LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೋನಿಯಾ, ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಬಾಂಗ್ಲಾ ಪ್ರಜೆ ವಿರುದ್ಧ ಎಫ್‌ಐಆರ್ ದಾಖಲು



ಬೆಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಪ್ರಜೆ ಸಲಾಲುದ್ದೀನ್ ಸುಹೇಬ್ ಚೌಧರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸಲಾಲುದ್ದೀನ್ ಸುಹೇಬ್, ಸೋನಿಯಾಗಾಂಧಿ ಅಂತರ್ ಧರ್ಮ ವಿವಾಹವಾಗಿದ್ದಾರೆ. ಅವರು ಕ್ರಿಶ್ಚಿಯನ್ ಧರ್ಮವನ್ನೇ ಪಾಲನೆ ಮಾಡುತ್ತಿದ್ದಾರೆ. ಅಂತರ್ ಧರ್ಮದಲ್ಲಿ ಮದುವೆಯಾಗಿ ಭಾರತದ ಪೌರತ್ವ ಪಡೆದಿದ್ದಾರೆ. ರಾಹುಲ್ ಗಾಂಧಿ ವಿದೇಶಿ ಸ್ನೇಹಿತರ ಜೊತೆ ಸೇರಿಕೊಂಡು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪಾಕಿಸ್ತಾನಿ ಐಎಸ್ ಏಜೆಂಟ್ ರೀತಿ ಬಿಂಬಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಲಾಲುದ್ದೀನ್ ಸುಹೇಬ್ ಈ ರೀತಿಯಾಗಿ ಪೋಸ್ಟ್ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ, ಶಾಂತಿ ಕದಡುವ ಪ್ರಯತ್ನಿಸಿದ ಆರೋಪದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜೊತೆಗೆ ಸಲಾಲುದ್ದೀನ್ ಸುಹೇಬ್ ಮಾಡಿದ ಪೋಸ್ಟ್ ಅನ್ನು 'ದಿ ಜೈಪುರ್ ಡೈಲಾಗ್ಸ್' ವೆಬ್‌ಸೈಟ್ ಮೂಲಕ ರಿಟ್ವೀಟ್ ಮಾಡಿಸಲಾಗಿತ್ತು.

ಈ ಮಧ್ಯೆ ಅದಿತಿ ಘೋಷ್ ಎಂಬುವವರು, ''ರೀಪೋಸ್ಟ್ ಮಾಡಿ ಜನರಿಗೆ ತಲುಪಿಸಿ, ಕೋಮು ಸೌಹಾರ್ದ್ಯತೆಗೆ ಧಕ್ಕೆ ತರುತ್ತಿದ್ದಾರೆ'' ಎಂದಿದ್ದರು. ಈ ಸಂಬಂಧ ವಕೀಲರೊಬ್ಬರು ಎಂಬುವವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

 


Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
INDvsENG 5th T20: ಪ್ರಮುಖ ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ..!ಬೆಂಗಳೂರಿನಲ್ಲಿ 837 ಕೆರೆಗಳ ಪೈಕಿ 730 ಕೆರೆಗಳು ಒತ್ತುವರಿಸೆಂಟ್ರಲ್‌ ಬ್ಯಾಂಕ್‌ನಿಂದ ಹುದ್ದೆಗಳಿಗೆ ಅರ್ಜಿ ಆಹ್ವಾನಗೃಹರಕ್ಷಕ ದಳದ ಸಿಬ್ಬಂದಿಯ ಬಂಧನ..!! ಕಾರಣ??ಅಯೋಧ್ಯೆಯಲ್ಲಿ 22 ವರ್ಷದ ಯುವತಿಯ ಅತ್ಯಾಚಾರ, ಕೊಲೆ- ಕಣ್ಣೀರಿಟ್ಟ ಸಂಸದಆಧಾರ ಕಾರ್ಡ್‌ ಮೂಲಕ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯಹಿಂದೂ ಧರ್ಮ ಎಂದರೆ ಯಾರನ್ನೂ ಬಲವಂತವಾಗಿ ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸುವುದಲ್ಲ: ತರೂರ್ಮಹಾ ಕುಂಭ ಮೇಳದಲ್ಲಿ 'ಅಮೃತ ಸ್ನಾನ' ಕ್ಕಾಗಿ 'ಆಪರೇಷನ್ ಇಲೆವೆನ್'ಸಂಗೀತ ಕಾರ್ಯಕ್ರಮದಲ್ಲೇ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲುನ್ಯಾಕ್ ಗ್ರೇಡ್ ಕೊಡಲು ಲಂಚ ಪಡೆದ ವಿವಿ ಪ್ರಾಧ್ಯಾಪಕಿ ಬಂಧನ