LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹಗರಣಗಳ ಪಟ್ಟಿ ಹೇಳುವಾಗ ದಾಖಲೆಗಾಗಿ ತಡಕಾಡಿದ ಪ್ರಿಯಾಂಕಾ ಗಾಂಧಿ

ಗ್ವಾಲಿಯರ್: ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರಕಾರ ಮಾಡಿದ ಹಗರಣಗಳ ಬಗ್ಗೆ ಮಾತನಾಡುವಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ದಾಖಲೆಗಾಗಿ ತಡಕಾಡಿದ್ದಾರೆ. ಗ್ವಾಲಿಯರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುವ ವೇಳೆ ಈ ಅಚಾತುರ್ಯ ನಡೆದಿದೆ. ಸಮಾವೇಶದಲ್ಲಿ ಮಾತನಾಡಿದದ ಪ್ರಿಯಾಂಕಾ ಗಾಂಧಿ ವಾದ್ರಾ, ಆಡಳಿತಾರೂಢ ಬಿಜೆಪಿ ವಿರುದ್ಧ ಗುಡುಗಿದ್ದು, ಅದು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು. ಈ ವೇಳೆ ಶಿವರಾಜ್ ಸರ್ಕಾರದ ಹಗರಣಗಳನ್ನು ಪಟ್ಟಿ ಮಾಡಲು ಯತ್ನಿಸಿದಾಗ, ಪ್ರಿಯಾಂಕಾ ವೇದಿಕೆಯಲ್ಲಿ ಹಗರಣಗಳ ಪಟ್ಟಿಯನ್ನು ಹುಡುಕಲು ತಡಕಾಡಿದರು. ಕೊನೆಗೆ ಅಂತಿಮವಾಗಿ ಆ ಅಂಶ ಬಿಟ್ಟು ‘ಅದರ ಬಗ್ಗೆ ನಂತರ ಹೇಳುತ್ತೇನೆ’ ಎಂದು ಪ್ರೇಕ್ಷಕರಿಗೆ ಹೇಳಿದರು. ಈ ಘಟನೆಯ ವಿಡಿಯೋವನ್ನು ಇದೀಗ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಈ ವೀಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, “ಇಲ್ಲಿ ನಿರಂತರವಾಗಿ ವಂಚನೆಗಳು ನಡೆಯುತ್ತಿವೆ. ಅದರ ದೊಡ್ಡ ಪಟ್ಟಿ ನನ್ನ ಬಳಿ ಇದೆ. ನಾನು ಅದನ್ನು ಹೊರತೆಗೆಯುತ್ತೇನೆ. ಪಟ್ಟಿಯು ತುಂಬಾ ಉದ್ದವಾಗಿದೆ. ಅವರೆಲ್ಲರನ್ನೂ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳುತ್ತಿರುವುದು ಕಂಡುಬಂದಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶೀಘ್ರವೇ 7500 ಶಿಕ್ಷಕರನ್ನು ನೇಮಿಸಿಕೊಳ್ಳಲಿರುವ ಶಿಕ್ಷಣ ಇಲಾಖೆ..!'ಸರ್ಕಾರಕ್ಕೆ ಹಿಜಬ್‌ ವಾಪಸ್‌ ಆದೇಶ ಹೊರಡಿಸಲು ಕೇವಲ 30 ನಿಮಿಷ ಸಾಕು'- ಓವೈಸಿಕ್ರಿಸ್‌ಮಸ್‌ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಪಘಾತ; ಇಬ್ಬರು ಯುವಕರ ದುರ್ಮರಣ..!ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆಕೊರೊನಾ ಜೆಎನ್.1 ವೈರಸ್ -ಸಭೆ ನಡೆಸಿ ನಿಯಮ ಪಾಲನೆಯ ನಿರ್ಧಾರ - ದಿನೇಶ್ ಗುಂಡೂರಾವ್