LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

16 ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ಟ್ರಿಪ್‌ಗೆ ಹೋದ ಮಹಾತಾಯಿ - ಹಸಿವಿನಿಂದ ಪುಟ್ಟ ಕಂದಮ್ಮ ಸಾವು!

ಅಮೆರಿಕ : ತಾಯಿಯ ಪ್ರವಾಸದ ಗೀಳು ಭೂಮಿಯ ಮೇಲೆ ಮಗುವಿನ ಆಯಸ್ಸು 16 ತಿಂಗಳಿಗೇ ಮುಕ್ತಾಯ ಮಾಡಿದೆ.. ಳಲೂ ಕೂಡ ಭೀಕರವಾಗಿರುವ ಘಟನೆ ನಡೆದಿರುವುದು ಅಮೆರಿಕದ ಓಹಿಯೋ ರಾಜ್ಯದಲ್ಲಿ. ತನ್ನ ಮಗು ತನ್ನ ಕಾಲ ಮೇಲೆ ನಡೆಯುವವರೆಗೂ ಒಂದು ಹಂತಕ್ಕೆ ಬೆಳೆಯುವವರೆಗೂ ತಾಯಿ ಅದೆಷ್ಟು ಜೋಪಾನ ಮಾಡುತ್ತಾಳೆಂದರೆ, ಆಕೆಯ ಅದೆಷ್ಟೋ ಕನಸುಗಳು ಮಗುವಿನ ನಗುವಿನ ಅಡಿಗೆ ಹೋಗಿರುತ್ತದೆ. ಆದರೆ, ಓಹಿಯೋದ ಕ್ಲೆವ್‌ಲ್ಯಾಂಡ್‌ನಲ್ಲಿ ಮಹಾತಾಯಿಯೊಬ್ಬಳು ತನ್ನ 16 ತಿಂಗಳ ಮಗುವನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟು ಪೋರ್ಟೋರಿಕೋಗೆ 10 ದಿನಗಳ ಪ್ರವಾಸಕ್ಕೆ ಹೋಗಿದ್ದಾಳೆ. ಮನೆಗೆ ಬಂದು ನೋಡಿದಾಗ, ಇದ್ದ ಬಟ್ಟೆಯಲ್ಲೇ ಮಲ, ಮೂತ್ರ ಮಾಡಿಕೊಂಡಿದ್ದ ಮಗು, ಒಂದು ತೊಟ್ಟು ನೀರೂ ಇಲ್ಲದೆ ಸಾವು ಕಂಡಿತ್ತು. ಇದರ ಬೆನ್ನಲ್ಲಿಯೇ ಪೊಲೀಸರು 31 ವರ್ಷದ ತಾಯಿ ಕ್ರಿಸ್ಟೆಲ್‌ ಕ್ಯಾಂಡೆಲಾರಿಯೊ ವಿರುದ್ಧ ಕೊಲೆ ಪ್ರಕರಣದ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ಆಕೆಯ ಪಕ್ಕದ ಮನೆಯವರ ಹೇಳಿಕೆಗಳನ್ನೂ ಪೊಲೀಸರು ಪಡೆದುಕೊಂಡಿದ್ದು, ಮಗುವನ್ನು ಮನೆಯಲ್ಲಿಯೇ ಏಕಾಂಗಿಯಾಗಿ ಬಿಟ್ಟು ಹೋಗಿದ್ದು ಇದು ಮೊದಲ ಸಲವೇನಲ್ಲ ಎಂದು ತಿಳಿಸಿದ್ದಾರೆ. ನಾವು ಸಾಕಷ್ಟು ಬಾರಿ ಆಕೆಗೆ ತಿಳಿಸಿ ಹೇಳಿದ್ದೆವು. ಪುಟ್ಟ ಮಕ್ಕಳನ್ನು ಏಕಾಂಗಿಯಾಗಿ ಬಿಟ್ಟು ಹೋಗುತ್ತಿದ್ದಳು. ನನ್ನ ಸ್ನೇಹಿತೆಯೂ ಕೂಡ ಆಕೆಗೆ ಇದನ್ನು ಹೇಳಿದ್ದಳು. ಆದರೆ, ಆಕೆ ಯಾರ ಮಾತನ್ನೂ ಕೇಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮಮಂದಿರ ಉದ್ಘಾಟನೆ ದಿನ ದೇಶದ ಪ್ರತಿಯೊಬ್ಬರು ಮನೆಯಲ್ಲಿ ಜ್ಯೋತಿ ಬೆಳಗಿಸಿ- ಮೋದಿ ಕರೆನಾಲ್ವರ ಕೊಲೆ ಆರೋಪಿ ಚೌಗುಲೆ ಜಾಮೀನು ಅರ್ಜಿ ತಿರಸ್ಕೃತ'ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ': ಸಿಎಂ ವ್ಯಂಗ್ಯ'ರಾಮ ಮಂದಿರ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ'- ಪ್ರಹ್ಲಾದ್ ಜೋಶಿಅಯೋಧ್ಯೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆದಕ್ಷಿಣ ಕನ್ನಡದ ನ್ಯಾಶನಲ್ ಹೈವೇ ಅಭಿವೃದ್ದಿ , 957.39 ಕೋ.ರೂ.ವೆಚ್ಚದ 2 ಯೋಜನೆಗಳಿಗೆ ಅನುಮೋದನೆ..!ಬೆಂಗಳೂರು-ಅಯೋಧ್ಯೆಗೆ ಏರ್ ಇಂಡಿಯಾ ವಿಮಾನ ಸೇವೆ ಜ. 17ರಿಂದ ಆರಂಭಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು :ರಾಜ್ಯದಲ್ಲಿ ಜ.2 ರಿಂದ ಲಸಿಕಾ ಅಭಿಯಾನವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿ..!ಇಂದೇ ಅರ್ಜಿಯನ್ನು ಸಲ್ಲಿಸಿಚಹಾದಂಗಡಿಗೆ ನುಗ್ಗಿದ ಟ್ರಕ್: 5 ಮಂದಿ ದುರ್ಮರಣ, ಹಲವರಿಗೆ ಗಾಯ