LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

11 ಯುವತಿಯರನ್ನು ಮದುವೆಯಾಗಲು ಬಂದಿದ್ದು ಬರೋಬ್ಬರಿ 1,900 ಯುವಕರು

ಜೈಪುರ: ಇಲ್ಲೊಂದು ಸಂದರ್ಶನವಿತ್ತು ಸುಮಾರು 1,900 ಯುವಕರು ಸಾಲುಗಟ್ಟಿ ನಿಂತಿದ್ದರು. ಆದರೆ ಇವರು ಹೇಳಬೇಕಿದ್ದದ್ದು ಕೇವಲ ಎರಡೇ ಪದ ಅದುವೇ ಕಾಬೂಲ್ ಹೈ... ಅರೆ ಇದೇನಿದು ವಿಚಿತ್ರ ಸಂದರ್ಶನ ಅಂದುಕೊಂಡಿರಾ? ಇದು ಯಾವುದೇ ಉದ್ಯೋಗಕ್ಕಾಗಿ ನಡೆಯುತ್ತಿದ್ದ ಸಂದರ್ಶನವಲ್ಲ. ಇದು ಮದುವೆಗಾಗಿ ನಡೆಯುತ್ತಿದ್ದ ಸಂದರ್ಶನ  ಕೇವಲ 11 ಯುವತಿಯರಿಗಾಗಿ 1,900 ಯುವಕರು ಸಾಲುಗಟ್ಟಿ ನಿಂತು ಸಂದರ್ಶನವನ್ನು ಎದುರಿಸಿದರು. ಇಂತಹ ಒಂದು ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜ್ಯ ಸರ್ಕಾರದ ಮಹಿಳಾ ಸದನಗಳ ಉಪಕ್ರಮದಡಿಯಲ್ಲಿ ಇದನ್ನು ಆಯೋಜಿಸಲಾಗಿತ್ತು.


ರಾಜಸ್ಥಾನದಲ್ಲಿ ಒಂದು ವಿಶಿಷ್ಟ ಮತ್ತು ಆಸಕ್ತಿದಾಯಕ ವಿವಾಹ ವ್ಯವಸ್ಥೆ ಕಾರ್ಯಕ್ರಮದಲ್ಲಿ ಸುಮಾರು 1,900 ಯುವಕರು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದರು. ಕೇವಲ 11 ಯುವತಿಯರಿಗಾಗಿ ಸುಮಾರು 1,900 ಯುವಕರು ಸಾಲುಗಟ್ಟಿ ನಿಂತ ಸಂದರ್ಶನ ಎದುರಿಸಿದರು. ಅದರಲ್ಲಿ ಆಯ್ಕೆಯಾದವರಿಗೆ ಯುವತಿಯರನ್ನು ಕೊಟ್ಟು ಮದುವೆ ಮಾಡಲು ದಿನ ನಿಗದಿ ಪಡಿಸಲಾಯಿತು.


ರಾಜಸ್ಥಾನ ರಾಜ್ಯ ಸರ್ಕಾರದ ಮಹಿಳಾ ಸದನಗಳ ಉಪಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಿರ್ಲಕ್ಷಿತ, ತುಳಿತಕ್ಕೊಳಗಾದ ಮತ್ತು ಅಸಹಾಯಕ ಯುವತಿಯರಿಗೆ ಹೊಸ ಜೀವನ ಕಲ್ಪಿಸಲು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಇವರನ್ನು ಮದುವೆಯಾಗಲು ಮೊದಲಿಗೆ ಅರ್ಜಿ ಸಲ್ಲಿಸಲು ಕೇಳಲಾಗಿತ್ತು. ಬಳಿಕ ಸಂದರ್ಶನ ಆಯೋಜಿಸಲಾಗಿತ್ತು. ಸಂದರ್ಶನದ ಸುತ್ತಿಗೆ ಜೈಪುರ, ದಿಡ್ವಾನಾ, ಜುನ್ಜುನು, ಕೋಟಾ ಮತ್ತು ಬರಾನ್‌ನ ಸುಮಾರು 1,900 ಕ್ಕೂ ಹೆಚ್ಚು ಯುವಕರು ತಮ್ಮ ದಾಖಲೆಗಳೊಂದಿಗೆ ಆಗಮಿಸಿದರು. ಎಲ್ಲ ಕುಟುಂಬಗಳ ಹಿನ್ನೆಲೆ, ಯುವಕರ ಕುರಿತು ತನಿಖೆ ನಡೆಸಿ, ಉದ್ಯೋಗ, ಆದಾಯವನ್ನು ಪರಿಶೀಲಿಸಿದ ಬಳಿಕ 11 ಯುವಕರೊಂದಿಗೆ ಯುವತಿಯರಿಗೆ ವಿವಾಹ ಜೋಡಿಗಳನ್ನು ರಚಿಸಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026