಿಕಮ್ಯೂನಿಕೇಶನ್‌ ಇಲಾಖೆ ಮುಂದಾಗಿತ್ತು. ಆ ನಿಟ್ಟಿನಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಡೀಲರ್‌ಗಳು ಟೆಲಿಕಾಂ ಆಪರೇಟರ್‌ಗಳೊಂದಿಗೆ ನೋಂದಾಯಿಸಿಕೊಳ್ಳಬೇಕೆಂದು ಇಲಾಖೆ ಕಡ್ಡಾಯಗೊಳಿಸಿತ್ತು. ಯಾವುದೇ ಕಾನೂನುಬಾಹಿರ ಚಟುವಟಿಕೆಯ ಸಂದರ್ಭದಲ್ಲಿ, ಡೀಲರ್‌ಶಿಪ್ ಅನ್ನು ಕೊನೆಗೊಳಿಸಲಾಗುತ್ತದೆ ಮತ್ತು ಮೂರು ವರ್ಷಗಳವರೆಗೆ ಬ್ಲ್ಯಾಕ್ ಲಿಸ್ಟ್ ಸೇರಿಸಲಾಗುತ್ತದೆ ಎಂದು ಸಚಿವಾಲಯ ಈ ಹಿಂದೆ ಹೇಳಿತ್ತು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'150 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ' - ಮುಖ್ಯಮಂತ್ರಿ ಸಿದ್ದರಾಮಯ್ಯನಾನು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ- ಆರ್‌ ಆಶೋಕ್‌ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಮುಡಾ ಕೇಸ್‌: ಮಧ್ಯರಾತ್ರಿವರೆಗೆ ಸಿಎಂ ಸಿದ್ದರಾಮಯ್ಯರಿಂದ ಕಡತ ವಿಲೇವಾರಿ?'ಬ್ರಾಹ್ಮಣರಾದರೂ ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು' - ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆಮೂಡಾ ಪ್ರಕರಣದಲ್ಲಿ ಇ.ಡಿ ವಿಚಾರಣೆಗೆ ಹಾಜರಾದ ದೂರುದಾರ ಸ್ನೇಹಮಯಿ ಕೃಷ್ಣ..!10ನೇ ತರಗತಿ ಪಾಸಾದವರಿಗೆ NABARDನಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ ..!ಧಾರಾವಾಹಿ ನಟಿಯೊಂದಿಗೆ ಮದುವೆ ವಿಚಾರಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಟ್ವಿಸ್ಟ್ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್‌ ಓಡಿಸ್ತೀರಾ.? - ಲಾಯರ್ ಜಗದೀಶ್ ಆವಾಜ್ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯರಿಂದ ಮೈಸೂರು ದಸರಾಕ್ಕೆ ಅಧಿಕೃತ ಚಾಲನೆ