LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಂದೂಕುಧಾರಿಗಳಿಂದ 215 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರ ಅಪಹರಣ

ನೈಜೀರಿಯಾದ ನೈಜರ್ ರಾಜ್ಯದ ಅಲ್ವಾರದ ಪಾಪಿರಿ ಸಮುದಾಯದಲ್ಲಿರುವ ಸೇಂಟ್ ಮೇರಿ ಕ್ಯಾಥೋಲಿಕ್ ಶಾಲೆಗೆ ಶುಕ್ರವಾರ ಮುಂಜಾನೆ ನುಗ್ಗಿದ ಬಂದೂಕುಧಾರಿಗಳು ಕನಿಷ್ಠ 215 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಅಪಹರಿಸಿದ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ನೈಜೀರಿಯಾ ಕ್ರಿಶ್ಚಿಯನ್ ಅಸೋಸಿಯೇಷನ್ (CAN) ಮಾಹಿತಿ ನೀಡಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ಸಾಮೂಹಿಕ ಶಾಲಾ ಅಪಹರಣಗಳಲ್ಲೊಂದಾಗಿದೆ.

ಘಟನೆ ವೇಳೆ ಕೆಲ ವಿದ್ಯಾರ್ಥಿಗಳು ಅಪಹರಣಕಾರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಅನೇಕ ಮಕ್ಕಳ ಪತ್ತೆಯ ಮಾಹಿತಿ ಇನ್ನೂ ದೊರಕಿಲ್ಲ. ಕುಟುಂಬಗಳು ಶಾಲೆಯ ಬಳಿ ಜಮಾಯಿಸಿ ಆತಂಕದಿಂದ ಕಣ್ಣೀರಿಡುತ್ತಿವೆ. ಗುಪ್ತಚರ ಎಚ್ಚರಿಕೆಗಳಿದ್ದರೂ ಶಾಲೆಯನ್ನು ಪುನರಾರಂಭಿಸಿದ್ದು ದೊಡ್ಡ ನಿರ್ಲಕ್ಷ್ಯ ಎಂದು ನೈಜ‌ರ್ ರಾಜ್ಯ ಸರ್ಕಾರ ಸಂಸ್ಥೆಯನ್ನು ಟೀಕಿಸಿದೆ. ಭದ್ರತಾ ಸಿಬ್ಬಂದಿಯ ಮೇಲೂ ದಾಳಿಕೋರರು ಗುಂಡು ಹಾರಿಸಿದ ಮಾಹಿತಿ ಲಭ್ಯವಾಗಿದೆ.

ಈ ಘಟನೆ ಉತ್ತರ ನೈಜೀರಿಯಾದಲ್ಲಿ ಹೆಚ್ಚುತ್ತಿರುವ ಅಪಹರಣಗಳ ಸರಣಿಗೆ ಮತ್ತೊಂದು ಉದಾಹರಣೆ. ವಾರದ ಆರಂಭದಲ್ಲೇ ಕೆಬ್ಬಿ ರಾಜ್ಯದಲ್ಲಿ 25 ವಿದ್ಯಾರ್ಥಿನಿಯರನ್ನು ಮತ್ತು ಕ್ವಾರಾದಲ್ಲಿ 38 ಜನರನ್ನು ಅಪಹರಿಸಿದ ಘಟನೆಗಳು ಸಂಭವಿಸಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026