ಪ್ರವಾಸಿಗರು ಕಣ್ಣೆದುರೆ 8000 ರೂ ಮೌಲ್ಯದ ಬಿಯರ್ ಕದ್ದೊಯ್ದಿದ್ದಾರೆ. ಕುಶಾಲನಗರ ಪಟ್ಟಣದಲ್ಲಿರುವ ನ್ಯಾಷನಲ್ ವೈನ್ಸ್ ಮಳಿಗೆಗೆ ಆಗಮಿಸಿದ ಮೂವರ ತಂಡದಿಂದ ಈ ಕೃತ್ಯ ನಡೆದಿದೆ. ಮಳಿಗೆಗೆ ಪ್ರವೇಶಿಸಿದ ತಂಡದಿಂದ ಎರಡು ಕೇಸ್ ದುಬಾರಿ ಬಿಯರ್ ಖರೀದಿ ಮಾಡಿದ್ದಾರೆ. ಸ್ಕ್ಯಾನ್ ಮಾಡಿದಂತೆ ನಾಟಕವಾಡಿ ಕೊನೆಗೆ ಬಿಯರ್ ನೊಂದಿಗೆ ಪರಾರಿಯಾಗಿದ್ದಾರೆ. ಪ್ರವಾಸಿಗರ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.