LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹಾಸನ: ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನು ಹತ್ಯೆಗೈದ ಪೊಲೀಸ್ ಕಾನ್ ಸ್ಟೇಬಲ್..!!

ಹಾಸನ: ನಗರದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನು ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಪತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸಂಭವಿಸಿದೆ.


ಹಾಸನ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಕನಾಥ್ ಪತ್ನಿ ಮಮತಾ ಪತಿಯಿಂದಲೇ ಹತ್ಯೆಯಾದವರು. ಆಕೆಯನ್ನು ಚಾಕುವಿನಿಂದ ಇರಿದಿದ್ದನ್ನು ಕಂಡ ಪೊಲೀಸರು ತಕ್ಷಣವೇ ಹಿಮ್ಸ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು. ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ.


ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದರಿಂದ ಇಂದು ಪತಿ ವಿರುದ್ಧ ದೂರು ನೀಡಲು ಎಸ್ಪಿ ಕಚೇರಿಗೆ ಬಂದಿದ್ದ ಪತ್ನಿಯ ಮೇಲೆ ಸಿಟ್ಟಿಗೆದ್ದ ಲೋಕನಾಥ್ ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.


ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈದ್ಯ ತನ್ನ ಗೆಳತಿಗೆ ಕಳುಹಿಸಿದ್ದ ಒಂದೇ ಒಂದು ಡಿಜಿಟಲ್ ಸಂದೇಶ, ಇಡೀ ಕೊಲೆಯ ರಹಸ್ಯ ಬಯಲು!ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ – ದೊಡ್ಮನೆಯಿಂದ ಹೊರಕ್ಕೆ ಬರ್ತಾರಾ ರಿಷಾ?ಕಳಪೆ ಮಟ್ಟಕ್ಕೆ ಕುಸಿದ ಗಾಳಿಗುಣಮಟ್ಟ; ಶ್ವಾಸಕೋಶ ಸಮಸ್ಯೆ ಇರೋರು ದೆಹಲಿ ಬಿಟ್ಟು ಹೋಗುವಂತೆ ಎಚ್ಚರಿಕೆಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಲು ಹೆಲ್ಮೆಟ್ ಬದಲು ಬಾಣಲೆ ಧರಿಸಿ ಸವಾರಿಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆಕೆ- ಸೆಟ್ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿಇತಿಹಾಸ ಬರೆದ ಭಾರತ: ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ಮಹಿಳಾ ಪಡೆ; ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯಐಪಿಎಸ್ ಅಧಿಕಾರಿ ಪೂರ್ವಾ ಚೌಧರಿ ಯಶೋಗಾಥೆ..!!ನಿಮ್ಮ ಮನೆಗೆ ಮಾಟ-ಮಂತ್ರ ತಾಗ ಬಾರದು ಅಂದ್ರೆ ಏನು ಮಾಡಬೇಕು ಗೊತ್ತೇ?ಟೆಂಪೋ ಟ್ರಾವೆಲರ್ ಟ್ರಕ್ ಗೆ ಡಿಕ್ಕಿ 18 ಮಂದಿ ಸಾವು.!