LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೌಜನ್ಯಾ ಸ್ತ್ರೀರೂಪ ತ್ಯಜಿಸಿ ಕಾಳಿ ಸ್ವರೂಪವನ್ನು ಪಡೆದಿದ್ದಾಳೆ - ಶ್ರೀ ನಿರ್ಮಲಾನಾಥನಂದ ಸ್ವಾಮೀಜಿ

ಬೆಳ್ತಂಗಡಿ: ಸೌಜನ್ಯಾ ಸ್ತ್ರೀರೂಪ ತ್ಯಜಿಸಿ ಕಾಳಿ ಸ್ವರೂಪವನ್ನು ಪಡೆದಿದ್ದಾಳೆ. ಅವಳ ಆತ್ಮ ಭೀಕರ ಸ್ವರೂಪ ಪಡೆಯುವ ಮುನ್ನ ಸರಕಾರ ಎಚ್ಚೆತ್ತುಕೊಂಡು ಶೀಘ್ರ ತನಿಖೆ ನಡೆಸಿ ಅವಳ ಆತ್ಮಕ್ಕೆ ಶಾಂತಿಯನ್ನು ಕೊಡಬೇಕು ಎಂದು ಆದಿ ಚುಂಚನಗಿರಿ ಶಾಖಾ ಮಠ ಮಂಗಳೂರಿನ ಶ್ರೀ ನಿರ್ಮಲಾನಾಥನಂದ ಸ್ವಾಮೀಜಿ ಹೇಳಿದ್ದಾರೆ. ಬೆಳ್ತಂಡಿಯಲ್ಲಿ ಇಂದು ನಡೆದ ಸೌಜನ್ಯ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸತ್ಯ ನ್ಯಾಯದ ಹೋರಾಟಕ್ಕೆ ಆದಿ ಚುಂಚನಗಿರಿ ಮಠದ ಸಂಪೂರ್ಣ ಬೆಂಬಲವಿದೆ. ಎಲ್ಲರನ್ನು ಒಪ್ಪಿಕೊಂಡ, ಅಪ್ಪಿಕೊಂಡ ಮಠ ಶ್ರೀ ಆದಿ ಚುಂಚನಗಿರಿ ಮಠ. ಹಿರಿಯ ಸ್ವಾಮೀಜಿಗಳು ಮಾತನಾಡಿದ್ದಾರೆ. ಸಭೆ ಕರೆದಿದ್ದಾರೆ ಎಂದರು. ಸೌಜನ್ಯಾ ಪ್ರಕರಣದಲ್ಲಿ ಮೂರು ಅಂಶಗಳನ್ನು ಯೋಚನೆ ಮಾಡಬೇಕು. ಸಂತೋಷ ರಾವ್‌ಗೆ ಮರಳಿ ಜೀವನವನ್ನು ನೀಡಲು ಸಾಧ್ಯವಿಲ್ಲ. ಆದರೆ ಸರಕಾರ ಆತನ ಬದುಕಿಗೆ ಏನಾದರೂ ವ್ಯವಸ್ಥೆ ಮಾಡಬೇಕು. ಕುಸುಮಾವತಿ ಕುಟುಂಬಕ್ಕೆ ಸರಕಾರ ರಕ್ಷಣೆ ಒದಗಿಸಬೇಕು. ಅಲ್ಲದೆ 11ವರ್ಷಗಳ ಹಿಂದೆ ಸೌಜನ್ಯಾ ಮೃತದೇಹ ತಪಾಸಣೆ ಮಾಡಿರುವ ವೈದ್ಯಾಧಿಕಾರಿ ಹಾಗೂ ಪ್ರಕರಣದ ತನಿಖಾಧಿಕಾರಿಯನ್ನು ಮೊದಲು ವಿಚಾರಣೆ ಮಾಡಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಪ್ರಕರಣದ ಹಿಂದಿನ ನಿಜಾಂಶ ಬಯಲಾಗುತ್ತದೆ ಎಂದು ಶ್ರೀ ನಿರ್ಮಲಾನಾಥನಂದ ಸ್ವಾಮೀಜಿ ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ ಮಗಳನ್ನ ಸುಟ್ಟುಹಾಕಿದ ತಂದೆಮಾರ್ಚ್‌ 11ರಿಂದ 5, 8 ಮತ್ತು 9ನೇ ತರಗತಿಯ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಹೃದಯಾಘಾತದಿಂದ ನಿಧನ‘ಗೃಹಲಕ್ಷ್ಮಿ ಸಮಸ್ಯೆ ನಿವಾರಣೆ’ಗೆ ಇಂದಿನಿಂದ ‘ಮೂರುದಿನ ‘ವಿಶೇಷ ಕ್ಯಾಂಪ್‌’ ಆರಂಭಯೋಗಿ ಆದಿತ್ಯನಾಥ್ ಭಯ - ಪೊಲೀಸರಿಗೆ ಶರಣಾದ 74 ರೌಡಿಶೀಟರ್‌ಗಳುಊಟದ ಮಧ್ಯೆ ನೀರು ಕುಡಿಯುತ್ತೀರಾ?ಕುಡಿದರೂ ಲಾಭವಿದೆಯಾ..!ಸಿಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆ.! ಸಂಸದ ಪ್ರತಾಪ್ ಸಿಂಹ ಮೇಲೆ ಎಫ್ಐಆರ್.!ಈ ಪ್ರಕರಣಕ್ಕೆ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ  ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲು.!ರೈತರಿಗೆ “ಲಾಭದಾಯಕ ಹೈನುಗಾರಿಕೆ ತರಬೇತಿ : ನೊಂದಣಿಗೆ ಸೂಚನೆಯುವನಿಧಿ ಯೋಜನೆ : ಅರ್ಜಿ ಆಹ್ವಾನ .!