LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

4 ವರ್ಷದ ಬಾಲಕಿಯನ್ನು ಎಳೆದುಕೊಂಡು ಹೋದ ಚಿರತೆ.

ನವದೆಹಲಿ : 4 ವರ್ಷದ ಬಾಲಕಿಯನ್ನು ಚಿರತೆ ಎತ್ತಿಕೊಂಡು ಹೋಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ನಡೆದಿದೆ.

ಶನಿವಾರ ಸಂಜೆ 7 ಗಂಟೆ ಹೊತ್ತಿಗೆ ಚಿರತೆ ಬಾಲಕಿಯನ್ನು ಎಳೆದುಕೊಂಡು ಹೋಗಿದೆ. ಈ ಅವಘಡದ ಬಗ್ಗೆ ಮಾಹಿತಿ ಪಡೆದ ತಕ್ಷಣ ಆ ಪ್ರದೇಶದ ರೇಂಜ್ ಆಫೀಸರ್ ಉಧಮ್‌ಪುರ ಕಂಟ್ರೋಲ್ ರೂಮ್‌ನಿಂದ ಶೋಧ ತಂಡಗಳನ್ನು ಕಳುಹಿಸಿದ್ದಾರೆ. ಆದರೆ ಇನ್ನೂ ಆ ಬಾಲಕಿಯ ಪತ್ತೆಯಾಗಿಲ್ಲ.

ಈ ಹಿಂದೆ ಇದೇ ಪ್ರದೇಶದಲ್ಲಿ 4 ವರ್ಷದ ಬಾಲಕಿ ಚಿರತೆಗೆ ಬಲಿಯಾದ ಅಹಿತಕರ ಘಟನೆ ನಡೆದಿತ್ತು.ಈ ಕುರಿತು ಉಧಮ್​ಪುರದ ವನ್ಯಜೀವಿ ಇಲಾಖೆಯ ರೇಂಜ್ ಆಫೀಸರ್ ರಾಕೇಶ್ ಶರ್ಮಾ ಮಾಹಿತಿ ನೀಡಿದ್ದು, ನಮಗೆ ಮಾಹಿತಿ ದೊರೆಯುತ್ತಿದ್ದಂತೆ, ನಾವು ಉಧಮ್‌ಪುರ ನಿಯಂತ್ರಣ ಕೊಠಡಿಯಿಂದ ಶೋಧ ತಂಡಗಳನ್ನು ಕಳುಹಿಸಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.

ಈ ಬಗ್ಗೆ ವಿವಿಧ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಜಾಗೃತಿ ಅಭಿಯಾನದ ಮೂಲಕ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಒಬ್ಬಂಟಿಯಾಗಿ ಹೋಗಲು ಬಿಡಬೇಡಿ ಎಂದು ನಾವು ಜನರಿಗೆ ವಿನಂತಿಸುತ್ತಿದ್ದೇವೆ ಎಂದಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು..!ಷರತ್ತು ಉಲ್ಲಂಘನೆ - ಭಾರತದ 71 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ಕರ್ನಾಟಕದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭಶಬರಿಮಲೆ ಮಕರವಿಳಕ್ಕು ಉತ್ಸವ – ಮೊದಲ ದಿನವೇ ಭಕ್ತರ ಸಾಗರಸುಮ್ಮನೆ ICU ಗೆ ದಾಖಲು ಮಾಡುವ ಹಾಗಿಲ್ಲ….ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ನಿಯಮಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಸಾರ್ವತ್ರಿಕ ರಜೆ ಘೋಷಣೆಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ..!ರಾಜ್ಯದ ಪ್ರತಿ ಮನೆಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ: ಶರಣ್ ಪಂಪ್‌ವೆಲ್ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ - ನಾಲ್ಕು ಮಂದಿ ಮೃತ್ಯುಏರ್ ಗನ್, ಚಾಕು ಹಿಡಿದು ಪ್ರಾರ್ಥಮಿಕ ಶಾಲಾ ಮಕ್ಕಳ ಹೊಡೆದಾಟಕ್ಕೆ ಶಿಕ್ಷಕ ವರ್ಗ ತಲ್ಲಣ..!ಜನವರಿ ತಿಂಗಳಂತ್ಯಕ್ಕೆ ಬೆಂಗಳೂರಿನಲ್ಲಿ ಬ್ರಹತ್ಉದ್ಯೋಗ ಮೇಳ - ಮುಖ್ಯಮಂತ್ರಿ ಸಿದ್ದರಾಮಯ್ಯ