ಧಾರವಾಡ ಫೆ 24:* ನಗರದ ಕೆಸಿಡಿ ಕಾಲೇಜು ಆವರಣದಲ್ಲಿ ಇಂದು (ಫೆ.24) ನಡೆದ ಉದ್ಯೋಗ ಮೇಳದಲ್ಲಿ ಒಟ್ಟು 3,085 ಅಭ್ಯರ್ಥಿಗಳು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳ 122 ಕಂಪನಿಗಳು (ಉದ್ಯೋಗದಾತರು) ಮೇಳದಲ್ಲಿ ಹಾಜರಾಗಿ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿದರು.
ಪ್ರಾಥಮಿಕ ಹಂತದ ಪರಿಶೀಲನೆ ನಂತರ 1,253 ಅಭ್ಯರ್ಥಿಗಳು ಅಂತಿಮ ಪಟ್ಟಿಗೆ (ಶಾರ್ಟ್ ಲಿಸ್ಟ್) ಆಯ್ಕೆಯಾಗಿದ್ದು, ಅಂತಿಮವಾಗಿ 719 ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿ, ಸ್ಥಳದಲ್ಲಿಯೇ ಆಫರ್ ಲೇಟರ್ ನೀಡಲಾಗಿದೆ.
ಉದ್ಯೋಗ ಮೇಳದಲ್ಲಿ ಐಟಿ, ಉತ್ಪಾದನಾ ಕ್ಷೇತ್ರ, ಮಾರಾಟ, ಬ್ಯಾಂಕಿಂಗ್, ಶಿಕ್ಷಣ ಸೇರಿದಂತೆ ಹಲವು ವಿಭಾಗಗಳ ಕಂಪನಿಗಳು ಭಾಗವಹಿಸಿದ್ದವು. ಅಭ್ಯರ್ಥಿಗಳು ತಮ್ಮ ಅರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ವಿವಿಧ ಸಂಸ್ಥೆಗಳ ಸಂದರ್ಶನದಲ್ಲಿ ಪಾಲ್ಗೊಂಡರು ಎಚಿದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.