LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೈಬರ್ ವಂಚಕರ ಬಲೆಗೆ ಬಿದ್ದ ನಟಿ ಅಂಜಲಿ ಪಾಟೀಲ್ - 5.79 ಲಕ್ಷ ರೂ. ಪಂಗನಾಮ

ಮುಂಬೈ: ನಟಿ ಅಂಜಲಿ ಪಾಟೀಲ್ ಅವರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದು, ಅಂಜಲಿ 5.79 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಮುಂಬೈನ ಅಂಧೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಅಂಜಲಿಗೆ ದೀಪಕ್ ಶರ್ಮಾ ಎಂಬ ವ್ಯಕ್ತಿಯಿಂದ ಕರೆ ಬಂದಿದ್ದು, ಈ ಕರೆಯಲ್ಲಿ, ವ್ಯಕ್ತಿಯು ತಾನು ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ತೈವಾನ್‌ಗೆ ಕಳುಹಿಸಿದ್ದ ನಿಮ್ಮ ಹೆಸರಿನ ಪಾರ್ಸೆಲ್ ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಇದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಪಾರ್ಸೆಲ್ ಬಾಕ್ಸ್ ಪರಿಶೀಲನೆ ನಡೆಸಿದ ವೇಳೆ ನಿಮ್ಮ ಆಧಾರ್ ಕಾರ್ಡ್ ಪ್ರತಿ ಸಿಕ್ಕಿರುವುದಾಗಿ ತಿಳಿಸಿದ್ದಾನೆ.

ಇನ್ನು ಹೆಚ್ಚಿನ ವಿವರಗಳಿಗಾಗಿ ಮುಂಬೈ ಸೈಬರ್ ಪೊಲೀಸರನ್ನು ಸಂಪರ್ಕಿಸಲು ಅಂಜಲಿಯನ್ನು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಅಂಜಲಿಗೆ ಬ್ಯಾನರ್ಜಿ ಎಂಬ ವ್ಯಕ್ತಿಯಿಂದ ಸ್ಕೈಪ್ ಕರೆ ಬಂದಿದ್ದು ತಾನು ಮುಂಬೈ ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ವ್ಯಕ್ತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಮೂರು ಬ್ಯಾಂಕ್ ಖಾತೆಗಳಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಅಂಜಲಿಗೆ ತಿಳಿಸಿದ್ದಾನೆ. ಪರಿಶೀಲನೆ ಪ್ರಕ್ರಿಯೆ ಹೆಸರಿನಲ್ಲಿ ಆಕೆಯಿಂದ ಮೊದಲು 96 ಸಾವಿರದ 525 ರೂ. ವರ್ಗಾಯಿಸುವಂತೆ ಹೇಳಿದ ಆತ ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಪ್ರಕರಣದಿಂದ ಹೊರಬರಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದು ನಟಿ ಬಳಿ ಹೇಳಿಕೊಂಡಿದ್ದಾನೆ ಇದನ್ನು ನಂಬಿದ ನಟಿ 4,83,291 ರೂ. ಹಣವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಜಮಾ ಮಾಡಲು ಹೇಳಿದ್ದಾನೆ ಇದನ್ನು ನಂಬಿದ ನಟಿ ಹಣ ವರ್ಗಾವಣೆ ಮಾಡಿದ್ದಾಳೆ.

ಈ ವಿಚಾರದ ಬಗ್ಗೆ ತಿಳಿಯಲು ನಟಿ ಆ ವ್ಯಕ್ತಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ ಇದಾದ ಕೆಲವು ಸಮಯದ ಬಳಿಕ ತಾನು ಮೋಸ ಹೋಗಿರುವುದು ಆಕೆ ಗಮನಕ್ಕೆ ಬಂದಿದೆ.

ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕಕ್ಕೆ ಯೋಗಿಯಂತಹ ಮುಖ್ಯಮಂತ್ರಿ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆಪೆನ್ ಡ್ರೈವ್ ಹಿಂದಿರೋ "ದೊಡ್ಡ ತಿಮಿಂಗಿಲ" ಬಗ್ಗೆ ಕುಮಾರಸ್ವಾಮಿ ಮೊದಲು ದಾಖಲೆ ಕೊಡಲಿಸಿಎಂ ಡಿಸಿಎಂ ಕೈ ಸೇರಿದ ಕಾಂಗ್ರೆಸ್ ಆಂತರಿಕ ಸಮೀಕ್ಷಾ ವರದಿ, 14ರಲ್ಲಿ "ಕೈ" ಮೇಲು!ರುಚಿಕರವಾದ ವೆಜ್ ಬಿರಿಯಾನಿ ಮಾಡುವ ವಿಧಾನಸುಂದರವಾದ ತ್ವಚೆಗೆ ಸಹಕಾರಿ ತುಳಸಿಯ ಈ 5 ವಿಧಾನಗಳು- ಇಲ್ಲಿದೆ ಮಾಹಿತಿ-ಬಸವಣ್ಣ ಅವರ ವಚನ .!ರಾಜಸ್ಥಾನ ಗಣಿಯಲ್ಲಿ ಲಿಫ್ಟ್ ಕುಸಿದು ಹಿರಿಯ ಅಧಿಕಾರಿ ಸಾವು ಅಂಜಲಿ ಕೊಲೆ ಪ್ರಕರಣ : ಗೃಹ ಇಲಾಖೆಯ ವೈಫಲ್ಯತೆಯೇ ಕಾರಣ ನೇಹಾ ತಂದೆ ನಿರಂಜನಯ್ಯ ಕಿಡಿ'ಜನರು ಪ್ರಧಾನಿ ಮೋದಿಯನ್ನು ಕೈಬಿಡಲು ನಿರ್ಧರಿಸಿದ್ದಾರೆ'- ಮಲ್ಲಿಕಾರ್ಜುನ ಖರ್ಗೆಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ