LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ- ಹೋರಾಡಿ ಕೊನೆಗೂ IAS ಆದ ಇರಾ ಸಿಂಘಾಲ್

ಉತ್ತರ ಪ್ರದೇಶ : ಯುಪಿಎಸ್ ಸಿ ಪರೀಕ್ಷಾ ಸಾಧಕರಲ್ಲಿ ದಿವ್ಯಾಂಗ ಐಎಎಸ್ ಅಧಿಕಾರಿ UPSC ಟಾಪರ್ ಇರಾ ಸಿಂಘಾಲ್. ದೈಹಿಕ ನ್ಯೂನತೆಗಳನ್ನು ಮೀರಿ ಸಾಧನೆಯ ಶಿಖರವೇರಿರುವ ಇರಾ ಅವರ ಸ್ಪೂರ್ತಿದಾಯಕ ಕಥೆ ಇದು.

ಮೀರತ್ ನಿವಾಸಿಯಾಗಿರುವ ಇರಾ ಸಿಂಘಾಲ್ 2014ರ ಬ್ಯಾಚ್ ನ ಟಾಪರ್ ಆಗಿದ್ದಾರೆ. ಅವರು ಸ್ಕೋಲಿಯೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು.ದೈಹಿಕ ಸಾಮರ್ಥ್ಯ ಇಲ್ಲದ ಇರಾ ಸಿಂಘಾಲ್ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಮಾತ್ರವಲ್ಲದೆ, ಅಗ್ರಸ್ಥಾನವನ್ನೂ ಪಡೆದಿದ್ದಾರೆ.

ಇರಾ ಸಿಂಘಾಲ್ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ಜನಿಸಿದರು. ನಂತರ ಅವರ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತು. ಇರಾ ದೆಹಲಿಯ ಸುಭಾಷ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದಾರೆ. ಮ್ಯಾನೇಜ್ ಮೆಂಟ್ ಸ್ಟಡೀಸ್ ಫ್ಯಾಕಲ್ಟಿಯಿಂದ ಎಂಬಿಎ ಮಾಡುತ್ತಿರುವಾಗ ಇರಾ ಕೆಲ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇದರಿಂದ ತೃಪ್ತರಾಗದ ಆಕೆ UPSCಗೆ ತಯಾರಿ ನಡೆಸಲು ನಿರ್ಧರಿಸಿದರು.

ಬಾಲ್ಯದಿಂದಲೂ ಡಿಎಂ (ಜಿಲ್ಲಾಧಿಕಾರಿ) ಅಧಿಕಾರ ಮತ್ತು ಜವಾಬ್ದಾರಿಗಳಿಂದ ಪ್ರಭಾವಿತಳಾದ ಆಕೆ ದೊಡ್ಡವರಾದ ಮೇಲೆ ಡಿಎಂ ಆಗಬೇಕೆಂಬ ಆಸೆಯನ್ನೂ ಹೊಂದಿದ್ದಳು. 2010, 2011, 2013ರಲ್ಲಿ ಯುಪಿಎಸ್ ಸಿ ತೇರ್ಗಡೆಯಾಗಿದ್ದರು. ಆದರೆ ಅಂಗವಿಕಲತೆಯಿಂದಾಗಿ ಹುದ್ದೆ ಸಿಕ್ಕಿರಲಿಲ್ಲ. ಈ ನಿರ್ಧಾರವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ, ಸಿಎಟಿಯಲ್ಲಿ ಪ್ರಶ್ನಿಸಿದರು. ಟ್ರಿಬ್ಯೂನಲ್ 2014 ರಲ್ಲಿ ಇರಾ ಪರವಾಗಿ ತೀರ್ಪು ನೀಡಿತು. ಅದರ ನಂತರ ಅವರು ಪೋಸ್ಟಿಂಗ್ ಪಡೆದರು. ಆದರೆ ಅವರು ಮತ್ತೆ UPSC ಪರೀಕ್ಷೆಯನ್ನು ನೀಡಲು ಯೋಚಿಸಿದರು. ಅವರು 2014 ರಲ್ಲಿ ಅಖಿಲ ಭಾರತಕ 1ನೇ ರ್ಯಾಂಕ್ ಪಡೆದುಕೊಂಡರು.

ತಾನು ಯುಪಿಎಸ್ ಸಿಗೆ ತಯಾರಿ ನಡೆಸುತ್ತಿದ್ದಾಗ ಜನರು ಗೇಲಿ ಮಾಡುತ್ತಿದ್ದರು ಎಂದು ಇರಾ ಕಷ್ಟದ ದಿನಗಳನ್ನು ಸ್ಮರಿಸುತ್ತಾರೆ. ಸರಿಯಾಗಿ ನಡೆಯಲು ಬಾರದವಳಿಗೆ ಯುಪಿಎಸ್ ಸಿಯಿಂದ ಏನು ಸಿಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಇರಾ ಇಡೀ ದೇಶಕ್ಕೇ ಮೊದಲ ರ್ಯಾಂಕ್ ಪಡೆಯುವ ಮೂಲಕ ಅಂತಹವರಿಗೆ ತಕ್ಕ ಉತ್ತರವನ್ನು ನೀಡಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026