ಹಿಂದೂ ಎಂಬ ಹೆಸರನ್ನು ಕೊಟ್ಟವರೇ ವಿದೇಶಿಗರು- ಅಧಿರ್ ರಂಜನ್ ಚೌಧರಿ
ನವದೆಹಲಿ: ಹಿಂದೂ ಎಂಬ ಹೆಸರನ್ನು ನಮಗೆ ನೀಡಿದವರೇ ವಿದೇಶಿಗರು ಎಂದು ಕಾಂಗ್ರೆಸ್ ಸಂಸದ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, "ಇಂಡಿಯಾ" ಎಂಬ ಹೆಸರಿನಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಬೆಳೆದ ಮೇಲೆ ದೇಶದ ಪ್ರಧಾನಿ ಮೋದು ಅವರಿಗೆ ಇಂಡಿಯಾ ಹೆಸರಿನ ಮೇಲೆಯೇ ದ್ವೇಷ ಬಂದಿದೆ. ಇಂಡಿಯಾ ಎಂಬ ಹೆಸರು ಕೇಳಿದರೆ ಈಗ ಮೋದಿಗೆ ನಡುಕ ಶುರುವಾಗಿದೆ. ಸದ್ಯ ರಾಷ್ಟ್ರಪತಿಗಳ ನಿವಾಸವಾಗಿರುವ ರಾಷ್ಟ್ರಪತಿ ಭವನ (Rashtrapati Bhavan) ಈ ಹಿಂದೆ ಬ್ರಿಟಿಷ್ ವೈಸ್‌ರಾಯ್ ಮನೆಯಾಗಿತ್ತು. ಮೋದಿಯವರು ಬ್ರಿಟಿಷರ ವಿರೋಧಿಯಾಗಿದ್ದರೆ ರಾಷ್ಟ್ರಪತಿ ಭವನವನ್ನು ಏನು ಮಾಡುತ್ತಾರೆ ಎಂದು ಅಧೀರ್ ರಂಜನ್ ಪ್ರಶ್ನೆ ಮಾಡಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.