LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

2ನೇ ಮದುವೆ ರಹಸ್ಯ ಬಿಚ್ಚಿಟ್ಟ ಟಾಲಿವುಡ್ ನಟಿ ಸಮಂತಾ

ಮುಂಬೈ: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ರುತ್ ಪ್ರಭು ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ.

ವಿಚ್ಛೇದನದ ಬಳಿಕ ಸಮಂತಾ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆನ್ನಲಾದ ಸುದ್ದಿಯು ಭಾರಿ ಸದ್ದು ಮಾಡಿತ್ತು. ಆದರೆ ಇದೀಗ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಮಂತ 2ನೇ ಮದುವೆ ಕುರಿತಾಗಿ ತಮ್ಮ ಅನಿಸಿಕೆಯನ್ನು ಬಿಚ್ಚಿಟ್ಟಿದ್ದಾರೆ.

ಸಮಂತಾ ರುತ್ ತಮ್ಮ ಇನ್ಟಗ್ರಾಮ್ ಖಾತೆಯಲ್ಲಿ ಫೋಟೋ ಹಾಕುವುದು ಅಥವಾ ಆಸ್ಕ್ ಮಿ ಎನಿಥಿಂಗ್ ಸೆಶನ್‌ಗಳ ಮೂಲಕ ಸದಾ ಫ್ಯಾನ್ಸ್‌ ಜೊತೆಗೆ ಕನೆಕ್ಷನ್ ಇಟ್ಟುಕೊಂಡಿರುತ್ತಾರೆ.

ಡಿ. 17 ರಂದು ಅವರು ಅಭಿಮಾನಿಗಳಿಗೆ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪ್ರಶ್ನೆ ಮತ್ತು ಉತ್ತರ ಕೇಳುವ ಸಮಯ ಎಂದು ಬರೆದು ಹಾಕಿದ್ದರು. ಈ ವೇಳೆ ಅಭಿಮಾನಿಯೊ​ಬ್ಬರು ಎರಡನೇ ಮದುವೆ ಬಗ್ಗೆ ಯೋಚನೆ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇದ್ದಕ್ಕೆ ಉತ್ತರ ನೀಡಿದ ಸಮಂತಾ, ಡಿವೋರ್ಸ್ ನಂತರ ನಾನು ಯಾವುದೇ ಕಾರಣಕ್ಕೂ ಮರು ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ. ಎರಡನೇ ಮದುವೆ ಆಗೋದು ನನ್ನ ಪ್ರಕಾರ ವೇಸ್ಟ್. ಆ ಮದುವೆಯೂ ಮುರಿದು ಬೀಳೋಲ್ಲ ಅನ್ನೋದು ಏನು ಗ್ಯಾರಂಟಿ ಎನ್ನುವ ಸಮಂತಾ. ಅಭಿಮಾನಿಗಳು ಮತ್ತು ಮಾಧ್ಯಮದವರು ಪದೇ ಪದೇ 2ನೇ ಮದುವೆಯ ಬಗ್ಗೆ ಕೇಳುತ್ತಿದ್ದ ಪ್ರಶ್ನೆಗೆ ಒಂದೇ ಮಾತಿನ ಮೂಲಕ ಖಡಕ್ ಉತ್ತರ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST