LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

2000 ರೂಪಾಯಿ ನೋಟು ಹಿಂತೆಗೆತ: ಚಲಾವಣೆಯಲ್ಲಿದ್ದ ಕರೆನ್ಸಿ ಮೊತ್ತ 1.54 ಲಕ್ಷ ಕೋಟಿ ರೂಪಾಯಿ ಇಳಿಕೆ!

2000 ರೂಪಾಯಿ ನೋಟನ್ನು ಆರ್ ಬಿಐ ಹಿಂಪಡೆಯುತ್ತಿರುವುದರ ಪರಿಣಾಮ ಚಲಾವಣೆಯಲ್ಲಿದ್ದ ಕರೆನ್ಸಿಗಳು 1.54 ಲಕ್ಷ ಕೋಟಿ ರೂಪಾಯಿಯಷ್ಟು ಕುಸಿತ ಕಂಡಿದೆ. ನವದೆಹಲಿ: 2000 ರೂಪಾಯಿ ನೋಟನ್ನು ಆರ್ ಬಿಐ ಹಿಂಪಡೆಯುತ್ತಿರುವುದರ ಪರಿಣಾಮ ಚಲಾವಣೆಯಲ್ಲಿದ್ದ ಕರೆನ್ಸಿಗಳು 1.54 ಲಕ್ಷ ಕೋಟಿ ರೂಪಾಯಿಯಷ್ಟು ಕುಸಿತ ಕಂಡಿದೆ.
ಇದು ಜುಲೈ. 28 ವರೆಗಿನ ಅಂಕಿ-ಅಂಶವಾಗಿದೆ. ಈ ಕುಸಿತಕ್ಕೆ 2000 ರೂಪಾಯಿ ಮುಖಬೆಲೆಯ ನೋಟುಗಳ ಹಿಂತೆಗೆತವೇ ಸಂಪೂರ್ಣ ಕಾರಣವಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ. ಇದೇ ರೀತಿಯ ಮಧ್ಯ ವಾರ್ಷಿಕ ಕುಸಿತದ ಟ್ರೆಂಡ್ ಈ ಹಿಂದಿನ ವರ್ಷಗಳಲ್ಲೂ ಕಂಡುಬಂದಿತ್ತು.

ಆದರೆ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ಕುಸಿತದ ಪ್ರಮಾಣ ತುಸು ಹೆಚ್ಚಾಗಿಯೇ ಇದ್ದು, ಈ ಹೆಚ್ಚಾಗಿರುವುದರ ಪರಿಣಾಮದ ಹಿಂದಿನ ಕಾರಣ 2000 ರೂಪಾಯಿ ಮುಖಬೆಲೆಯ ನೋಟುಗಳ ಹಿಂತೆಗೆತ ಎಂದು ಹೇಳಲಾಗುತ್ತಿದೆ.ಶೇ.88 ರಷ್ಟು 2000 ರೂಪಾಯಿ ನೋಟುಗಳು ಬ್ಯಾಂಕ್ ಗಳಿಗೆ ವಾಪಸ್: ಆರ್ ಬಿಐ2022 ರಲ್ಲಿ ಮೇ.20 ಹಾಗೂ ಜು.29 ಅವಧಿಯಲ್ಲಿ ಒಟ್ಟು ಕರೆನ್ಸಿಯಲ್ಲಿನ ಚಲಾವಣೆ 41,000 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡಿತ್ತು. 2021 ರಲ್ಲಿ ಮೇ.21- ಜು.30 ಅವಧಿಯಲ್ಲಿ 17,000 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡಿತ್ತು. ಆದರೆ ಈ ವರ್ಷ ಒಟ್ಟು ಚಲಾವಣೆಯಲ್ಲಿರುವ ಕರೆನ್ಸಿಯ ಪೈಕಿ ಶೇ.4.4 ರಷ್ಟು ಕುಸಿತ ದಾಖಲಾಗಿದೆ. ನಿಖರ ಅಂಕಿ-ಅಂಶಗಳ ಪ್ರಕಾರ, ಮೇ.19 ರ ವರೆಗೆ 34.78 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಕರೆನ್ಸಿ ಚಲಾವಣೆ ಜು.28 ವೇಳೆಗೆ 2000 ರೂಪಾಯಿ ಮುಖಬೆಲೆಯ ನೋಟುಗಳ ಹಿಂತೆಗೆತ ಘೋಷಣೆಯ ಬಳಿಕ 33.24 ಲಕ್ಷ ಕೋಟಿಗಳಿಗೆ ಇಳಿಕೆಯಾಯಿತು ಎಂದು ತಿಳಿದುಬಂದಿದೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವಕರು, ಬಡವರು, ಮಹಿಳೆಯರು ಮತ್ತು ರೈತರ ಮೇಲೆ ಕೇಂದ್ರೀಕರಿಸಲು ಬಿಜೆಪಿ ಅಭಿಯಾನ : ಪ್ರಧಾನಿ ಮೋದಿಪ್ರಥಮ ಬಾರಿಗೆ ಹೊರಗುತ್ತಿಗೆಯಲ್ಲಿ ಮೀಸಲಾತಿ ಜಾರಿ : ಸಿದ್ದರಾಮಯ್ಯಮಹಿಳೆಯ ಮೇಲೆ ಕರಡಿಗಳ ದಾಳಿತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಬೋಂಡಾ ಮಣಿ ನಿಧನನಾಡಿದ್ದು, ಬಿಜೆಪಿ ನೂತನ ರಾಜ್ಯ ಪದಾಧಿಕಾರಿಗಳ ಸಭೆ- ಬಿ.ವೈ.ವಿಜಯೇಂದ್ರಅತಿಯಾಗಿ ತಂಪು ಪಾನೀಯ ಸೇವಿಸುತ್ತೀರಾ..? - ಇನ್ನು ಮುಂದೆ ಇರಲಿ ಎಚ್ಚರ..!ಅತ್ಯಂತ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್‌ : ಮಾರುಕಟ್ಟೆಗೆ ಎಂಟ್ರಿ ಕೊಡಲಿಗೆ ಕಿಯಾ ಸೋನೆಟ್ 2024 ಫೇಸ್‌ಲಿಫ್ಟ್ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಚುನಾಯಿತ ಸಂಸ್ಥೆಯನ್ನು ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯಉಡುಪಿ: ಮಲ್ಪೆಯ ಮೀನುಗಾರರ ಬಲೆಗೆ ಬಿದ್ದ 400 ಕೆ ಜಿ ತೂಕದ ಬೃಹತ್ ಮೀನುಉಡುಪಿ: ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಮೆಸ್ಕಾಂ ಲೈನ್‌ಮ್ಯಾನ್ ಸಾವು