LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಲೋಕಾಯುಕ್ತದಲ್ಲಿ ಹಲವು ಹುದ್ದೆಗಳು: ಪಿಯುಸಿ ಪಾಸ್ ಆದವರಿಗೂ ಅವಕಾಶ..! ಅರ್ಜಿ ಸಲ್ಲಿಸಲು ನ. 29 ಕೊನೆಯ ದಿನ

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್ ಸಿ ಹುದ್ದೆ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇದ್ದು, ಅದರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಪಿಯುಸಿ ಪಾಸ್ ಆದವರಿಗೂ ಅವಕಾಶ ಇದ್ದು, ಕ್ಲರ್ಕ್‌ ಕಂ ಟೈಪಿಸ್ಟ್ ಹುದ್ದೆಗಳು ಖಾಲಿ ಇದೆ. ಉಳಿಕೆ ಮೂಲ ವೃಂದದಲ್ಲಿ 16 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದದಲ್ಲಿ 14 ಹುದ್ದೆಗಳು ಖಾಲಿ ಇದೆ.

ದ್ವಿತೀಯ ಪಿಯುಸಿ ಪಾಸ್ ಆಗಿದ್ದು, ಅದರ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಪಾಸ್ ಆಗಿರಬೇಕು.

ಕನಿಷ್ಟ 18ರಿಂದ ಗರಿಷ್ಟ 38 ವರ್ಷದ ಒಳಗಿನ ವಯೋಮಾನದವರಿಗೆ ಅವಕಾಶ ಕಲ್ಪಿಸಲಾಗಿದೆ. ವಯೋಮಾನದಲ್ಲಿ ನಿಯಮಾನುಸಾರ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-11-2024

ವೇತನ ಶ್ರೇಣಿ- ಮಾಸಿಕ ರೂ. 31,100/- ರಿಂದ 67,600/- ರೂ. ವರೆಗೆ

ಅರ್ಹತೆ ಇರುವ ಆಕಾಂಕ್ಷಿ ಅಭ್ಯರ್ಥಿಗಳು ಲೋಕಾಯುಕ್ತ ಸಂಸ್ಥೆಯ ಅಂತರ್ಜಾಲಕ್ಕೆ ನೇರವಾಗಿ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST