ಬೆಂಗಳೂರು: ದತ್ತು ಪಡೆದಿದ್ದ ಪಾಲ್ತು ನಾಯಿ “ಬೋಂಗೋ” ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದು ಯಾರಿಗಾದರೂ ನಾಯಿ ಕಂಡುಬಂದರೆ ಅದರ ಪೋಟೋ, ಸ್ಥಳ ಗುರುತಿಸಿದವರಿಗೆ 25 ಸಾವಿರ ರೂ. ಬಹುಮಾನ ನೀಡಲಾಗುವದೆಂದು ಪ್ರಾಣಿ ಪ್ರಿಯೆ ಸ್ವರ್ಣಿಮ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೋಂಗೋ ಬೀದಿ ನಾಯಿ ಶಿಶುವಾಗಿದ್ದಾಗ ರಸ್ತೆ ಅಪಘಾತದಲ್ಲಿ ಭಾರೀ ಗಾಯಗೊಂಡಿದ್ದರ ಸ್ಥಿತಿಯಲ್ಲಿ ವೈದ್ಯಕೀಯ ಆರೈಕೆ ಮಾಡಿ ರಕ್ಷಿಸಲಾಗಿತ್ತು. ಹಾಗೂ 2021ರಲ್ಲಿ ಅನೂಭವ್ ಕಬ್ರಾ (ಸ್ವಯಂ ಉದ್ಯೋಗಿ) ಮತ್ತು ಕೀರ್ತಿ ಲಾಭ್ (ಉದ್ಯೋಗಿ, ಟೈಟನ್ ಕಂಪನಿ) ಅವರು ದತ್ತು ಪಡೆದಿದ್ದರು. ಸುಮಾರು ಐದು ವರ್ಷ ಮನೆಯಲ್ಲಿ ಬೆಳೆಸಿದ ನಂತರ, 1 ಆಗಸ್ಟ್ 2025ರಂದು ಬೋಂಗೋ ಮನೆವರನ್ನು ತೊರೆದುಹೋಗಲಾಗಿದೆ ಎಂದು ದತ್ತುಪಡೆದವರು ಆರೋಪಿಸಲಾಗಿದೆ.
ಬೋಂಗೋ ನಾಯಿ ಕಾಣೆಯಾಗಿರುವ ಬಗ್ಗೆ ಬೆಂಗಳೂರಿನ ಜೆಪಿನಗರದ ಪುಟ್ಟೇನಹಳ್ಳಿ ಪೋಲೀಸ್ ಠಾಣೆಯಲ್ಲಿ FIR ಪ್ರಕರಣ ದಾಖಲಿಸಲಾಗಿದೆ. ಆದರೆ ಪೋಲೀಸರು ನಾಯಿಯನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿ ಸಭೂಬು ಹೇಳುತ್ತಿದ್ದಾರೆ. ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ, ಆರೋಪಿಯು ಗೊಟ್ಟಿಗೆರೆ, ರಾಯಲ್ ಕೌಂಟಿ ರಸ್ತೆಯಲ್ಲಿ ಬೋಂಗೋ ಶ್ವಾನ ಕಾಣೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಬೋಂಗೋ ನಾಯಿ ನಾಪತ್ತೆ ಹುಡುಕಾಟ,ಬದುಕಿದೆಯೊ OR ಇಲ್ಲವೊ?
ಕಳೆದ 3 ತಿಂಗಳಿಂದ ಬೋಂಗೊ ನಾಯಿ ನಾಪತ್ತೆಯಾಗಿದ್ದು, ಸ್ವಯಂಸೇವಕರು ಮತ್ತು ರಕ್ಷಕರು ದಿನ ನಿತ್ಯ ನಗರದೆಲ್ಲೆಡೆ ಹುಡುಕುತ್ತಿದ್ದಾರೆ. ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಸಮಯ ಕಳೆದಿರುವುದರಿಂದ, ಬೋಂಗೋ ಬೆಂಗಳೂರು ನಗರದಲ್ಲಿ ಯಾವುದೇ ಭಾಗದಲ್ಲಿ ಇರಬಹುದು, ದೂರಕ್ಕೆ ಹೋಗಿರಬಹುದು ಅಥವಾ ಯಾರಾದರೂ ತೆಗೆದುಕೊಂಡಿರಬಹುದು, ಇಲ್ಲದೆಯೂ ಇರಬಹುದೆಂದು ಅನುಮಾನವನ್ನು ವ್ಯಕ್ತಪಡಿಸಿದರು.
ಬೋಂಗೋಗೆ ಆರೋಗ್ಯ ಸಮಸ್ಯೆಗಳಿರುವುದರಿಂದ, ಅವನು ಬೀದಿಯಲ್ಲಿ ಬದುಕಲು ಅಸಮರ್ಥ. ಬದುಕಿರುವ ಸಾಧ್ಯತೆಗಳು ಹೆಚ್ಚು ಎಂದರು.
ಬೋಂಗೋ ಪತ್ತೆ ವೈಫಲ್ಯ, ಕಾನೂನು ಗೊಂದಲ:
ಇತ್ತೀಚಿನ ಪ್ರಾಣಿ ಸಂಬಂಧಿತ ವಿಷಯಗಳ ಬಗ್ಗೆ ಉನ್ನತ ಮಟ್ಟದ ನ್ಯಾಯಾಲಯದ ಆದೇಶಗಳ ಪರಿಣಾಮವಾಗಿ ಜಾರಿ ಸಂಬಂಧಿತ ಗೊಂದಲ ಉಂಟಾಗಿದ್ದು, ಪ್ರಾಣಿ ಕ್ರೌರ್ಯ ಮತ್ತು ತೊರೆದ ಘಟನೆಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಕುಸಿತ ಕಂಡುಬಂದಿದೆ. ಈ ಕಾನೂನು ಅನಿಶ್ಚಿತತೆ ಅನುತ್ತರದಾಯಿಯಾಗಿ ತಮ್ಮ ಪ್ರಾಣಿಗಳನ್ನು ತೊರೆದರೂ ಕೂಡ ತಕ್ಷಣದ ಪರಿಣಾಮವಿಲ್ಲ ಎಂದು ಕೆಲವು ಮಾಲೀಕರಿಗೆ ಉತ್ತೇಜನ ನೀಡುತ್ತಿದೆ.
ಪ್ರಾಣಿಪ್ರಿಯರ ಉದ್ದೇಶಗಳು:
• ದತ್ತುವಿನಲ್ಲಿದ್ದ ಬೋಂಗೊ ನಾಯಿ ತೊರೆದುಹೋಗಿರುವ ಘಟನೆ ಹಾಗೂ ಕಾಣೆಯಾದ ದಿನಾಂಕಗಳ ಸಂಪೂರ್ಣ ವೇಳಾಪಟ್ಟಿ
• ಆರೋಪಿಯ ಒಪ್ಪಿಗೆ ಹಾಗೂ ತೊರೆದುಹೋದ ಸ್ಥಳ (ರಾಯಲ್ ಕೌಂಟಿ ರಸ್ತೆ, ಗೊಟ್ಟಿಗೆರೆ)
• FIR ಸಂಖ್ಯೆ 0277/2025 ಅಡಿಯಲ್ಲಿ ಪೊಲೀಸ್ ಕ್ರಮಗಳು
• ಬೋಂಗೋದ ವೈದ್ಯಕೀಯ ದುರ್ಬಲತೆ
• ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೂ ಖ್ಯಾರೆ ಎನ್ನದ ಆರೋಪಿಗಳು.
• ಬಿಬಿಎಂಪಿ ಹಾಗೂ ಜಾರಿ ಸಂಸ್ಥೆಗಳ ವೈಫಲ್ಯ
• ದೇಶವ್ಯಾಪಿ ತುರ್ತು ಮಾಹಿತಿ ಹಾಗೂ ನ್ಯಾಯಕ್ಕಾಗಿ ಮನವಿ
ರಾಜ್ಯ, ಬೆಂಗಳೂರಿನಲ್ಲಿ ಇದು ಕೇವಲ ಒಂದು ನಾಯಿ ಕಾಣೆಯಾದ ಪ್ರಕರಣವಲ್ಲ, ಇಂತಹ ಅನೇಕ ಪ್ರಕರಣಗಳು ಈಗಾಗಲೇ ನಡೆದು ಹೋಗಿವೆ. ಇದು ಭಾರತದ ಪ್ರಾಣಿ ಕಲ್ಯಾಣ ಕಾನೂನು, ಜಾರಿ ಹೊಣೆಗಾರಿಕೆ ಹಾಗೂ ಪಾಲ್ತು ಪ್ರಾಣಿ ಮಾಲೀಕರ ನೈತಿಕ ಜವಾಬ್ದಾರಿಗಳ ಪರೀಕ್ಷೆಯಾಗಿದೆ.
ಸಾರ್ವಜನಿಕರಿಗೆ ಮನವಿ:
ಯಾರಾದರೂ ಬೋಂಗೋಗೆ ಸಂಬಂಧಿಸಿದ ವಿಶ್ವಾಸಾರ್ಹ ಮಾಹಿತಿ, CCTV ದೃಶ್ಯಗಳು, ದೃಶ್ಯಾವಳಿ ಅಥವಾ ಸುಳಿವುಗಳಿದ್ದರೆ ತಕ್ಷಣ ಸ್ವರ್ಣಿಮಾ ನಿಶಾಂತ್
ಫೋನ್: 74831 51270 ಗೆ ಮಾಹಿತಿ ನೀಡಬಹುದು. ಮೂರು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿರುವುದರಿಂದ, ಬೋಂಗೋ ಈಗ ಬೆಂಗಳೂರಿನ ಯಾವುದೇ ಪ್ರದೇಶದಲ್ಲಿರಬಹುದು ಎನ್ನಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಪ್ರಾಣಿ ಕಲ್ಯಾಣ ಉಪಕ್ರಮದ ಆಯೋಜಕಿ ರಕ್ಷೆ ವಾಹಿನಿ, ಪ್ರಾಣಿ ರಕ್ಷಕರಾಗಿ ವಕೀಲರು ಸೇರಿದಂತೆ ಅನೇಕ ಪ್ರಾಣಿ ಪ್ರಿಯರು ಉಪಸ್ಥಿತರಿದ್ದರು.