LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

3,464 ಕೋಟಿ ಬರ ಪರಿಹಾರ - ಬಾಕಿ ಪರಿಹಾರಕ್ಕಾಗಿ ನಾಳೆ ವಿಧಾನಸೌಧದ ಮುಂದೆ ಹೋರಾಟ - ಸಿಎಂ ಸಿದ್ದರಾಮಯ್ಯ ಕರೆ

ಬಾಗಲಕೋಟೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋಷಿಸಿರುವ ಬರಪರಿಹಾರ ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯ ಕಾಲು ಭಾಗವೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದ ಮೇಲೆ ಈಗ ಕೇಂದ್ರ ಸರ್ಕಾರ 3,464 ಕೋಟಿ ರೂ. ಬರ ಪರಿಹಾರ ನೀಡುತ್ತಿದೆ. ಇದು ಬಹಳ ಕಡಿಮೆ ಪ್ರಮಾಣದ ಪರಿಹಾರ. ನಾವು ಕೇಳಿದ್ದು, 18,172 ಕೋಟಿ ರೂಪಾಯಿ. ಕೇಂದ್ರ ನೀಡುತ್ತಿರುವುದು ಕೇವಲ 3,464 ಕೋಟಿ ರೂ. ಇದು ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯ ಕಾಲು ಭಾಗವೂ ಇಲ್ಲ. ಈ ಪರಿಹಾರ ರಾಜ್ಯಕ್ಕೆ ಸಾಲುವುದಿಲ್ಲ. ಹಾಗಾಗಿ ಬರ ಪರಿಹಾರ ಹೆಚ್ಚಿಸುವಂತೆ ನಾಳೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕೇಂದ್ರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆ.31 ರೊಳಗೆ ರೇಷನ್ ಕಾರ್ಡ್ ‘ಇ-ಕೆವೈಸಿ’ ಮಾಡಿಸುವುದು ಕಡ್ಡಾಯ.! ಇಲ್ಲವಾದಲ್ಲಿ ರೇಷನ್ ಬಂದ್ಅರ್ಹತೆ ಇಲ್ಲದ ಸಿಬ್ಬಂದಿ ಬಳಸಿ ವಿಮಾನಗಳ ನಿರ್ವಹಣೆ: ಏರ್ ಇಂಡಿಯಾಗೆ 90 ಲಕ್ಷ ರೂ. ದಂಡನಾಳೆ ಈ ಹಳ್ಳಿಗಳಲ್ಲಿ ಆಗಸ್ಟ್ 24 ರಿಂದ 27 ರವರೆಗೆ ಕರೆಂಟ್ ಇರಲ್ಲ.!ಪಿಎಂ ಕಿಸಾನ್ ಹಣ ಜಮೆಯಾಗಲು ಕೂಡಲೇ ಈ ಕೆಲಸ ಮಾಡಿಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಿದ ಸಿಎಂ, ಡಿಸಿಎಂ, ಹೋಂ ಮಿನಿಸ್ಟರ್ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ: ಈ ಯೋಜನೆಯಡಿ 1.5 ಲಕ್ಷ ಸಹಾಯಧನ, ಈಗಲೇ ಅರ್ಜಿ ಸಲ್ಲಿಸಿ ಲಿಂಕ್ ಇಲ್ಲಿದೆಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ..? ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ..? ಸಿಎಂಗೆ HDK ಕೌಂಟರ್ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದೇಶದ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ಸಂಪುಟ ಅಸ್ತು - 500 ಕೋಟಿ ವೆಚ್ಚದಲ್ಲಿ ನಿರ್ಮಾಣರಾಜ್ಯ ಸರ್ಕಾರ V/S ರಾಜ್ಯಪಾಲ ಸಂಘರ್ಷ - 11 ವಿಧೇಯಕ ವಾಪಸ್ ಕಳುಹಿಸಿದ ರಾಜ್ಯಪಾಲರು..!ನಕಲಿ ಎನ್‌ಸಿಸಿ ಶಿಬಿರ, ಲೈಂಗಿಕ ದೌರ್ಜನ್ಯ ಪ್ರಕರಣ : ಪ್ರಮುಖ ಆರೋಪಿ ಆತ್ಮಹತ್ಯೆ