ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್(62) ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೋಹನ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಗದೇ ಭಾನುವಾರ ವಿಧಿವಶರಾಗಿದ್ದಾರೆ.
https://bcsuddi.com/%e0%b2%86%e0%b2%97%e0%b2%b8%e0%b3%8d%e0%b2%9f%e0%b3%8d-16-%e0%b2%b0%e0%b2%bf%e0%b2%82%e0%b2%a6-%e0%b2%97%e0%b3%83%e0%b2%b9%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b2%bf/
ಮೋಹನ್ ಒಡೆತನದಲ್ಲಿ ಜಯಸಿಂಹ, ಭಲೇ ಚತುರ, ಜೂಲಿ , ಹೂಮಳೆ, ಅಳಿಮಯ್ಯ, ಆಚಾರ್ಯ, ಪೊಲೀಸ್ ಪವರ್, ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದರು.
ಇನ್ನು ನಿರ್ಮಾಪಕ ಮೋಹನ್ ಅವರು ಬೆಂಗಳೂರಿನ ನವರಂಗ್ ಚಿತ್ರಮಂದಿರದ ಮಾಲಿಕರಾಗಿದ್ದು, ಮೃತರು ಇಬ್ಬರೂ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.