LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಅಣ್ಣನನ್ನೇ ಕೊಂದು ತಮ್ಮ ಪರಾರಿ..!!

ಇನ್ಸೂರೆನ್ಸ್  ಹಣದ ಆಸೆಗಾಗಿ ಒಡಹುಟ್ಟಿದ ತಮ್ಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ನಡೆದಿದೆ.

ಗೋಪಾಲ ತಳವಾರ(35)  ಕೊಲೆಯಾದ ವ್ಯಕ್ತಿ. ಈತನ ತಮ್ಮ ಬಸವರಾಜ ತಳವಾರ ಅಣ್ಣನ ಹೆಸರಲ್ಲಿ 50 ಲಕ್ಷ ಇನ್ಸೂರೆನ್ಸ್ ಮಾಡಿಸಿದ್ದ ಇನ್ಸೂರೆನ್ಸ್ ನಾಮಿನಿಗೆ ತನ್ನ ಹೆಸರನ್ನೇ ದಾಖಲು ಮಾಡಿಸಿದ್ದ. ಅಣ್ಣ ಸತ್ತರೆ ತನಗೆ ಲಾಭ ಎಂದು ಲೆಕ್ಕಾಚಾರ ಹಾಕಿದ ಆತ ತನ್ನ ಸ್ನೇಹಿತನ ಜತೆ ಸೇರಿ ಪಾರ್ಟಿ ನೆಪದಲ್ಲಿ ಅಣ್ಣನಿಗೆ ಕಂಠಪೂರ್ತಿ ಕುಡಿಸಿ ಕೊಲೆ ಮಾಡಿಸಿದ್ದಾನೆ.

ಅಣ್ಣನ ಮೃತದೇಹ ಕಂಡ ನಂತರ ಸ್ನೇಹಿತರ ಜತೆ ಪರಾರಿಯಾಗಿದ್ದ ಈತ ತಿಂಗಳ ನಂತರ ಊರಿಗೆ ಮರಳಿದ್ದಾಗ ಪೊಲೀಸರಿಗೆ ಸಂಶಯ ಮೂಡಿದೆ. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ವಿಮಾ ಹಣದ ಸಂಚು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಬಸವರಾಜ್ ತಳವಾರ, ಬಾಪು ಶೇಖ್, ಈರಪ್ಪ ಹಡಗಿನಾಳ, ಸಚಿನ್ ಕಂಟೆನ್ನವರ್ ಎಂಬಾತರನ್ನು ಘಟಪ್ರಭಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎದೆ ಹಾಲು ದಾನ ಮಾಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡ ಮಹಿಳೆಭಾರತದ ಜವಳಿ ಉದ್ಯಮಗಳಿಗೆ ಭಾರೀ ಹೊಡೆತ: ಟ್ರಂಪ್ ಏರಿಸಿದ ತೆರಿಗೆಯಿಂದಾಗಿ ಅಮೆಜಾನ್, ವಾಲ್ಮರ್ಟ್’ನಿಂದ ಆರ್ಡರ್’ಗೆ ಬ್ರೇಕ್ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷ ಉಚಿತಶರ್ಟಿನ ಬಟನ್ ಸರಿಯಾಗಿ ಹಾಕಿಲ್ಲ ಎಂದು ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್ ;10 ಮಂದಿ ವಿರುದ್ಧ ಕೇಸುಟ್ರಂಪ್ ಸುಂಕ ಹೆಚ್ಚಳದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷಪುನೀತ್ ಕೆರೆಹಳ್ಳಿ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು'ಬ್ಯಾಕ್ ಟು ಊರು ಪರಿಕಲ್ಪನೆಗೆ, ಅಭಿವೃದ್ಧಿ-ಹೂಡಿಕೆಗಳಿಗೆ ಈ ಮನ್ನಣೆ ಪ್ರಬಲ ದಿಕ್ಸೂಚಿ' - ಸಂಸದ ಕ್ಯಾ. ಚೌಟದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಆಸ್ತಾ ಸಿಂಗ್ ಯಶಸ್ಸಿನ ಕಥನಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಹತ್ಯೆ.!ಕರ್ನಾಟಕ PGCET ಪರೀಕ್ಷೆ ಫಲಿತಾಂಶ ಪ್ರಕಟ.!