ಬೆಳಗಾವಿ: ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ ‘ಧಾರಿಣಿ ‘,ಗಡಿ ನುಡಿ ಸಾಂಸ್ಕೃತಿಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಶಿವಬಸವ ನಗರದ ಎಸ್,ಜಿ,ಬಿ,ಐ,ಟಿ ಇಂಜಿನಿಯರಿಂಗ್ ಕಾಲೇಜಿನ ಸಭಾಗ್ರಹದಲ್ಲಿ
ದಿನಾಂಕ 15 ರಂದು ಮಧ್ಯಾಹ್ನ 3: 30 ಗಂಟೆಗೆ ಶಿವಶರಣೆ ಅಕ್ಕಮಹಾದೇವಿ ಜಯಂತಿ ಉತ್ಸವ-2026 ಜರುಗಲಿದೆ.
ಸಮಾರಂಭದ ಸಾನಿಧ್ಯವನ್ನು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ; ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ.
ಸಾನಿಧ್ಯದಲ್ಲಿ ಬೆಳಗಾವಿ ಕಾರಂಜಿ ಮಠದ ಶ್ರೀ. ಗುರುಸಿದ್ಧ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.ಚಿಕ್ಕೋಡಿಯ ಮಾಜಿ ಮಹಾಪೌರರಾದ ಶ್ರೀಮತಿ ವೀಣಾ ಕವಟಿಗಿಮಠ ಅವರು ವಚನಾಂಜಲಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಜಾನಕಿ ಅವರು ಆಗಮಿಸಲಿದ್ದಾರೆ.
ಬೆಳಗಾವಿಯ ಖ್ಯಾತ ಸಾಹಿತಿ ಡಾ: ಗುರುದೇವಿ ಹುಲೆಪ್ಪನವರಮಠ ಅವರಿಗೆ ಈ ಸಂದರ್ಭದಲ್ಲಿ "ಧಾರಿಣಿ " ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಶ್ರೀಮತಿ ಶ್ರೀದೇವಿ ನರಗುಂದ ಬೆಳಗಾವಿ ,ಸಾಹಿತಿ ಶ್ರೀಮತಿ ಜಯಶೀಲಾ ಬ್ಯಾಕೋಡ ಇವರುಗಳಿಗೆ ಗೌರವ ಸನ್ಮಾನ ನೀಡಲಾಗುತ್ತದೆ . ಹಿರಿಯ ಸಾಹಿತಿ ಶ್ರೀಮತಿ. ನೀಲಗಂಗಾ ಚರಂತಿಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಶ್ರೀಮತಿ ಶೈಲಜಾ ಭಿಂಗೆ , ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ , ಶ್ರೀಮತಿ ಹೀರಾ ಚೌಗಲೆ, ಶ್ರೀಮತಿ.ಮಹಾದೇವಿ ಅಜವಾನ. ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಶ್ರೀಮತಿ. ಸುರೇಖಾ ಮಾನ್ವಿ. ಶ್ರೀಮತಿ. ಲಲಿತಾ ಪರ್ವತರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಬೆಳಗಾವಿಯ ಪ್ರಭುದೇವ್ ಮಾತೃ ಮಂಡಳಿ, ಲಿಂಗಾಯತ್ ಮಹಿಳಾ ಸಮಾಜ , ಜಂಗಮ ಶಿವಶರಣೆಯರ ಸಂಘ, ಭಾರತಿ ಗಾಯನ ಸಮಾಜ, ಅಕ್ಕನ ಬಳಗ ಮಹಾಂತೇಶ ನಗರ, ಕದಳಿ ವೇದಿಕೆ ಚಿಕ್ಕೋಡಿ, ಅಕ್ಕನ ಬಳಗ ರಾಮತೀರ್ಥನಗರ, ಸ್ವರ ಸಾಧನ ಸಮೂಹ, ಮಹಾಲಕ್ಷ್ಮಿ ಮಹಿಳಾ ಮಂಡಲ, ಎ,ಐ,ಪಿ,ಸಿ ಸಂಘಟನೆ ಬೆಳಗಾವಿ, ಇತ್ಯಾದಿಯಾಗಿ ಬೆಳಗಾವಿಯ ಸಮಸ್ತ ಮಹಿಳಾ ಸಮೂಹ ಮತ್ತು ಎಲ್ಲಾ ಸಾಹಿತ್ಯಾಸಕ್ತರು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ವಿನಂತಿಸಿದ್ದಾರೆ.