Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸರ್ಕಾರದ ಬೊಕ್ಕಸಕ್ಕೆ ಬರೊಬ್ಬರಿ 1,757 ಕೋಟಿ ನಷ್ಟ

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಸರ್ಕಾರಿ ಸ್ವಾಮ್ಯದ
BSNL ಸಂಸ್ಥೆ ಮಾಡಿದ ಎಡವಟ್ಟಿನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಬರೊಬ್ಬರಿ 1,757 ಕೋಟಿ ರೂ.ನಷ್ಟವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೇಖಪಾಲ (ಸಿಎಜಿ)ರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ BSNL ಸ್ಥಿರ ಮೂಲಸೌಕರ್ಯಗಳ ಹಂಚಿಕೆಗಾಗಿ ತಮ್ಮ ನಡುವಿನ ಒಪ್ಪಂದದ ಪ್ರಕಾರ ಮೇ 2014 ರಿಂದ ಹತ್ತು ವರ್ಷಗಳ ಕಾಲ ರಿಲಯನ್ಸ್ ಜಿಯೋ ಸಂಸ್ಥೆಗೆ ಶುಲ್ಕವನ್ನು ವಿಧಿಸುವಲ್ಲಿ ವಿಫಲಗೊಂಡಿದ್ದು, ಇದರಿಂದಾಗಿ ಸರ್ಕಾರವು 1,757.56 ಕೋಟಿ ರೂ.ಗಳ ನಷ್ಟ ಅನುಭವಿಸಿದೆ ಎಂದು ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೇಖಪಾಲ (ಸಿಎಜಿ)ರ ವರದಿ ಹೇಳಿದೆ.

ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ(ಟಿಐಪಿ)ರಿಗೆ ಪಾವತಿಸಿದ ಆದಾಯದ ಪಾಲಿನಲ್ಲಿ ಪರವಾನಿಗೆ ಶುಲ್ಕವನ್ನು ಕಡಿತಗೊಳಿಸಲು ವಿಫಲಗೊಂಡಿದ್ದರಿಂದ ಬಿಎಸ್‌ಎನ್‌ಎಲ್ 38.36 ಕೋಟಿ ರೂ.ಗಳ ನಷ್ಟ ಅನುಭವಿಸಿದೆ ಎಂದು ಸಿಎಜಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿ.(ಆರ್‌ಜೆಐಎಲ್) ಜೊತೆ ಮಾಸ್ಟರ್ ಸರ್ವಿಸ್ ಅಗ್ರಿಮೆಂಟ್(ಎಂಎಸ್‌ಎ)ನ್ನು ಜಾರಿಗೊಳಿಸುವಲ್ಲಿ ಬಿಎಸ್‌ಎನ್‌ಎಲ್ ವಿಫಲಗೊಂಡಿದ್ದು, ಮೇ 2014 ಮತ್ತು ಮೇ 2024ರ ನಡುವೆ ತನ್ನ ಸ್ಥಿರ ಮೂಲ ಸೌಕರ್ಯದಲ್ಲಿ ಬಳಸಿಕೊಂಡ ಹೆಚ್ಚುವರಿ ತಂತ್ರಜ್ಞಾನಕ್ಕೆ ಶುಲ್ಕ ವಿಧಿಸಿಲ್ಲ. ಇದು ಸರ್ಕಾರದ ಬೊಕ್ಕಸಕ್ಕೆ 1757.56 ಕೋಟಿ ರೂ. ಮತ್ತು ಅದರ ಮೇಲಿನ ದಂಡ ಬಡ್ಡಿಯ ನಷ್ಟಕ್ಕೆ ಕಾರಣವಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಸ್ಥಿರ ಮೂಲಸೌಕರ್ಯ ಹಂಚಿಕೆಯ ಮೇಲೆ ಬಿಎಸ್‌ಎನ್‌ಎಲ್ ಶಾರ್ಟ್ ಬಿಲ್ಲಿಂಗ್ ಮಾಡಿದೆ ಎನ್ನುವುದನ್ನೂ ಗಮನಿಸಿರುವ ಸಿಎಜಿ, ರಿಲಯನ್ಸ್ ಜಿಯೊ ಜೊತೆಗಿನ ಒಪ್ಪಂದದಲ್ಲಿ ನಿಗದಿ ಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಬಿಎಸ್‌ಎನ್‌ಎಲ್ ಪಾಲಿಸಿಲ್ಲ ಮತ್ತು ಹೆಚ್ಚಳ ನಿಬಂಧನೆ ಅನ್ವಯಿಸಿಲ್ಲ, ಹೀಗಾಗಿ ಮೂಲಸೌಕರ್ಯ ಹಂಚಿಕೆ ಶುಲ್ಕಗಳಿಗೆ ಸಂಬಂಧಿಸಿದಂತೆ 29 ಕೋಟಿ ರೂ.(ಜಿಎಸ್‌ಟಿ) ಗಳ ಆದಾಯ ನಷ್ಟವಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ.
BSNL ಆದಾಯದ ಮೇಲೆ ಪರಿಣಾಮ

ರಾಜ್ಯಸಭೆಗೆ ಇತ್ತೀಚೆಗೆ ಟೆಲಿಕಾಂ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಲಿಖಿತ ಉತ್ತರ ನೀಡುತ್ತಾ, BSNL ಒಂದು ಲಕ್ಷ 4G ಸೈಟ್‌ಗಳಿಗೆ ಖರೀದಿ ಆದೇಶಗಳನ್ನು ನೀಡಿದೆ, ಅದರಲ್ಲಿ 83,993 ಸೈಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಮಾರ್ಚ್ 8 ರ ವೇಳೆಗೆ 74,521 ಸೈಟ್‌ಗಳು ಪ್ರಸಾರವಾಗುತ್ತಿವೆ ಎಂದು ಹೇಳಿದರು. ಅಂತೆಯೇ 4G ಸೇವೆಗಳ ಬಿಡುಗಡೆಯಲ್ಲಿ ವಿಳಂಬ ಮತ್ತು ಮೊಬೈಲ್ ವಿಭಾಗದಲ್ಲಿನ ತೀವ್ರ ಸ್ಪರ್ಧೆಯಿಂದಾಗಿ BSNL ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಸಚಿವರು ಮಾಹಿತಿ ನೀಡಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ