LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೈಬರ್ ವಂಚಕರಿಗೆ ಸಿಮ್ ಪೂರೈಸುತ್ತಿದ್ದ ಆರೋಪಿ ಅರೆಸ್ಟ್

ಮಡಿಕೇರಿ: ಸೈಬರ್ ವಂಚಕರಿಗೆ ಸಿಮ್ ಪೂರೈಸುತ್ತಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಕೇರಳದ ಮಲಪ್ಪುರಂ ಪೊಲೀಸರು ಬಂಧಿಸಿದ್ದು, ಆತನಿಂದ 40 ಸಾವಿರ ಸಿಮ್ ಕಾರ್ಡ್ ಮತ್ತು 180 ಮೊಬೈಲ್ ಗಳನ್ನು ವಶಕ್ಕೆ ಪಡೆದ ಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಅಬ್ದುಲ್ ರೋಷನ್ (46) ಬಂಧಿತ ವ್ಯಕ್ತಿ.

ಮಲಪ್ಪುರಂ ಜಿಲ್ಲೆಯ ವ್ಯಕ್ತಿಯೊಬ್ಬರು 1.8 ಕೋಟಿ ವಂಚನೆಯಾದ ಬಗ್ಗೆ ದೂರು ದಾಖಲಿಸಿದ್ದರು. ಫೇಸ್ ಬುಕ್ ನಲ್ಲಿ ಸ್ಟಾಕ್ ಮಾರ್ಕೆಟ್ ಹೂಡಿಕೆ ಬಗ್ಗೆ ತಿಳಿದು ಅದರಲ್ಲಿದ್ದ ಲಿಂಕ್ ಮೇಲೆ ಒತ್ತಿದ ಆ ವ್ಯಕ್ತಿ, ವಂಚಕರು ಹೇಳಿದಂತೆ ಸ್ಟಾಕ್ ಮಾರ್ಕೆಟ್ ಆಪ್ ಡೌನ್ ಲೋಡ್ ‍‌ಮಾಡಿದ್ದು, 1.8 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಬಳಿಕ ಆ ಹಣವನ್ನು ಅವರು ಆಪ್ ನಿಂದ ಹಿಂಪಡೆಯಲಾಗದೆ ವಂಚನೆಗೊಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಸ್ಟೈಲ್ ಎಂಬ ಸ್ಟಾಕ್ ಮಾರ್ಕೆಟ್ ವೆಬ್ ಸೈಟ್ ಇದಾಗಿದ್ದು, ಇದರಲ್ಲಿ ಗ್ಯಾಂಗ್‌ ಒಂದು ಸಕ್ರಿಯವಾಗಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಬಳಿಕ ವಂಚಕರು ಉಪಯೋಗಿಸುತ್ತಿದ್ದ ಸಿಮ್ ಕಾರ್ಡ್ ಬೆನ್ನತ್ತಿ ಮಲಪ್ಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅಬ್ದುಲ್ ರೋಷನ್ ನನ್ನು ಬಂಧಿಸಿದ್ದಾರೆ. ಈತ ಬೇರೆ ಬೇರೆ ಟೆಲಿಫೋನ್ ಕಂಪನಿಗಳ ಹೆಸರಲ್ಲಿ ನಕಲಿ ಸಿಮ್ ಕಾರ್ಡ್ ಗಳನ್ನು ಮಾಡಿಸಿ ಸೈಬ‌ರ್ ವಂಚಕರಿಗೆ ಪೂರೈಸುತ್ತಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ ಸಾವಿರಾರು ಸಿಮ್ ಕಾರ್ಡ್ ಗಳು, ನೂರಾರು ಮೊಬೈಲ್ ಫೋನ್ ಗಳು ಹಾಗೂ ಆರು ಬಯೋಮೆಟ್ರಿಕ್ ಸ್ಕ್ಯಾನರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಗಳೂರು: ಲವ್ ಜಿಹಾದ್ ಕಾಟ – ಸಮೀರ್ ಗೆ ಶಿಕ್ಷೆ ನೀಡುವಂತೆ, ದೇವರ ಮೊರೆ ಹೋದ ಪೋಷಕರು..!!!ದೀಪಾವಳಿ ಹಬ್ಬದ ಹಿನ್ನೆಲೆ, ಪಟಾಕಿ ಹಚ್ಚುವವರಿಗೆ ಪೊಲೀಸ್ ಇಲಾಖೆಯ ಸೂಚನೆಗಳಿವು..!ಮನೆಯಲ್ಲಿಯೇ ಆಯುರ್ವೇದ ಪದ್ದತಿಗಳನ್ನು ರೂಢಿಸಿಕೊಳ್ಳುವುದು ಒಳಿತು: ಬಿ.ಟಿ.ಕುಮಾರಸ್ವಾಮಿವೈದ್ಯಕೀಯ ಪದ್ದತಿಯಲ್ಲಿ ಗುಣಪಡಿಸಲಾಗದಂತ ಕಾಯಿಲೆಯನ್ನು ಪಾರಂಪರಿಕ ವೈದ್ಯ ಪದ್ದತಿಯಲ್ಲಿ ವಾಸಿ.!  ಟಿ.ರಾಜಣ್ಣ.!ಸುಪ್ರೀಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿ ಜಾರಿಗೊಳ್ಳಲಿ; ಎಂ.ಶಿವಮೂರ್ತಿಸರಳ ಜೀವನ ಪಾಲಿಸಿ ಎಂದು ಭೋದನೆ ಮಾಡಿದ್ದ ಆಧ್ಯಾತ್ಮಿಕ ವಾಗ್ಮಿ ಜಯ ಕಿಶೋರಿ ಕೈಯಲ್ಲಿ 2 ಲಕ್ಷ ಬೆಲೆ ಬಾಳುವ ಬ್ಯಾಗ್'ಪ್ರಚಾರಕ್ಕೆ ನನಗೆ ಯಾವುದೇ ನಿರ್ದಿಷ್ಟ ಆಹ್ವಾನ ಬಂದಿಲ್ಲ' - ಮಾಜಿ ಸಚಿವ ಜಿ.ಟಿ.ದೇವೇಗೌಡನಿಧಿ ಆಸೆಗೆ ಮಗನನ್ನೇ ಬಲಿ ಕೊಡಲು ಯತ್ನಿಸಿದ ತಂದೆ, ತಡೆದ ಪತ್ನಿ..!ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ Good News; 4115 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್.!ಬೆಂಗಳೂರು: ರಾಜ್ಯ ಜಾನುವಾರು ಜನಗಣತಿಗೆ ಚಾಲನೆ ನೀಡಿದ ಸಿಎಂ