E-PAPER
17 Nov 2026, 12:24:21 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ), ಬೆಳಗಾವಿ ಇವರ ಪತ್ರಿಕಾ ಪ್ರಕಟಣೆಯ ಅನ್ವಯ, ರಾಜ್ಯ ಮಟ್ಟದ “ರಾಷ್ಟ್ರಕೂಟ ಸಾಹಿತ್ಯ ಶ್ರೀ” ಪ್ರಶಸ್ತಿಗೆ ಆಯ್ಕೆ

ಬೆಳಗಾವಿ-28 : ಕಳೆದ 26 ವರ್ಷಗಳಿಂದ ಸದ್ದಿಲ್ಲದೇ ಸಾಹಿತ್ಯ, ಸಾಂಸ್ಕೃತಿಕ, ಹಿರಿಯ ಚೇತನಗಳಿಗೆ ಗೌರವ ಸಲ್ಲಿಸುವ ಮುಂತಾದ ಮೌಲಿಕ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಸೇವೆ ಮಾಡುತ್ತ ಬರುತ್ತಿರುವ ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ)

ಪ್ರತಿವರುಷದಂತೆ ಈ ವರುಷವೂ
ಆಯ್ಕೆ ಸಮಿತಿಯ ತೀರ್ಪುಗಾರರನ್ವಯ
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ, ಆಯ್ದ ಕೃತಿಗಳಿಗೆ
ರಾಜ್ಯಮಟ್ಟದ “ರಾಷ್ಟ್ರಕೂಟ ಸಾಹಿತ್ಯ ಶ್ರೀ” ಪ್ರಶಸ್ತಿ ಘೋಷಿಸಿದೆ.

2024ನೇ ಸಾಲಿನಲ್ಲಿ ಪ್ರಕಟವಾದ ವಿವಿಧ ಸಾಹಿತ್ಯ ಪ್ರಕಾರಗಳ 42 ಕೃತಿಗಳ ಪೈಕಿ 11 ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಅದರಲ್ಲಿ
*ವಿದ್ಯಾಧರ ಮುತಾಲಿಕ ದೇಸಾಯಿ (ಮೌನಿ ಗುರುಗಳು) ಅವರ “ಮೇಲಕಾಡತಾವ ನೆನಪುಗಳು”
ಹಾಗೂ ದಾವಣಗೆರೆಯ ಸುನಿತಾ ಪ್ರಕಾಶ್ ಅವರ “ಪದ್ದವ್ವನ ಕೌದಿ ಮತ್ತು ಇತರೆ ಕಥೆಗಳು” ಕೂಡ ಸೇರಿವೆ.
ಇಲ್ಲಿ.ಯಾವುದೇ ಲಾಬಿ, ಒತ್ತಡ, ಪಕ್ಷಪಾತಗಳಿಲ್ಲದೆ
ಶುದ್ಧ ಸಾಹಿತ್ಯ ಮೌಲ್ಯ ಆಧರಿಸಿ ನಡೆಯುವ ಈ ಆಯ್ಕೆಯ ಪ್ರಕ್ರಿಯೆಯ ಕಾರ್ಯದಲ್ಲಿ ಒಟ್ಟು ಹನ್ನೊಂದು ಕೃತಿಗಳು ಆಯ್ಕೆಯಾಗಿರುತ್ತವೆ.
ವಿದ್ಯಾಧರ ಮುತಾಲಿಕ ದೇಸಾಯಿ ಧಾರವಾಡ ಇವರ ಕಿರು ಪರಿಚಯ:
ಅಪ್ಪಟ ಉತ್ತರ ಕರ್ನಾಟಕದ ಮಣ್ಣಿನ ಮಗನಾದ ಇವರು ಸುಮಾರು ಐದು ದಶಕಗಳ ಕಾಲ ಮುಂಬಯಲ್ಲಿ ಕನ್ನಡ ಪರಿಚಾರಕನಾಗಿ,
*ಹೊರನಾಡಿನ ಕನ್ನಡ ಮಾಧ್ಯಮದ
ಎಸ್‌.ಎಸ್‌.ಎಲ್‌.ಸಿ ಮಾಧ್ಯಮ ಪ್ರಶಸ್ತಿ
ಹಾಗೂ ಸಿ.ಇ.ಟಿ ಮೀಸಲಾತಿಗಾಗಿ ಒಂಟಿಯಾಗಿ ಹೋರಾಡಿದ ಕನ್ನಡ ಸೇವಕ.ಮುಂಬೈನ,ಥಾಣೆಯಲ್ಲಿ 20 ವರ್ಷಗಳ ಕಾಲ ಕನ್ನಡ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ.
*ಮುಂಬೆಳಕು ಕನ್ನಡ ಬಳಗ (ರಿ)-ಕಲ್ಯಾಣ
ಸಂಸ್ಥಾಪಕ ಟ್ರಸ್ಟಿ ಹಾಗೂ ಸ್ಥಾಪಕ ಅಧ್ಯಕ್ಷ
(2೦೦1ರಿಂದ 2೦1೦)
ಅಪರೂಪದ ಸಂಘಟಿಕ:

*ವಿದ್ಯಾಧರ ಕನ್ನಡ ಪ್ರತಿಷ್ಠಾನ ಸ್ಥಾಪನೆ (2೦11) .
*ನಿರಪೇಕ್ಷ ಭಾವದಿಂದ ತನ್ನ ಅತ್ಯಲ್ಪ ನಿವೃತ್ತಿ ವೇತನದ ಅರ್ಧ ಭಾಗವನ್ನೂ, ವಿವಿಧ ಪ್ರಶಸ್ತಿ , ಪುರಸ್ಕಾರಗಳ,ಬರಹಗಳ ಗೌರವ ಧನವನ್ನೂ ಕನ್ನಡ ಸೇವಾ-ಕಾರ್ಯಗಳಿಗೆ ಮೀಸಲಿಡುತ್ತಾ ಬರುತ್ತಿರುವರು.ಕಥೆ, ಕವನ,ಹನಿಗವನ, ವೈಚಾರಿಕ, ದಾಸಸಾಹಿತ್ಯ,ಆತ್ಮಚರಿತ್ರೆ ಸೇರಿದಂತೆ 18ಕ್ಕೂ ಹೆಚ್ಚು ಕೃತಿಗಳ ರಚನೆ.ಹೊಸ ಬರಹಗಾರರ ರೂವಾರಿ ಕಟ್ಟುನಿಟ್ಟಾದ ಮಾರ್ಗದರ್ಶನ, ಕನ್ನಡ ಮಾಧ್ಯಮ ಶಾಲೆಗಳಿಗೆ ಸಹಾಯ,*ಕನ್ನಡ ನುಡಿ ತೇರು*,
ಮುಂತಾದ ಸಾಹಿತ್ಯ ,ಸಾಧಕರ ಶೋಧ,ಪ್ರತಿಭಾ ಶೋಧ, ಸಾಹಿತ್ಯಕ ಕಾರ್ಯಕ್ರಮಗಳು ಇವು ಪ್ರತಿ ವರುಷವಿಡೀ, ನಿರಂತರ ನಡೆವ ಸೇವೆ. .
ಸುಮಾರು ವಿವಿಧ ಪ್ರಶಸ್ತಿಗಳು ಇವರಿಗೆ ಸಂದಿವೆ.
*ಅವರ ಈ ವರ್ಷ* *ಪ್ರಶಸ್ತಿ ಪಡೆದ ಕೃತಿ*:
*ಮೇಲಕಾಡತಾವ ನೆನಪುಗಳು*ಆತ್ಮ ಚರಿತ್ರೆ.**
ಅವರ ಬದುಕು ಬರಹ ನಡೆದು ಬಂದ ದಾರಿ ಇದಾಗಿದೆ.

ಇನ್ನೋರ್ವ ಗೆಳತಿ
*ಶ್ರೀಮತಿ ಸುನಿತಾ ಪ್ರಕಾಶ್: ದಾವಣಗೆರೆ

25 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ಶುಶ್ರೂಷಕಿ, ಶಸ್ತ್ರಚಿಕಿತ್ಸಾ ವಿಭಾಗದ ಅಧೀಕ್ಷಕಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ರಿಕೋದ್ಯಮ, ವರದಿಗಾರಿಕೆ, ಸಾಹಿತ್ಯ ರಚನೆ:
ಕಥೆ,ಕವನ ವೈಚಾರಿಕ,ಕೃತಿ ಹಾಗೂ ವಿವಿಧ ಬರಹಗಳು:ಸಂಘಟಕಿ ,ಕ.ಲೇ.ಸಂ,ಚು.ಸಾ.ಪ,
ಇತರೇ ಸಂಘಟನೆಗಳು,
ಸಮರ್ಥ ನಿರೂಪಕಿ, ಸದಾ ಹಸನ್ಮುಖಿ, ಎಲ್ಲ ಕ್ಷೇತ್ರಗಳಲ್ಲಿ ಸಮಾನ ಪ್ರಮಾಣದ ತೊಡಗಿಸಿಕೊಂಡಿರುವ ಸಕ್ರಿಯ ಸಾಹಿತ್ಯಿಕ ವ್ಯಕ್ತಿತ್ವ.

ಕೃತಿಗಳು:
ಒಲವಿನ ದೀವಿಗೆ – ಕವನ ಸಂಕಲನ (2018)
ಶರಣ್ಯ – ಕಥಾ ಸಂಕಲನ.
ಇದರ ಹಸ್ತಪ್ರತಿಗೆ ಮಾತೋಶ್ರೀ ಜಾನಕಿ ಬಾಯಿ ಮುತಾಲಿಕ ದೇಸಾಯಿ ಪ್ರಥಮ ಪುರಸ್ಕಾರ,ನಗದು ಗೌರವ.ದೊರೆತ ಈ ಕೃತಿಗೆ ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ.
ಪದ್ದವ್ವನ ಕೌದಿ ಮತ್ತು ಇತರೆ ಕಥೆಗಳು
(ಈ ಬಾರಿ ಪ್ರಶಸ್ತಿ ಪಡೆದ ಕೃತಿ)
ಮಹಿಳಾ ಸಂವೇದನೆ, ಸಾಮಾಜಿಕ ಕಾಳಜಿ, ಮಾನವೀಯತೆಯ ತುಡಿತ,ಮುಂತಾದ ಒಳನೋಟಗಳಿಂದ ತುಂಬಿದ ಅವರ ಬರಹದ ಶೈಲಿಗೆ ಅವರದೇ ಆದ ವಿಶಿಷ್ಟ ಛಾಪಿದೆ ಎಂಬುದು ವಿಮರ್ಶಕರ ಅಭಿಪ್ರಾಯ.
ಈ ಈರ್ವರನ್ನೂ ಹಾಗೆಯೇ,
ಹೊಂಬೆಳಕು ಸಾಂಸ್ಕೃತಿಕ ಸಂಘ
,ಬೆಳಗಾವಿ ಮತ್ತು ಶ್ರೀ ಚೆನ್ನಲೀಲಾ ಟ್ರಸ್ಟ್, ಧಾರವಾಡ ಇವರ ವತಿಯಿಂದ
“ಚೆನ್ನಶ್ರೀ” ಜೀವಮಾನ ಸಾಧನೆ ಪ್ರಶಸ್ತಿ 2024
ಈ ಬಾರಿ ಆಯ್ಕೆಯಾದವರು ಸಿದ್ದಮತಿ ನೆಲವಗಿ(91) ಹಾವೇರಿ ಅವರನ್ನು ಒಳಗೊಂಡ ಮೂರೂ ಜನ ಹಿರಿಯ ನಾಗರಿಕರಿಗೂ .
ವಿದ್ಯಾಧರ ಕನ್ನಡ ಪ್ರತಿಷ್ಠಾನದ ಸ್ನೇಹ ಬಳಗ ತುಂಬು ಹೃದಯದಿಂದ ಅಭಿನಂದಿಸುತ್ತೇವೆ.
ಈ ವರ್ಷದ ವಿವಿಧ ಕೃತಿ ಪ್ರಶಸ್ತಿ ಗೌರವ ಪ್ರಶಸ್ತಿ ಪುರಸ್ಕೃತರ ಆಯ್ಕೆಯ ಕಾರ್ಯದಲ್ಲಿ ಪಾಲ್ಗೊಂಡ ಸ.ರಾ. ಸುಳಕೂಡೆ, ಶಶಿಕಲಾ ಪಾವಸೆ, ಲೀಲಾ ಕಲಕೋಟಿ, ಆರ್.ಬಿ. ಬನಶಂಕರಿ, ಎಚ್.ಎ. ಮಾವುತ, ಡಾ. ಜಗದೀಶ್ ಹಾರೋಗೊಪ್ಪ, ಮಮತಾ ಶಂಕರ, ಮುಂತಾದವರು.ಇವರೆಲ್ಲರೂ
ಹಾಗು ಸಂಘದ ಎಲ್ಲ ಪದಾಧಿಕಾರಿಗಳು ಆಯ್ಕೆಯಾದ ಸಾಹಿತಿ,ಸಾಹಿತ್ಯ ಕೃತಿಗಳನ್ನು ಅಭಿನಂದಿಸಿದ್ದಾರೆ.

ಪಾರ್ವತಿ ಜಗದೀಶ
ಲೇಖಕಿ
ಹಾವೇರಿ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.