LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹಾಂಕ್ ಕಾಂಗ್ ಮೂಲದ ಗಾಯಕಿ ಕೊಕೊ ಲೀ ಅತ್ಮಹತ್ಯೆಗೆ ಶರಣು

ಹಾಂಕ್ ಕಾಂಗ್: ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಹಾಂಗ್ ಕಾಂಗ್ ಮೂಲದ ಗಾಯಕಿ ಮತ್ತು ಸಾಹಿತಿ ಕೊಕೊ ಲೀ(48) ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಮಧುರ ಕಂಠದಿಂದಲೇ ಮೋಡಿ ಮಾಡಿದ್ದ ಕೊಕೊ ಲೀ ತನ್ನ 48ನೇ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದ ಅವರ ಅಭಿಮಾನಿಗಳು ಕಂಬನಿ ಮಿಡಿದ್ದಾರೆ. ಆತ್ಮಹತ್ಯೆಯ ಕುರಿತು ಲೀ ಅವರ ಹಿರಿಯ ಸಹೋದರಿಯರಾದ ಕರೋಲ್ ಮತ್ತು ನ್ಯಾನ್ಸಿ ಲೀ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.

https://bcsuddi.com/%e0%b2%95%e0%b2%be%e0%b2%b8%e0%b2%b0%e0%b2%97%e0%b3%8b%e0%b2%a1%e0%b3%81-%e0%b2%89%e0%b2%95%e0%b3%8d%e0%b2%95%e0%b2%bf-%e0%b2%b9%e0%b2%b0%e0%b2%bf%e0%b2%a6-%e0%b2%a8%e0%b2%a6%e0%b2%bf-%e0%b2%a4/

ಆದಿತ್ಯವಾರದಂದು ಲೀ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕೋಮಾ ಸ್ಥಿತಿಯಲ್ಲಿದ್ದ ಆಕೆ ಬುಧವಾರ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಲೀ, ಯಾರೊಂದಿಗೂ ಬೆರೆಯುತ್ತಿರಲ್ಲಿಲ್ಲ ಎಂದು ಆಕೆಯ ಆಪ್ತರು ಹೇಳಿಕೊಂಡಿದ್ದಾರೆ. ಆದರೆ ಆಕೆಯ ಖಿನ್ನತೆಗೆ ಕಾರಣವೇನೆಂದು ಇನ್ನೂ ತಿಳಿದಿಲ್ಲ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST