LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹುಬ್ಬಳ್ಳಿ : ಬಾಲಕಿಗೆ ಲೈಂಗಿಕ ದೌರ್ಜನ್ಯ – ಆರೋಪಿ ಸದ್ದಾಂ ಹುಸೇನ್ ಗೆ ಪೊಲೀಸರಿಂದ ಗುಂಡೇಟು – ಬಂಧನ

ಹುಬ್ಬಳ್ಳಿ :  ನೇಹಾ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿ ಮತ್ತೊಂದು  ಬಾಲಕಿಯ ಮೇಲೆ  ಲೈಂಗಿಕ ದೌರ್ಜನ್ಯ ನೀಡಿದ್ದ ಪ್ರಕರಣ ನಡೆದಿದ್ದು, ಆರೋಪಿ ಸದ್ದಾಂ ಹುಸೇನ್ ನನ್ನು  ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದ್ದಾರೆ.

ಆರೋಪಿ ಸದ್ದಾಂ ವಿರುದ್ದ  16 ವರ್ಷದ ಬಾಲಕಿಯ ಮೇಲೆ  ಅತ್ಯಾಚಾರ ಎಸಗಿ  ಗರ್ಭಿಣಿ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ FIR ದಾಖಲಾದ   ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದು,  ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸ್ಥಳಾಂತರಿಸುವ ವೇಳೆ ಆರೋಪಿ ಸುತ್ತಗಟ್ಟಿ ಗ್ರಾಮದ ಸಮೀಪ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿಗೆ ಗುಂಡೇಟು ಹೊಡೆದಿದ್ದಾರೆ.

ಪೊಲೀಸರು ಆರೋಪಿ ಸದ್ದಾಂ ಹುಸೇನ್ ಎಡಗಾಲಿಗೆ ಗುಂಡು ಹಾರಿಸಿ (Firing) ಬಂಧಿಸಿದ್ದಾರೆ. ಆರೋಪಿ ಸದ್ದಾಂ ಹುಸೇನ್ ಹಲ್ಲೆ  ನಡೆಸಿದ್ದರಿಂದ  ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ಹಾಗೂ ಕಾನ್ಸ್ಟೇಬಲ್ ಅರುಣ್ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಖಲಿಸಲಾಗಿದೆ. ಆರೋಪಿ ಸದ್ದಾಂ ಹುಸೇನ್ನನ್ನು ಧಾರವಾಡ (Dharwad) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಆಸ್ಪತ್ರೆಗೆ  ಭೇಟಿ ನೀಡಿದ್ದು  ಈ ವೇಳೆ ಮಾಧ್ಯಮಗಳಿಗೆ ಘಟನೆಯನ್ನು ವಿವರಿಸಿದ್ದಾರೆ.” ಎಪಿಎಂಸಿ ಕೇಸ್ ಪತ್ತೆ ಹಚ್ಚಲು ಟೀಮ್ ಕಳಿಹಿಸಿದ್ವಿ. ಅದರಲ್ಲಿ ಒಂದು ಟೀಮ್ಗೆ ಈತ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಐದಾರು ಕಿಮೀ ದೂರದಲ್ಲಿರೋದು ತಿಳಿಯುತ್ತೆ. ಆಗ ಆತನನ್ನು ಬಂಧಿಸಿ ಕರೆತರಲು ತೆರಳಿದ್ದರು. ಆ ವೇಳೆಯಲ್ಲಿ ವಿದ್ಯಾಗಿರಿ ಇನ್ಸ್ಪೆಕ್ಟರ್ ನೇತೃತ್ವದ ಟೀಮ್ ಹೋಗಿತ್ತು. ಮುಂದಿನ ತನಿಖೆಗೆ ಠಾಣೆಗೆ ಕರೆತರಲು ಮುಂದಾಗಿದ್ದರು ಎಂದು ಹೇಳಿದ್ದಾರೆ.

ಬಳಿಕ ಆರೋಪಿಯನ್ನು ಬಂಧಿಸಿ ಜೀಪ್ ಹತ್ತಿಸುವಾಗ ಪೆನ್ ನೈಪ್ ನಿಂದ ಎಡ ಭುಜಕ್ಕೆ ಚುಚ್ಚಿದ್ದಾನೆ. ಕಾನ್ಸ್ ಟಬಲ್ ಅರುಣ ಮೇಲೆ ಮೊದಲು ಹಲ್ಲೆ ಮಾಡುತ್ತಾನೆ. ಆಗ ಕಂಟ್ರೋಲ್ ಮಾಡಲು ಆತನನ್ನು ಕೆಳಗೆ ತಳ್ಳಿದ್ದರು. ಆಗ ಅದೇ ಚಾಕುವಿನಿಂದ ಇನ್ಸಪೆಕ್ಟರ್ ಮಂಡಿ ಮತ್ತು ಬೆನ್ನ ಮೇಲೆ ಹಲ್ಲೆ ಮಾಡುತ್ತಾನೆ. ಅವನನ್ನ ಕಂಟ್ರೋಲ್ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆಗ ಎಡಗಾಲಿಗೆ ಫೈರ್ ಮಾಡಿದ್ದಾರೆ. ಆರೋಪಿ ಸೇರಿ ಮೂರು ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ರೇಣುಕಾ ಸುಕುಮಾರ ಎಂದಿದ್ದಾರೆ.

ಸಿಪಿಐ ಮತ್ತು ಕಾನ್ಸಟೇಬಲ್ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಅಡ್ಮಿಟ್ ಮಾಡಿಕೊಂಡಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು ಒಂದು ಕೇಸ್ ದಾಖಲಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

ಗರ್ಭಿಣಿಯಾದ ಬಾಲಕಿ

ಆರೋಪಿ ಸದ್ದಾಂ ಹುಸೇನ್ ಲಿಂಬುವಾಲೆ ಹುಬ್ಬಳ್ಳಿಯ ಈಶ್ವರನಗರದವನು ಎಂದು ಗುರುತಿಸಲಾಗಿದೆ. ಅಪ್ರಾಪ್ತ ಜತೆ ಸಲುಗೆ ಬೆಳೆಸಿ, ಪ್ರೀತಿಸುವಂತೆ ನಂಬಿಸಿ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಮನೆಯಲ್ಲಿ ಹೇಳಿದರೆ, ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಕಳೆದ ಮೂರ್ನಾಲ್ಕು ದಿನದಿಂದ ಬಾಲಕಿ ವಾಂತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದರು. ಆದರೂ ವಾಂತಿ ಕಡಿಮೆಯಾಗದಿ ದ್ದಾಗ ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಆ ವೇಳೆ ಬಾಲಕಿ ವಿಚಾರಿಸಿದಾಗ ಸದ್ದಾಂ ಹುಸೇನ್ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿ ಪೋಷಕರು ದೂರು ದಾಖಲಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಭಟನಾನಿರತ ವೈದ್ಯರಿಗೆ ಮಾತುಕತೆಗೆ ಕೊನೆಯ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ'ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಸೆ. 17ರಿಂದ ಬಿಜೆಪಿ ಸೇವಾ ಪಾಕ್ಷಿಕ ಆಚರಣೆಟ್ರೈನಿ ವೈದ್ಯೆಯ ಅತ್ಯಾಚಾರ ಕೇಸನ್ನ ಸುಸೈಡ್ ಎಂದು ಬಿಂಬಿಸಲು ಯತ್ನ: ಸಿಬಿಐ ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖದರ್ಶನ್​ಗೆ ರಾಜಾತಿಥ್ಯ ನೀಡಿದ್ದ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿಪಾಂಡವಪುರದ RSS ಕಚೇರಿಗೆ ಪೊಲೀಸರ ದಾಳಿಗೆ ಬಿಜೆಪಿ ಖಂಡನೆ : ಪೊಲೀಸರನ್ನ ಸಸ್ಪೆಂಡ್ ಮಾಡಲು ವಿಜಯೇಂದ್ರ ಆಗ್ರಹಚಿಕ್ಕಮಗಳೂರುನಲ್ಲಿ ಪ್ಯಾಲೆಸ್ಟೀ ನ್ ಬಾವುಟ ಹಿಡಿದು ಬೈಕ್‌ನಲ್ಲಿ ಸಂಚರಿಸುತ್ತಿದ್ದ 6 ಮಂದಿ ವಶಕ್ಕೆಮತ್ತೆ ಡೊನಾಲ್ಡ್ ಟ್ರಂಪ್‌ ಮೇಲೆ ಗುಂಡಿನ ದಾಳಿ- ಬೆಂಬಲಿಗರಲ್ಲಿ ಆತಂಕBREAKING : ಶಾಸಕ ಮುನಿರತ್ನ ಬಂಧನ ಪ್ರಕರಣ - ಕಳೆದ ಎರಡು ಗಂಟೆಯಿಂದ ಖುದ್ದು ಡಿಸಿಪಿ ಟೆಕ್ಕಣ್ಣನವರ್ ವಿಚಾರಣೆ'ನಾಗಮಂಗಲದಲ್ಲಿ ಸರ್ಕಾರ ಓಲೈಕೆ ರಾಜಕಾರಣ ನಡೆಸುತ್ತಿದೆ'- ಆರ್‌ ಆಶೋಕ್‌ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕ್ರೇಜಿವಾಲ್‌-ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ?